Advertisement

ಚಂಡಮಾರುತದಿಂದ ಮುಂದಿನ ವಾರ ಮಳೆ ಸಾಧ್ಯತೆ

08:00 PM May 29, 2020 | Sriram |

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎರಡು ಚಂಡಮಾರುತಗಳು ಸೃಷ್ಟಿಯಾಗಿದ್ದು, ಒಂದು ಚಂಡಮಾರುತ ಆಫ್ರಿಕಾದ ಕರಾವಳಿ ಭಾಗದತ್ತ ಧಾವಿಸುತ್ತಿದ್ದರೆ, ಮತ್ತೊಂದು ಚಂಡಮಾರುತ ದಕ್ಷಿಣ ಭಾರತದ ಕರಾವಳಿ ಪ್ರದೇಶಗಳತ್ತ ತಿರುಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.

Advertisement

ಎರಡನೇ ಚಂಡಮಾರುತ ಭಾರತಕ್ಕೆ ಹತ್ತಿರವಾಗುತ್ತಿದ್ದು, ಮೇ 31ಕ್ಕೆ ವಾಯುಭಾರ ಕುಸಿತ ಸಂಭವಿಸಲಿದೆ. ಇದು ಜೂ.3 ಅಥವಾ ಮುಂದಿನ ವಾರ ಮತ್ತಷ್ಟು ತೀವ್ರಗೊಳ್ಳಲಿದೆ. ಇದರಿಂದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಕರಾವಳಿ ತೀರಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ನೈಋತ್ಯ ಮುಂಗಾರು ವಾಡಿಕೆಯಂತೆ ಜೂ.1ರಂದು ಕೇರಳ ಪ್ರವೇಶಿಸುವ ಸಂಭವ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next