ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದ್ದೇವರ ವೈಚಾರಿಕತೆ ಜಗತ್ತಿಗೆ ಮಾದರಿಯಾಗಿದೆ ಎಂದು ಕನ್ನಡಪರ ಸಂಘಟನೆ ಒಕ್ಕೂಟದ ತಾಲೂಕು ಅಧ್ಯಕ್ಷ ಜೈರಾಜ ಕೊಳ್ಳಾ ಹೇಳಿದರು.
ಡಾ| ಬಸವಲಿಂಗ ಪಟ್ಟದ್ದೇವರ 68ನೇ ಜನ್ಮದಿನ ಹಾಗೂ ಸುದೈವಿ (ಅನಾಥ) ಮಕ್ಕಳ ಜನ್ಮದಿನಾಚರಣೆ ನಿಮಿತ್ತ ಶನಿವಾರ ಕನ್ನಡ ಪರ ಸಂಘಟನೆ ಒಕ್ಕೂಟದಿಂದ ಬಡ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದ ಅವರು, ಅನಾಥ ಮಕ್ಕಳನ್ನು ಒಪ್ಪಿಕೊಂಡು ಅಪ್ಪಿಕೊಂಡಿರುವ ಭಾಲ್ಕಿಯ ಶ್ರೀಗಳು ತಮ್ಮ ಜನ್ಮದಿನವನ್ನು ಅನಾಥ ಮಕ್ಕಳ ಜನ್ಮದಿನವನ್ನಾಗಿ ಆಚರಿಸುತ್ತಿರುವುದು ಅವರ ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿದೆ. ಇಂತಹ ಗುರುಗಳ ಅನುಕರಣೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ತಾಲೂಕು ಅಧ್ಯಕ್ಷ ರಾಜಕುಮಾರ ಡಾವರಗಾಂವೆ ಮತನಾಡಿ, ಎಲ್ಲ ವರ್ಗದ ಜನರನ್ನು ಅಪ್ಪಿಕೊಂಡು ಪೋಷಿಸುತ್ತಿರುವ ಭಾಲ್ಕಿ ಹಿರೇಮಠದ ಶ್ರೀಗಳು ದೀನ ದಲಿತರ, ಬಡವರ ಆಶಾ ಕಿರಣವಾಗಿದ್ದಾರೆ ಎಂದು ಬಣ್ಣಿಸಿದರು. ಒಕ್ಕೂಟದ ಗೌರವಾಧ್ಯಕ್ಷ ಸಂಗಮೇಶ ಗುಮ್ಮೆ, ಯೇವನ್ ಹಿರಿಗ್ಗೆ, ಪ್ರಧಾನ ಕಾರ್ಯದರ್ಶಿ ಸತೀಶ ಮಡಿವಾಳ, ಮಾಳಸಕಾಂತ ವಾಘೇ, ಶಿವಕುಮಾರ ಬಂಡೆ, ಸಚಿನ ಅಂಬೇಸಿಂಗೆ, ಸುಧಾಕರ ಅತಿವಾಳಕರ, ಪ್ರೇಮ ವರ್ಮಾ, ಸುನೀಲ ಹಲಗೆ, ಕ್ರಿಸ್ಟಫರ್, ಲೋಕೇಶ, ಯಶವಂತ ವಾಘಲೆ, ದೇಸಾಯಿ,
ಆಕಾಶ, ಅಮೂಲ, ರೂಬೀನ, ಸಚೀನ, ಪ್ರಶಾಂತ ಏಣಕೂರೆ, ಇಮ್ಯಾನುವೇಲ್ ಮೇತ್ರೆ ಇದ್ದರು.