Advertisement

ಸಹಕಾರ ಕ್ಷೇತ್ರದ ರಾಜೇಂದ್ರ : ಡಾ|ವೀರೇಂದ್ರ ಹೆಗ್ಗಡೆ

03:30 PM Sep 25, 2022 | Team Udayavani |

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ವಿನೂತನ ಯೋಜನೆಗಳ ಮೂಲಕ ನವಚೈತನ್ಯ ತುಂಬಿ ತನ್ನದೇ ಆದ ಮಾದರಿಗಳನ್ನು ಕೊಡುಗೆಯಾಗಿ ನೀಡಿದ ಸಹಕಾರ ರತ್ನ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ಸಹಕಾರ ಕ್ಷೇತ್ರದ ಶಕ್ತಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

“ಸಹಕಾರ ರತ್ನ’ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಇದರ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧ ಆಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಸೆ. 24ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹಿರಿಯರು ಕಟ್ಟಿದ ಸಹಕಾರ ಕ್ಷೇತ್ರವನ್ನು ಡಾ| ರಾಜೇಂದ್ರ ಕುಮಾರ್‌ ಜೋಪಾನವಾಗಿ ಸಂರಕ್ಷಿಸುವುದರ ಜತೆಗೆ ಏಕಾಗ್ರತೆ, ಅಚಲತೆ, ಪರಿಶ್ರಮದಿಂದ ಬೆಳೆಸುತ್ತಾ ಶಕ್ತಿ ನೀಡಿದವರು. ಇಂದು ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯದ ಮತ್ತು ರಾಷ್ಟ್ರದ ಸಹಕಾರ ಸಂಸ್ಥೆಗಳಿಗೆ ಮಾದರಿಯಾಗಿ ಬೆಳೆದಿದೆ ಎಂದು ಶ್ಲಾ ಸಿದರು.

ಸಮ್ಮಾನ
ಡಾ| ರಾಜೇಂದ್ರ ಕುಮಾರ್‌ ಹಾಗೂ ಅವರ ಪತ್ನಿ ಅರುಣಾ ರಾಜೇಂದ್ರ ಕುಮಾರ್‌ ಅವರನ್ನು ಡಾ| ಹೆಗ್ಗಡೆ ಅವರು ಸಮ್ಮಾನಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಸಾದ ನೀಡಿ, ಶಾಲು ಹೊದೆಸಿ, ಹಾರಾರ್ಪಣೆಗೈದು, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಹರಸಿದರು.

ಜಿಲ್ಲೆಗೆ ಹೆಮ್ಮೆಯ ವಿಚಾರ
ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಅಭಿನಂದನ ಭಾಷಣ ಮಾಡಿ, ಡಾ| ರಾಜೇಂದ್ರ ಕುಮಾರ್‌ ಸಹಕಾರ ಕ್ಷೇತ್ರದ ರಾಜರಾಗಿದ್ದಾರೆ. ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವವಾದುದು. 28 ವರ್ಷಗಳಿಂದ ನಿರಂತರ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಹೊಸ ಇತಿಹಾಸ ಬರೆದಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿ ರುವುದು ಜಿಲ್ಲೆಗೆ ಹೆಮ್ಮೆ ಎಂದರು.

Advertisement

ಮಹತ್ತರ ಕೊಡುಗೆ
ಶಾಸಕ ವೇದವ್ಯಾಸ ಕಾಮತ್‌ ಶುಭಾಶಂಸನೆಗೈದು, ಸಹಕಾರ ಕ್ಷೇತ್ರದಲ್ಲಿ ಯಶಸ್ವಿ ನಾಯಕನಾಗಿ, ಸಾಧಕರಾಗಿ ಮುನ್ನೆಡೆಯುತ್ತಿರುವ ಡಾ| ರಾಜೇಂದ್ರ ಕುಮಾರ್‌ ಬ್ಯಾಂಕಿಂಗ್‌, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದರು.

