Advertisement

ಇಂದು ಡಾ|ಹೆಗ್ಗಡೆ ಪಟ್ಟಾಭಿಷೇಕದ 50ನೇ ವರ್ಧಂತಿ

08:40 AM Oct 24, 2017 | |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ವರ್ಧಂತಿ ಅ. 24ರಂದು ನಡೆಯಲಿದೆ.

Advertisement

800 ವರ್ಷಗಳ ಭವ್ಯ ಇತಿಹಾಸವಿರುವ ಧರ್ಮಸ್ಥಳಕ್ಕೆ ಹೆಗ್ಗಡೆ ಮನೆತನದ ಪರಂಪರೆ ಹಾಸುಹೊಕ್ಕಾಗಿ ಬೆಳೆದುಬಂದಿದೆ. ಇಲ್ಲಿ 20ನೇ ವಯಸ್ಸಿನಲ್ಲಿ 21ನೇ ಧರ್ಮಾಧಿಕಾರಿಗಳಾಗಿ ಪಟ್ಟಾಭಿಷಿಕ್ತರಾದವರು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು. ಪಟ್ಟಾಭಿ ಷೇಕ ವೆಂದರೆ ಆಡಂಬರದ ಸಮಾರಂಭ ವಾಗಿರದೇ ಪರಂಪರಾನುಗತವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಒಂದಿನಿತೂ ಚ್ಯುತಿ ಬಾರದಂತೆ ನಡೆಸಿ ಕೊಂಡು ಬರಲು ಧರ್ಮ ದೇವತೆಗಳು ಕಟ್ಟಪ್ಪಣೆ ಮಾಡಿ ಹೆಗ್ಗಡೆಯವರಿಗೆ ಆದೇಶ‌ ನೀಡಿ ನೇಮಿಸುವುದಾಗಿದೆ. ಅಂದರೆ ಹೊಣೆಯರಿತ ಜವಾಬ್ದಾರಿಕೆಗೆ ಹೆಗ್ಗಡೆಯವರು ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುವ ಮಹತ್ವದ ಘಟನೆ.

ಹಲವರಿಗೆ ದಾರಿದೀಪ
1968ರಲ್ಲಿ ಅ. 24ರಂದು ಹೆಗ್ಗಡೆಯವರಾಗಿ ಪಟ್ಟವೇರಿದ ವೀರೇಂದ್ರ ಹೆಗ್ಗಡೆ ಅವರು ತಮ್ಮ ಬೆಳೊಡೆಯಡಿಯಲ್ಲಿ ಧರ್ಮಸ್ಥಳವನ್ನು ಬೆಳಗು ಎಲ್ಲೆಡೆ ಪಸರಿಸುವಂತೆ ಮಾಡಿದರು. ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿಸಿದರು. ಧರ್ಮ ಕರ್ಮಗಳ ಸಾಕಾರ ಮೂರ್ತಿಯೆನಿಸಿದರು. ಧರ್ಮ ಸಾಹಿತ್ಯ ಶಿಕ್ಷಣ ಕಲೆಯಿಂದ ಜನಪದದ ಅಭಿವೃದ್ಧಿಗೆ ಕಾರಣರಾದರು. ಕ್ಷೇತ್ರದ ಕಾರ್ಯಬಾಹುಳ್ಯವೇ ಸಾಕಷ್ಟಿದ್ದರೂ ಸಮಾಜ ಸೇವೆಯೆಡೆಗೆ ಮುಖ ಮಾಡಿದರು. ಧಾರ್ಮಿಕ ಸೇವೆಗೆ ಮೀಸಲಾಗದೇ ಬಾಳು ಬೆಳಗುವ ಪ್ರೇರಕ ಶಕ್ತಿಯಾದರು. ಸಾಂಸ್ಕೃತಿಕ ಮೌಲ್ಯಗಳನ್ನು ಪೋಷಿಸಿದರು. ಬದುಕಿಗೆ ಆಧಾರಸ್ತಂಭವಾಗುವ ವಿದ್ಯೆ ಕಲಿಸಿದರು. ಮಹಿಳಾ ಸಶಕ್ತೀಕರಣದ ಮೂಲಕ ಸ್ವಾವಲಂಬಿ ಬದುಕಿಗೆ ದಾರಿದೀಪವಾದರು. ಇದೀಗ ಹೆಗ್ಗಡೆ ಯವರ ಪಟ್ಟಾಭಿಷೇಕದ 49 ವಸಂತ ಗಳು ಪೂರ್ಣವಾಗಿ 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಊರ ಮಂದಿ ಸಜ್ಜಾಗಿದ್ದಾರೆ.

ಸಮಾರಂಭ
ಅ. 24ರಂದು ರಾಜ್ಯದ ವಿವಿಧ ಕಡೆ ಗಳಿಂದ ಆಗಮಿಸುವ ಅಭಿಮಾನಿಗಳು ಶುಭ ಹಾರೈಸಲಿದ್ದಾರೆ. ಮೈಸೂರು ಅರ ಮನೆಯ ಯದುವೀರ ದತ್ತ ಒಡೆಯರ್‌,  ಸಚಿವ ಬಿ. ರಮಾನಾಥ ರೈ ಆಗಮಿಸಲಿದ್ದಾರೆ. ಅಪ ರಾಹ್ನ 3.30ರಿಂದ ವೈಶಾಲಿ ಅತಿಥಿಗೃಹ ಬಳಿ ಯಿಂದ ಡಾ| ಹೆಗ್ಗಡೆ ದಂಪತಿಗೆ ವೈಭವದ ಮೆರವಣಿಗೆ ನಡೆಯಲಿದೆ. ವಿವಿಧ ಟ್ಯಾಬ್ಲೋಗಳು ಮನರಂಜಿಸಲಿವೆ. ಆಕರ್ಷಕ ವೇದಿಕೆ ಸಿದ್ಧ ಗೊಂಡಿದೆ. ಧರ್ಮಸ್ಥಳ ಕ್ಷೇತ್ರವನ್ನು ವಿಶಿಷ್ಟ ವಾಗಿ ಅಲಂಕರಿಸಲಾಗಿದೆ. ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ. ಕ್ಷೇತ್ರದ ಸಿಬಂದಿಗೆ ಛದ್ಮವೇಷ ಸ್ಪರ್ಧೆ ನಡೆಯಲಿದೆ. 7 ಮಂದಿ ಹಿರಿಯ ಸಿಬಂದಿಗೆ ಸಮ್ಮಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.