Advertisement

ಡಾ. ಚಂದ್ರಶೇಖರ್‌ ಅಧಿಕಾರ ಸ್ವೀಕಾರ

11:36 AM Feb 02, 2017 | |

ಬೆಂಗಳೂರು: ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ಎಚ್‌.ಎಸ್‌. ಚಂದ್ರಶೇಖರ್‌ ಬುಧವಾರ ಅಧಿಕಾರ ಸ್ವೀಕರಿಸಿದರು.

Advertisement

ಅಮೆರಿಕದಲ್ಲಿ ಅರ್ತೋಪ್ಲ್ರಾಸ್ಟಿ ಫೆಲೋಶಿಫ್ ಪಡೆದಿರುವ ಚಂದ್ರಶೇಖರ್‌ ಅವರು, ಮರು ಜೋಡಣೆ ಸೇರಿದಂತೆ ಮೂಳೆಗೆ ಸಂಬಂಧಪಟ್ಟ ಎಲ್ಲಾರೀತಿಯ ಶಸ್ತ್ರಚಿಕಿತ್ಸೆಯ ತಜ್ಞರಾಗಿದ್ದಾರೆ.

ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು, ಆಸ್ಪತ್ರೆಯ ವಿವಿಧ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಂದ್ರಶೇಖರ್‌ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಎರಡನೇ ಅಳಿಯ. 

Advertisement

Udayavani is now on Telegram. Click here to join our channel and stay updated with the latest news.

Next