Advertisement

ರೈತರ ಹಿತ ಕಾಯ್ದ ಮೊದಲ ನಾಯಕ

03:33 PM Apr 06, 2019 | Team Udayavani |

ವಿಜಯಪುರ: ಸರಳ ವ್ಯಕ್ತಿತ್ವದ ಡಾ| ಬಾಬು ಜಗಜೀವನರಾಂ ಅವರು ರಾಷ್ಟ್ರ ಕಂಡ ಮಹಾನ್‌ ನಾಯಕರಲ್ಲಿ ಒಬ್ಬರಾಗಿದ್ದರು. ಹಸಿರು ಕ್ರಾಂತಿ ಹರಿಕಾರ ಎನಿಸಿಕೊಂಡಿರುವ ಅವರು ರೈತರ ಹಿತ
ಕಾಯ್ದ ಮೊದಲ ನಾಯಕ ಎಂದು ಸಂತೋಷ ಬಾಲಗಾಂವಿ ಹೇಳಿದರು.

Advertisement

ನಗರದದ ಡಾ| ಬಾಬು ಜಗಜೀವನರಾಂ ವೃತ್ತದಲ್ಲಿ ಶಿವಶರಣ ಹರಳಯ್ಯ ಸಮಾಜ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ| ಬಾಬು
ಜಗಜೀವನರಾಂ ಅವರ 112ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಮೇಶ ಹೊನಮೋರೆ ಮಾತನಾಡಿ, ರಾಷ್ಟ್ರದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ರಾಜಕಾರಣ ಮಾಡಿ ಇನ್ನೊಬ್ಬರಿಗೆ ಮಾದರಿಯಾದ ವ್ಯಕ್ತಿ. ಮೇಧಾವಿ, ಶಿಸ್ತಿನ ಸಿಪಾಯಿ,  ಧೀಮಂತ ನಾಯಕ, ತಮಗಾಗಿ
ಏನು ಬಯಸದೇ ದೇಶದ ಜನರ ಹಿತಕ್ಕಾಗಿ ದುಡಿದ ಮಹಾನ್‌ ವ್ಯಕ್ತಿ. ಅವರ ಆದರ್ಶ ಜೀವನದ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಭಾರತ ವಿಶ್ವದ ಮೇರು
ರಾಷ್ಟ್ರಗಲು ಸಾಧ್ಯ ಎಂದರು.

ಬಿಡಿಎ ಮಾಜಿ ಸದಸ್ಯ ವಸಂತ ಹೊನಮೋಡೆ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಮ ಹೊಸಮನಿ, ವಿಠ್ಠಲ ಸೂರ್ಯವಂಶಿ, ಮಹೇಶ ಕಾಂಬಳೆ, ಸಂತೋಷ ಹಂಜಗಿ, ಬಸವೇಶ್ವರ ಸಂಸ್ಥೆ ಅಧ್ಯಕ್ಷ ಶಿವಾಜಿ ಸತ್ತಾಳಕರ, ಬಸವರಾಜ ಕಾಂಬಳೆ, ಡಿ.ಕೆ. ಹೊಸಮನಿ, ರಾಘವೇಂದ್ರ ಸೌದಾಗರ, ದರ್ಶನ ಹೊನ್ನಕಾಂಬಳೆ, ಪಾಂಡು ಮಾನೆ, ಪರಶುರಾಮ ಕಬಾಡೆ, ಖುದಾನಪುರ, ರಮೇಶ
ಭಜಂತ್ರಿ, ಮರೆಪ್ಪ ಕನ್ನಾಳ ಇದ್ದರು.

ಜಿಲ್ಲಾಡಳಿತ: ಜಿಲ್ಲಾಡಳಿತದಿಂದ ಶುಕ್ರವಾರ ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ಅವರ 112ನೇ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಧಿಕಾರಿ ಎಂ.ಕನಗವಲ್ಲಿ ಅವರು ಡಾ| ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ, ಅಪರ ಜಿಲ್ಲಾಧಿಕಾರಿ ಎಚ್‌
.ಪ್ರಸನ್ನ, ಮುಖಂಡರಾದ ಭೀಮರಾವ್‌ ಜಿಗಜಿನ್ನಿ, ಅಡಿವೆಪ್ಪ ಸಾಲಗಲ್‌, ನಾಗರಾಜ್‌ ಲಂಬು, ಜಮಖಂಡಿ ಮಾಸ್ತರ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋದ್ದಾರ ಇದ್ದರು.

Advertisement

ವಾರ್ಡ್‌ ನಂ. 35: ನಗರದ ವಾರ್ಡ್‌ ನಂ. 35ರಲ್ಲಿ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ| ಬಾಬು ಜಗಜೀವನರಾಂ ಕಾಲೋನಿಯಲ್ಲಿ ಬಾಬು ಜಗಜೀವನಮರಾಂ ಜಯಂತಿ ಆಚರಿಸಲಾಯಿತು. ಸಂಘಟನೆ ಗೌರವಾಧ್ಯಕ್ಷ ತಿಪ್ಪಣ್ಣ ಶಹಾಪುರ, ಉಪಾಧ್ಯಕ್ಷ ಬಸವರಾಜ ಕಾಂಬಳೆ, ವಿಠ್ಠಲ ಸಫ್ತಾಳಕರ, ರಾಮು ಸೌದಾಗರ, ಶಾಂತಾಬಾಯಿ ಕಟ್ಟಿಮನಿ, ಕಮಲಾಬಾಯಿ ಶಾಪುರ, ಜಯಶ್ರೀ
ಸಿಂಧೂರ, ರೇಣುಕಾ, ಹೇಮಂತ ಭುತ್ನಾಳ, ದರ್ಶನ, ರಮೇಶ ಹೊನಮೋರೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next