ಹೊಸ ಕ್ರಾಂತಿ
ಮುಖ್ಯ ಅತಿಥಿಯಾಗಿದ್ದ ಸೌತ್‌ ಇಂಡಿಯಾ ಅದಾನಿ ಗ್ರೂಪ್ಸ್‌ನ ಅಧ್ಯಕ್ಷ ಕಿಶೋರ್‌ ಆಳ್ವ ಅವರು ಡಾ| ರಾಜೇಂದ್ರ ಕುಮಾರ್‌ ಸಹಕಾರ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.

ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಮಾತನಾಡಿ, ಡಾ| ಎಂ.ಎನ್‌.ಆರ್‌. ಸಾಮಾಜಿಕವಾಗಿಯೂ ಮಹತ್ತರ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದರು. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾತನಾಡಿ, ಡಾ| ರಾಜೇಂದ್ರ ಕುಮಾರ್‌ ಸಹಕಾರ ಕ್ಷೇತ್ರದ ಜತೆಗೆ ಸಹಕಾರಿಗಳನ್ನು ಬೆಳೆಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಹಾಗೂ ದಿನೇಶ್‌ ಕೊಪ್ಪ ಅವರನ್ನು ಸಮ್ಮಾನಿಸಲಾಯಿತು.
ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಅಭಯಚಂದ್ರ ಜೈನ್‌, ಬಿ. ನಾಗರಾಜ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ಸಮ್ಮಾನ ಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ಎಸ್‌.ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ರಾಜು ಎಸ್‌. ಪೂಜಾರಿ, ಸಹಕಾರಿ ಯೂನಿಯನ್‌ಗಳ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಪ್ರಸಾದ್‌ ಕೌಶಲ್‌ ಶೆಟ್ಟಿ , ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು. ಅಭಿನಂದನ ಸಮಿತಿ ಅಧ್ಯಕ್ಷ ಶಶಿಕುಮಾರ್‌ ರೈ ಬಾಲೊÂಟ್ಟು ಸ್ವಾಗತಿಸಿ ಪ್ರಸ್ತಾವನೆಗೈದರು. ಕೆ.ಸಿ. ರಾಜೇಶ್‌ ನಿರೂಪಿಸಿದರು.

ಭವ್ಯಸ್ವಾಗತ
ಬೆಂಗಳೂರಿನಿಂದ ಆಗಮಿಸಿದ ಎಂಎನ್‌ಆರ್‌ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾ ಯಿತು. ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇ ಶಕರು, ಅವಿಭಜಿತ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಪ್ರಮುಖರು, ಸಹಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಹಾರಾರ್ಪಣೆಗೈದು, ಪುಷ್ಪಗುತ್ಛ ನೀಡಿ ಸ್ವಾಗತಿಸಿದರು. ವಾಹನ ಮೆರವಣಿಗೆ ಮೂಲಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಬರಮಾಡಿಕೊಳ್ಳಲಾಯಿತು.

ಸಹಕಾರ ಕ್ಷೇತ್ರದಲ್ಲಿ ಧನ್ಯತೆ: ಡಾ| ಎಂ.ಎನ್‌.ಆರ್‌.
ಅಭಿನಂದನೆ ಸ್ವೀಕರಿಸಿದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಗ್ರಾಮೀಣ ಪ್ರದೇಶದ ಒಂದು ಸಣ್ಣ ಸಹಕಾರಿ ಸಂಘದ ಮೂಲಕ ಪ್ರಾರಂಭವಾದ ಸಹಕಾರ ಕ್ಷೇತ್ರದ ಸೇವೆಯಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದೇನೆ. ಸಹಕಾರ ಕ್ಷೇತ್ರದ ಸೇವೆಯಲ್ಲಿ ಧನ್ಯತೆಯನ್ನು ಕಂಡುಕೊಂಡಿದ್ದೇನೆ ಎಂದರು.

