Advertisement

Karnataka: ಗೃಹಜ್ಯೋತಿಗೆ 2ನೇ ದಿನ ದುಪ್ಪಟ್ಟು ನೋಂದಣಿ!

10:26 PM Jun 19, 2023 | Team Udayavani |

ಬೆಂಗಳೂರು: “ಗೃಹಜ್ಯೋತಿ” ಸೌಲಭ್ಯಕ್ಕಾಗಿ ಸೋಮವಾರ ರಾಜ್ಯಾದ್ಯಂತ ಜನ ಮುಗಿಬಿದ್ದಿದ್ದು, 2ನೇ ದಿನ ಅರ್ಜಿ ಸಲ್ಲಿಸುವವರ ಸಂಖ್ಯೆ ದುಪ್ಪಟ್ಟಾಗಿದೆ!

Advertisement

ಮೊದಲ ದಿನವಾದ ರವಿವಾರ 55 ಸಾವಿರ ಜನ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಎರಡನೇ ದಿನ 1.06 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಯೋಜನೆ ಅಡಿ ಅರ್ಜಿ ಸಲ್ಲಿಸಿದವರ ಸಂಖ್ಯೆ 1.61 ಲಕ್ಷ ಆಗಿದೆ. ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದರಿಂದ ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಒನ್‌ ಸೇರಿ ಉಪನಗರಗಳ ಆನ್‌ಲೈನ್‌ ಕೇಂದ್ರಗಳು ಜನರಿಂದ ತುಂಬಿತುಳುಕುತ್ತಿದ್ದವು.

ಈ ಮಧ್ಯೆ ರಾಜ್ಯಾದ್ಯಂತ ಏಕಕಾಲದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಸರ್ವರ್‌ ಆಗಾಗ್ಗೆ ಕೈಕೊಡುತ್ತಿತ್ತು. ಬೆಳಗ್ಗೆ ಬಂದವರಿಗೆ ಮಧ್ಯಾಹ್ನ ಪಾಳಿ ಸಿಕ್ಕಿತು. ಹಲವೆಡೆ ಬೇಗ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು.

ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಿಲ್ಲ. ಆದ್ದರಿಂದ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ತಮ್ಮ ಹತ್ತಿರದ ಕರ್ನಾಟಕ ಒನ್‌, ಗ್ರಮ ಒನ್‌ ಅಥವಾ ಬೆಂಗಳೂರು ಒನ್‌ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಖುದ್ದಾಗಿ ಸೇವಾ ಸಿಂಧು ಪೋರ್ಟಲ್‌ //sevasindhugs.karnataka.gov.in  ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು ಎಂದು ಇಂಧನ ಇಲಾಖೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next