Advertisement
ಕಾರು ಅಪಘಾತದಿಂದ ದರ್ಶನ್ ಕೈಗೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಯಾಗಿರುವ ಕಾರಣ ಸಪ್ತಾಹದಲ್ಲಿ ಭಾಗವಹಿಸುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಕರ್ನಾಟಕ ಅರಣ್ಯ ಇಲಾಖೆಗೆ ಕಳೆದ ಮೂರು ತಿಂಗಳ ಹಿಂದೆಯಷ್ಠೆ ರಾಯಬಾರಿಯಾಗಿ ನೇಮಕವಾಗಿದ್ದರು.
Related Articles
Advertisement
ಆದರೆ, ಅವರು ಅಪಘಾತದಿಂದ ಗಾಯಗೊಂಡಿರುವ ಕಾರಣ ಜಾಥಾದಲ್ಲಿ ಭಾಗವಹಿಸುವುದಿಲ್ಲ ಎಂಬುದು ನಿರಾಸೆ ತಂದಿದೆ. ನಟ ದರ್ಶನ್ ಅವರು ಬೇಗ ಗುಣಮುಖರಾಗಲಿ ಆರೋಗ್ಯವೂ ಮುಖ್ಯ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿಯ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ ಗೌಡ ತಿಳಿಸಿದ್ದಾರೆ.
ಕಲಾವಿದರ ಕಾಳಜಿ: ಅರಣ್ಯ ಇಲಾಖೆ ಪ್ರತಿ ವರ್ಷ ಆಯೋಜಿಸುವ ವನ್ಯಜೀವಿ ಸಪ್ತಾಹದಲ್ಲಿ ಅರಣ್ಯ ಸಚಿವರು, ಮೇಯರ್, ಹಲವು ಶಾಸಕರು, ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗುವ ಸಪ್ತಾಹದಲ್ಲಿ ಸಿನಿಮಾ ಕಲಾವಿದರು ಆಗಮಿಸಿ ಮತ್ತಷ್ಟು ಮೆರಗು ನೀಡುತ್ತ ಬಂದಿದ್ದಾರೆ. ಈ ಹಿಂದೆ ನಟ ಪುನೀತ್, ಪ್ರಕಾಶ್‌ರಾಜ್, ವಿಜಯ ರಾಘವೇಂದ್ರ, ಮುರಳಿ, ಮಾಜಿ ಕ್ರಿಕೆಟ್ ಆಟಗಾರ ಅನಿಲ್‌ಕುಂಬ್ಳೆ ಹೀಗೆ ಅನೇಕರು ಸಪ್ತಾಹದಲ್ಲಿ ಭಾಗವಹಿಸಿ ತಮ್ಮ ಪರಿಸರ ಕಾಳಜಿ ತೋರುತ್ತಾ ಬಂದಿದ್ದಾರೆ.
ಆಗಮನದ ನಿರೀಕ್ಷೆ: ವನ್ಯಜೀವಿ ಸಪ್ತಾಹ ಅ. 2 ರಿಂದ 7 ವರೆಗೂ ನಡೆಯಲಿದೆ, ದರ್ಶನ್ ಇಲಾಖೆ ರಾಯಭಾರಿಯಾಗಿರುವುದರಿಂದ ಅವರ ಆಹ್ವಾನಿಸುವುದು ನಮ್ಮ ಶಿಷ್ಠಾಚಾರ. ಸಪ್ತಾಹ ಉದ್ಘಾಟನ ಸಮಾರಂಭದಲ್ಲಿ ಅವರು ಭಾಗವಹಿಸಬಹುದು ಎಂಬ ನಿರೀಕ್ಷೆ ಇದೆ ಎಂದು ಕಾರ್ಯಕ್ರಮ ನೇತೃತ್ವ ವಹಿಸಿ ಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಹೇಳಿದ್ದಾರೆ.