Advertisement

ಸಮಾಜದ ಮನೋಭಾವ ಬದಲಾಯಿಸುವುದೇ ಅಂಬೇಡ್ಕರ್ ಜಯಂತಿ ಉದ್ದೇಶ : ಡಿಸಿ ಮುಲ್ಲೈ 

05:34 PM Apr 14, 2021 | Team Udayavani |

ಕಾರವಾರ: ಸಮಾಜದ ಮಾನದಂಡಗಳಿಗೆ ಅಂಬೇಡ್ಕರ್ ಅವರನ್ನ ಹೋಲಿಸುವ ಬದಲು,  ಅವರ ವಿಚಾರಧಾರೆಗಳ  ಮಟ್ಟಕ್ಕೆ ಸಮಾಜವನ್ನ  ಹೋಲಿಸಿ ನೋಡುವ ದಿನವಾಗಿ ಪರಿವರ್ತಿಸುವುದೇ ಅಂಬೇಡ್ಕರ್ ಜಯಂತಿಯ ಉದ್ದೇಶವಾಗಿದೆ ಎಂದು    ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು .

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ  130ನೇ  ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಯೋಚನಾ ಶಕ್ತಿಯು ಸಮಾಜವು ಹೇಗಿದೆ ಎನ್ನುವುದನ್ನುವುದರ ಆಗುಹೋಗುಗಳನ್ನ ತೋರಿಸುವ ಕನ್ನಡಿಯಂತಿತ್ತು ಎಂದರು.

ಯಾವುದೇ ವ್ಯಕ್ತಿಗೆ ಸಾಮಾಜಿಕ ಸ್ಥಾನಮಾನಗಳನ್ನ ಅವಕಾಶಗಳನ್ನ ಅವರ ಹುಟ್ಟಿನ, ಲಿಂಗದ, ಜಾತಿಯ, ಆಧಾರದಮೇಲೆ ನೀಡುವಂತದ್ದಲ್ಲ ಅದೂ ಅವರ ಪ್ರತಿಭೆಯ ಆಧಾರದಮೇಲೆ ಸಿಗುವಂತಾಗಬೇಕು. ಸಮಾಜದಲ್ಲಿ ರಾಜಕೀಯ ಸ್ವತಂತ್ರ ಅಥವಾ ರಾಜಕೀಯ ಸಮಾನತೆ ದೊರೆತಿರಬಹುದು. ಆದರೆ,  ಸಮಾಜದ ಮನೋಭಾವ ಬದಲಾಗುವವರೆಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಿಗುವುದಿಲ್ಲ. ಇಂತಹ ಮನೋಭಾವನೆಗಳು ಬದಲಾವಣೆಯ ಜೊತೆಗೆ ಮೊದಲು ವೈಯಕ್ತಿಕವಾಗಿ ಬದಲಾವಣೆ ಬರಬೇಕು ಆಗ  ಮಾತ್ರ ಸಾಮಾಜಿಕವಾಗಿ ಬದಲಾವಣೆ ಕಾಣಲು ಸಾಧ್ಯ ಎಂದರು.

ಅಪರ ಜಿಲ್ಲಾಧಿಕಾರಿ ಕ್ರಷ್ಣಮೂರ್ತಿ ಹೆಚ್.ಕೆ.ಮಾತನಾಡಿ, ಅಂಬೇಡ್ಕರ್ ಅವರು ಮೇಧಾವಿ ಹಾಗೂ ವಿದ್ಯಾವಂತ ವ್ಯಕ್ತಿ,ಇಂತವರ ಬಗ್ಗೆ ಓದಿ ತಿಳಿದುಕೊಂಡು ಅವರ  ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅತ್ಯಾವಶ್ಯಕ ಎಂದರು. ಸ್ವಾತ್ಯಂತ್ರ ಹೋರಾಟದ ಸಮಯದಲ್ಲಿ ಸಮಾನತೆಗಾಗಿ ಗಾಂಧೀಜಿಯವರ ಜೊತೆಗೆ ನಡೆದ ಒಪ್ಪಂದ ಹಾಗೂ ಸಮಾನತೆಯ ಹೋರಾಟವನ್ನು ಬಳಸಿಕೊಂಡು, ಸ್ವಾತಂತ್ರ್ಯದ ಹೋರಾಟವನ್ನು ಚುರುಕುಗೊಳಿಸಲು  ಮಾಡಿದ ಉಪಾಯಗಳ ಬಗ್ಗೆ ಕೂಡ  ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಘವೇಂದ್ರ.ಎಮ್  ಅವರು ಅಂಬೇಡ್ಕರ್ ಅವರ ಚಿಂತನೆಗಳು ಇಂದು  ಹೆಚ್ಚು  ಪ್ರಸ್ತುತ ವಿಷಯದ ಕುರಿತು   ಉಪನ್ಯಾಸ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜು, ನಗರಸಭೆ ಉಪಾಧ್ಯಕ್ಷ ಪ್ರಕಾಶ್ ನಾಯ್ಕ್, ಪೌರಯುಕ್ತ ಆರ್. ಪಿ. ನಾಯ್ಕ್, ದಲಿತ ಸಂಘನೆಗಳಿಂದ ಎಲಿಷಾ ಎಕಲಪಾಟಿ, ದೀಪಕ್  ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next