Advertisement
ಪೂಜ್ಯ ಶ್ರೀ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ 70ನೇ ಜನ್ಮದಿನದ ಸಂಭ್ರಮಾಚರಣೆ ಹಾಗೂ ಶ್ರೀ ಜೈನಮಠ ದಾನಶಾಲೆ ಕಾರ್ಕಳ ಇದರ ಪುನರ್ ನಿರ್ಮಾಣದ ಶಿಲಾನ್ಯಾಸ ವಿಧಿ ನೆರವೇರಿಸಿ ಅವರು ಮಾತನಾಡಿದರು.
Related Articles
ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಮೂಡುಬಿದಿರೆ ಹಾಗೂ ಕಾರ್ಕಳವನ್ನು ಕೇಂದ್ರ ಸರಕಾರದ ಜೈನ್ ಸರ್ಕ್ನೂಟ್ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೈಲೂರಿನ ಪರಶುರಾಮ ಪ್ರತಿಮೆ ಸಹಿತ ಎಲ್ಲವನ್ನು ಸೇರಿಸಿ ಪ್ರವಾಸಿ ಕೇಂದ್ರವಾಗಿ ಈ ಭಾಗವನ್ನು ಅಭಿವೃದ್ಧಿಗೊಳಿಸಲಾಗುವುದು, ಜೈನ ಮಠ ನಿರ್ಮಾಣ ಸಂಬಂಧ ಸರಕಾರದಿಂದ ಅನುದಾನ ಒದಗಿಸುವಲ್ಲಿ ಮುಂಚೂಣಿಯಲ್ಲಿ ಶ್ರಮಿಸುವುದಾಗಿ ಅವರು ಹೇಳಿದರು.
Advertisement
ವಿವಿಧ ಜೈನಮಠಗಳ 9 ಮಂದಿ ಭಟ್ಟಾರಕ ಸ್ವಾಮೀಜಿಗಳು ಹಾಗೂ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಂತಾದವರು ಉಪಸ್ಥಿತರಿದ್ದರು. ಎಂ.ಕೆ. ವಿಜಯಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪುಷ್ಪರಾಜ್ ಜೈನ್ ನೂತನ ಮಠದ ಕಿರುಚಿತ್ರದ ವಿವರ ನೀಡಿದರು. ಮುನಿರಾಜ ರೆಂಜಾಳ ನಿರ್ವಹಿಸಿದರು.
ಡಾ| ಎಂ.ಎನ್.ರಿಂದ ತಲಾ 1 ಲಕ್ಷ ರೂ.ಶ್ರೀ ಜೈನ ಧರ್ಮ ಜಿನೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮಠದ ಶಿಲನ್ಯಾಸದಲ್ಲಿ ಪಾಲ್ಗೊಳ್ಳುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಸೌಭಾಗ್ಯ ನಮಗೆ ಬಂದಿದೆ. ಎಲ್ಲ ಭಟ್ಟಾರಕ ಸ್ವಾಮೀಜಿಗಳ ಮಠಗಳಿಗೆ ತಲಾ 1 ಲಕ್ಷ ರೂ. ಸಹಾಯಧನ ನೀಡಿದರು. ಜೈನ ಮಠಕ್ಕೆ 15 ಲಕ್ಷ ರೂ. ಘೋಷಣೆ ಮಾಡಿ, 5 ಲಕ್ಷ ರೂ. ಸ್ಥಳದಲ್ಲಿಯೇ ನೀಡಿದರು. ಹೆಗ್ಗಡೆಯವರಿಂದ ಸ್ವಾಮೀಜಿಗೆ ಸಮ್ಮಾನ
ಗುರುಮನೆಯಲ್ಲಿ ಇರುವ ಗುರು ಸ್ಥಾನದ ಗುರುಗಳನ್ನು ವಿಶೇಷವಾಗಿ ಗುರುತಿಸಬೇಕಿದೆ ಎಂದು ಹೇಳಿದ ಡಾ| ವೀರೇಂದ್ರ ಹೆಗ್ಗಡೆಯವರು 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ವಸ್ತಿ ಶ್ರೀ ಲಲಿತ ಕೀರ್ತಿ ಸ್ವಾಮೀಜಿಯವರನ್ನು ಸಮ್ಮಾನಿಸಿದರು. ಮಠ ನಿರ್ಮಾಣಕ್ಕೆ ಹಲವರು ಆರ್ಥಿಕ ನೆರವನ್ನು ಘೋಷಿಸಿದರು.