ನಾನು ಬದುಕುವುದರ ಜತೆಗೆ ಇತರರನ್ನು ಬದುಕಿಸಬೇಕು, ಬೆಳೆಸಬೇಕು, ಎಲ್ಲರನ್ನು ಒಗ್ಗೂಡಿಸಿ ಕೊಂಡು ಕಾರ್ಯ ನಿರ್ವಹಿಸುತ್ತಾ ಮುನ್ನಡೆಯಬೇಕು. ತಮ್ಮಿಂದ ಸಾಧ್ಯ
ವಾದಷ್ಟು ಇತರರಿಗೆ ಸಹಾಯ ಮಾಡ ಬೇಕು ಎಂಬ ಸಿದ್ಧಾಂತದಡಿಯಲ್ಲಿ ಬೆಳೆದು ಬಂದವನು ನಾನು. ಸಹಕಾರ ಕ್ಷೇತ್ರದಲ್ಲೂ ಇದನ್ನು ಅಳವಡಿಸಿಕೊಂಡು ಸೇವೆ ಮಾಡುತ್ತಾ ಬಂದಿದ್ದೇನೆ. ನನಗೆ ದೊರೆತಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸಹಕಾರಿ ಕ್ಷೇತ್ರಕ್ಕೆ ಉನ್ನತಿಗೆ ಶ್ರಮಿಸಿದ್ದೇನೆ. ಇನ್ನು ಮುಂದೆಯೂ ಇದೇ ರೀತಿ ಮುನ್ನಡೆ ಯುತ್ತೇನೆ ಎಂದು ಹೇಳಿದರು.

ಎಲ್ಲರ ಪ್ರೀತಿ ವಿಶ್ವಾಸವೇ ಶ್ರೀರಕ್ಷೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದುಕೊಂಡು ಆರಂಭಿಸಿರುವ ನನ್ನ ಎಲ್ಲ ಕಾರ್ಯಗಳು ಯಶಸ್ಸನ್ನು ದಾಖಲಿಸಿದ್ದು ಖಾವಂದರ ಪ್ರೇರಣೆ ಶ್ರೀರಕ್ಷೆಯೇ ಇದಕ್ಕೆ ಕಾರಣ. ಮುಖ್ಯಮಂತ್ರಿಯವರು, ಸಚಿವರು, ಉಭಯ ಜಿಲ್ಲೆಗಳ ಎಲ್ಲಾ ಶಾಸಕರಿಗೆ, ಅಧ್ಯಕ್ಷರ ಆಯ್ಕೆಯಲ್ಲಿ ಸಹಕರಿಸಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿಗಳು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ ಉನ್ನತ ಸ್ಥಾನವನ್ನು ಮತ್ತೂಮ್ಮೆ ಪಡೆಯಲು ಸಾಧ್ಯವಾಯಿತು ಎಂದು ಡಾ| ರಾಜೇಂದ್ರ ಕುಮಾರ್‌ ಹೇಳಿದರು.

ಸಾಧಕ ಸಹಕಾರಿ
ಸುಮಾರು 50 ವರ್ಷಗಳಿ ಗಿಂತಲೂ ಅಧಿಕ ಸಮಯದಿಂದ ಸಹಕಾರ ಕ್ಷೇತ್ರದಲ್ಲಿ ಸಾರ್ಥಕ ಸೇವೆಸಲ್ಲಿಸುತ್ತಾ ಬಂದಿರುವ ಡಾ| ರಾಜೇಂದ್ರ ಕುಮಾರ್‌ ನಿರಂತರ 28 ವರ್ಷಗಳಿಂದ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಅದನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವನ್ನು ಬಲಿಷ್ಠವಾಗಿ ಬೆಳೆಸಿದ್ದಾರೆ ಎಂದ ಡಾ| ವೀರೇಂದ್ರ ಹೆಗ್ಗಡೆಯವರು ಅವರಿಂದ ಸಹಕಾರ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಲಭಿಸಲಿ. ಇಂದು ರಾಜ್ಯದ ಆನೇಕ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅಲ್ಲಿಯ ಸಹಕಾರ ಕ್ಷೇತ್ರಕ್ಕೂ ಶಕ್ತಿಯನ್ನು ತುಂಬುವ ಕಾರ್ಯ ಅವರಿಂದ ಆಗಲಿ ಎಂದು ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next