Advertisement

ಕೆಲವರಿಗೆ ಬೆಂಕಿ ಹಚ್ಚುವ ಮತ್ತು ಹತ್ತಿಸುವ ಮನಸ್ಥಿತಿ ಇರುತ್ತದೆ

10:01 AM Dec 23, 2019 | Team Udayavani |

ಮೈಸೂರು: ಪೌರತ್ವ ಕಾಯ್ದೆ ಪ್ರತಿಭಟನೆ ವಿಚಾರವಾಗಿ ಕೆಲವರಿಗೆ ಬೆಂಕಿ ಹಚ್ಚುವ ಮತ್ತು ಹತ್ತಿಸುವ ಮನಸ್ಥಿತಿ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಕಿಡಿಕಾರಿದರು.

Advertisement

ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿನ ಕೆಲವರು, ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡುತ್ತಿವೆ. ಆದರೆ ಜನರು ಇದನ್ನೆಲ್ಲ ತಿರಸ್ಕರಿಸುತ್ತಿದ್ದಾರೆ. ಎಲ್ಲಾ ಭಾರತಿಯರು ಸ್ವಾಗತಿಸಬೇಕಾದ ಕಾನೂನನ್ನು ಹೀಗೆ ಪ್ರತಿಭಟನೆ ಮೂಲಕ ಗೊಂದಲ ಮಾಡಿಸುತ್ತಿರುವುದು ಸರಿಯಲ್ಲ ಎಂದರು.

ಪರಿಸ್ಥಿತಿ ಪ್ರಕ್ಷುಬ್ಧ ಸ್ಥಿತಿಯಲ್ಲಿ ವಿರೋಧ ಪಕ್ಷ ನಾಯಕರ ನಿರ್ಬಂಧ ಹೇರಲಾಗಿತ್ತು. ಕಾನೂನು ಸುವ್ಯವಸ್ಥೆ ಕೆಟ್ಟರೆ ಸಿದ್ದರಾಮಯ್ಯರನ್ನ ಪ್ರಶ್ನೆ ಮಾಡ್ತಿರಾ. ಇಲ್ಲ ಸರ್ಕಾರವನ್ನ ಸರ್ಕಾರವನ್ನು ಪ್ರಶ್ನೆ ಮಾಡ್ತಿರೋ? ಎಂದು ಪ್ರಶ್ನಿಸಿದರು

ಇಲ್ಲಿ ಸರ್ವಾಧಿಕಾರದ ಪ್ರಶ್ನೆಯಲ್ಲ, ನಾವು ಸರ್ವಾಧಿಕಾರದ ಆಡಳಿತ ನಡೆಸುತ್ತಿಲ್ಲ ಇದನ್ನು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಲಿ ಎಂದರು.

ಯಾವ ಹುದ್ದೆಯು ಯಾವ ಸ್ಥಾನವು ಶಾಶ್ವತವಲ್ಲ
ಡಿಸಿಎಂ ಸ್ಥಾನದ ಬಗ್ಗೆ ಪಕ್ಷದಲ್ಲಿನ ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದ್ದರಿಂದ ನಮಗೆ ಮುಜುಗರವಾಗಿಲ್ಲ. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತೆ. ತಮಗೆ ಆ ಸ್ಥಾನ ಸಿಕ್ಕಿಲ್ಲ ಅಂತ ಮಾತನಾಡಿರಬಹುದು ಎಂದರು.

Advertisement

ಸ್ಥಾನಗಳು ಇರುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು.  ಸಚಿವ ಸಂಪುಟ ವಿಸ್ತರಣೆಯನ್ನು ಮುಖ್ಯಮಂತ್ರಿಗಳು ವಿಚಾರ ಮಾಡುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next