Advertisement
ಕಲ್ಲು ಗಣಿ ಪ್ರದೇಶದಿಂದ ಕಚ್ಚಾ ಕಲ್ಲುಗಳನ್ನು ತೆಗೆಯುವಾಗ ಸ್ಟೋನ್ ಕ್ರಶರ್ ಇಂಡಸ್ಟ್ರೀಸ್ ಮಾಲೀಕರಿಂದ ಹಾಗೂ ಕಾಮಗಾರಿ ನಿರ್ವಹಿಸಿದ ನಂತರ ಇಲಾಖೆ ಬಿಲ್ ನಲ್ಲೂ ರಾಜ ಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಂದ ಪಡೆಯಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ನೀಲಕಂಠರಾವ ಮೂಲಗೆ ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಗಣಿಗುತ್ತಿಗೆ ನೀಡಿರುವ ಪ್ರದೇಶಗಳ ಸುತ್ತ ಜಾಗದ ಲಭ್ಯವಿದ್ದಲ್ಲಿ 25 ಮೀಟರ್‌ಗಳವರೆಗೆ ಗಣಿಗುತ್ತಿಗೆ ಮಂಜೂರಾತಿಗೆ ಅವಕಾಶ ಕಲ್ಪಿಸಬೇಕು. 3ಎ ಪ್ರಕಾರ ಪಟ್ಟಾ ಸ್ಥಳಗಳಲ್ಲಿ ಕಲ್ಲುಗಳಲ್ಲಿ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವುದಕ್ಕೆ ಕಟ್ಟಡಕಲ್ಲನ್ನು ತೆಗೆಯುವುದಕ್ಕೆ ಅವಕಾಶ ನೀಡಬೇಕು. ಅರಣ್ಯ ಇಲಾಖೆಯಿಂದ ಎಫ್ಸಿ ಮುಖಾಂತರ ಟೆಂಡರ ರಹಿತವಾಗಿ ಗುಣಿಗುತ್ತಿಗೆ ಪಡೆಯುವುದಕ್ಕೆ ಅವಕಾಶ ನೀಡಬೇಕು. ಕಲ್ಲುಗಣಿಗುತ್ತಿಗೆ ಪರವಾನಿಗೆಯನ್ನು 50 ವರ್ಷಗಳವರೆಗೆ ವಿಸ್ತರಿಸಬೇಕು. ಈಗಾಗಲೇ ತಯಾರಿಸಿರುವ ಕ್ವಾರಿ ಪ್ಲಾನ್‌ಗಳನ್ನು ಹೊಸದಾಗಿ ತಯಾರಿಸಿ ಹೆಚ್ಚುವರಿ ಪ್ರಮಾಣದ ಖನಿಜ ತಗೆಯುವುದಕ್ಕೆ ಕ್ರಮ ವಹಿಸಬೇಕು ಎಂದು ಒತ್ತಾಯಸಿದರು.
ಸರ್ಕಾರದ ಧೋರಣೆ ವಿರೋಧಿಸಿ ಈಗಾಗಲೇ ಎಲ್ಲ ಸ್ಟೊನ್ ಕ್ರಶರ್ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿಯಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯಲಾಗದು. ಜಲಿ ಕಲ್ಲು ಪೂರೈಕಯಾಗದಿದ್ದರೆ ಎಲ್ಲ ಅಭಿವೃದ್ಧಿ ಕಾರ್ಯಗಳು ನಿಲ್ಲುತ್ತವೆ. ಪರಿಸ್ಥಿತಿ ಕೈ ಮೀರುವ ಮುನ್ನಾ ಬೇಡಿಕೆಗಳಿವೆ ಸ್ಪಂದಿಸುವುದು ಸರಕಾರ ಪ್ರಮುಖ ಕಾರ್ಯವಾಗಿದೆ ಎಂದರು.
ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ದ ಪ್ರಧಾನ ಕಾರ್ಯದರ್ಶಿ ಆರ್.ಜಿ.ಪಾಟೀಲ್, ಕಾರ್ಯದರ್ಶಿ ಮನೋಹರ್ ಗುತ್ತೇದಾರ್, ಖಜಾಂಚಿ ರಾಕೇಶ ಗುತ್ತೇದಾರ್, ಜಂಟಿ ಕಾರ್ಯದರ್ಶಿ ವಿಕಾಸ ಆರ್.ಪಾಟಕ್ (ಸೋನು ಪಟೇಲ್) ಹಾಗೂ ಮಲ್ಲಿನಾಥ ಹಾಗರಗಿ ಸೇರಿದಂತೆ ಮುಂತಾದವರಿದ್ದರು.