Advertisement

ಅಕಾಲಿಕ ಮಳೆಗೆ ದ್ರಾಕ್ಷಿಗೆ ಡೌನಿ-ಕೊಳೆ-ಬೂದಿ ರೋಗ

05:53 PM Nov 26, 2021 | Team Udayavani |

ರಬಕವಿ-ಬನಹಟ್ಟಿ: ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ಡೌನಿ-ಕೊಳೆ-ಬೂದಿ ರೋಗ ತಗಲುವ ಭೀತಿಯಿದ್ದು, ರಬಕವಿ-ಬನಹಟ್ಟಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ . ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆಯಿಂದ ದ್ರಾಕ್ಷಿ ಬೆಳೆಗೆ ಕೊಳೆ ರೋಗ ತಗಲುತ್ತಿದ್ದು, ಔಷಧ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

Advertisement

ಸಾಲ ಮಾಡಿಕೊಂಡು ಒಂದು ಅಥವಾ ಎರಡು ಎಕರೆ ದ್ರಾಕ್ಷಿ ಬೆಳೆದು ಈ ಬಾರಿ ಫಸಲು ಬರುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ, ನಾವಲಗಿ, ಹಿಪ್ಪರಗಿ ಹಾಗೂ ಚಿಮ್ಮಡ ಗ್ರಾಮಗಳ ಸುತ್ತ ರೈತರು ಸುಮಾರು 600 ಎಕರೆಯಷ್ಟು ದ್ರಾಕ್ಷಿ ಬೆಳೆದಿದ್ದು, ರೈತರ ತೋಟಗಳಿಗೆ ಯಾವುದೇ ಅಧಿಕಾರಿಗಳು ಬಾರದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಎಕರೆಗೆ 20 ಟನ್‌ನಷ್ಟು ದ್ರಾಕ್ಷಿ ಬರುತ್ತಿತ್ತು. ಇದೀಗ ಕಳೆದ ನಾಲ್ಕು ವರ್ಷಗಳಿಂದ ಕೊಳೆ ರೋಗ ಸಮಸ್ಯೆಯಿಂದ ಎಕರೆಗೆ 4 ಟನ್‌ನಷ್ಟು ಮಾತ್ರ ದ್ರಾಕ್ಷಿ ಬಂದರೆ, 4ರಿಂದ 5 ಕ್ವಿಂಟಲ್‌ನಷ್ಟು ಒಣದ್ರಾಕ್ಷಿ ಬರುವ ಬದಲಾಗಿ ಕೇವಲ 1ರಿಂದ 2ಟನ್‌ನಷ್ಟು ಮಾತ್ರ ಬರುವ ಸಂಭವವಿದೆ ಎಂದು ನೋವು ತೋಡಿಕೊಂಡಿದ್ದಾರೆ ರೈತ ಸತ್ಯಪ್ಪ ಅಸ್ಕಿ. ದ್ರಾಕ್ಷಿ ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ದ್ರಾಕ್ಷಿ ಕಹಿಯಾಗಿ ಪರಿಣಮಿಸಿದೆ. ಪ್ರತಿ ವರ್ಷ ಹಾನಿಯಲ್ಲಿಯೇ ಬದುಕು ಸಾಗಿಸುವ ದುಃಸ್ಥಿತಿ ರೈತರದ್ದಾಗಿದೆ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡಬೇಕು ಎನ್ನುತ್ತಾರೆ ರೈತ ಬಸವರಾಜ ಕಾನಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next