Advertisement
ಸ್ಮಾರ್ಟ್‌ಫೋನ್ ಬ್ರಾಂಡೊಂದು ಹೊಸದಾಗಿ ಪರಿಚಯವಾಗಿ ಒಂದು, ಒಂದೂವರೆ ವರ್ಷದಲ್ಲಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯುವುದೆಂದರೆ ಕಡಿಮೆ ಸಾಧನೆಯಲ್ಲ. ಕಳೆದ ವರ್ಷ ಭಾರತದಲ್ಲಿ ಕೇವಲ 13 ಲಕ್ಷ ಫೋನ್‌ಗಳಷ್ಟು ಮಾರಾಟವಾಗಿ, ಈ ಸಾಲಿನಲ್ಲಿ ಶೇ. 401ರಷ್ಟು ಬೆಳವಣಿಗೆ ಕಂಡು, 67 ಲಕ್ಷ ಸ್ಮಾರ್ಟ್ ಫೋನ್‌ಗಳನ್ನು ಮಾರಾಟ ಮಾಡಿದೆ. ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆ ಕಂಪೆನಿಯೆಂದರೆ ರಿಯಲ್‌ಮಿ. ಅದರ ಈ ಪರಿಯ ಸಾಧನೆಗೆ ಕಾರಣ, ಅಗ್ಗದ ದರದಲ್ಲಿ ಉತ್ತಮ ಗುಣಾಂಶಗಳುಳ್ಳ ಮೊಬೈಲ್ ಬಿಡುಗಡೆ ಮಾಡುತ್ತಲೇ ಇರುವುದು. ನಾಲ್ಕೈದು ದಿನಗಳ ಹಿಂದಷ್ಟೇ ಎರಡು ಮೊಬೈಲ್ ಫೋನ್‌ಗಳನ್ನು ರಿಯಲ್ ಮಿ ಭಾರತದಲ್ಲಿ ಹೊರತಂದಿದೆ. ಇದರಲ್ಲಿ ಒಂದು ಫ್ಲಾಗ್‌ಶಿಪ್ (ಅತ್ಯುನ್ನತ ದರ್ಜೆ) ಆದರೆ, ಇನ್ನೊಂದು ಬಜೆಟ್ ಫೋನು.
20 ಸಾವಿರದೊಳಗೆ, ಆರಂಭಿಕ ಮತ್ತು ಮಧ್ಯಮ ದರ್ಜೆಯ ಫೋನ್‌ಗಳನ್ನಷ್ಟೇ ಇದುವರೆಗೆ ಹೊರತಂದಿದ್ದ ರಿಯಲ್‌ಮಿ, ಇದೇ ಮೊದಲ ಬಾರಿಗೆ ಅತ್ಯುನ್ನತ ದರ್ಜೆಯ ಫೋನನ್ನು ಹೊರತಂದಿದೆ. ಇದರ ದರ 30 ಸಾವಿರದಿಂದ ಆರಂಭವಾಗುವುದು ವಿಶೇಷ. ರಿಯಲ್ ಮಿ ಕುಟುಂಬದ್ದೇ ಆದ ಅದರ ದೊಡ್ಡಣ್ಣ ಒನ್ ಪ್ಲಸ್ ಫೋನ್‌ಗಳ ದರ ಪ್ರತಿ ಫೋನಿಗೂ ಹೆಚ್ಚುತ್ತಲೇ ಹೋಗುತ್ತಿರುವಾಗ ಇದರ ದರ ಒಂದು ಮಟ್ಟಕ್ಕೆ ಕೈಗೆಟುಕುವಂತಿರುವುದು ಸಮಾಧಾನಕರ ವಿಷಯ. ಈ ದರಕ್ಕೆ ಫೋನಿನಲ್ಲಿ ಅಳವಡಿಸಿರುವ ತಾಂತ್ರಿಕತೆಗಳೂ ತೃಪ್ತಿಕರವಾಗಿವೆ. ಈ ಫೋನಿನಲ್ಲಿ ಸ್ನಾಪ್‌ಡ್ರಾಗನ್ 855 ಪ್ಲಸ್ ಪ್ರೊಸೆಸರ್ ಇದೆ. ಇತ್ತೀಚಿನ ಒನ್ ಪ್ಲಸ್ 7ಟಿ ಫೋನಿನಲ್ಲಿರುವುದು ಇದೇ ಪ್ರೊಸೆಸರ್. ನಿಮಗೆ ಗೊತ್ತಿರುವಂತೆ ಈಗ ಇದು ಅತ್ಯುನ್ನತ ದರ್ಜೆಯ ಪ್ರೊಸೆಸರ್. 90 ಹಟ್ಜ್ì ಸೂಪರ್ ಅಮೋಲೆಡ್ 6.5 ಇಂಚಿನ ಪರದೆ ಹೊಂದಿದೆ. ಇದು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ 12 ಜಿಬಿ ರ್ಯಾಮ್ 256 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿಗಳನ್ನು ಹೊಂದಿದೆ. ಪರದೆ ಫುಲ್ ಎಚ್‌ಡಿ ಪ್ಲಸ್ ರೆಸ್ಯೂಲೇಷನ್ ಹೊಂದಿದೆ. 90 ಹಟ್ಜ್ì ಡಿಸ್‌ಪ್ಲೇ ಇದ್ದು, ಪರದೆ ನೀರಿನ ಹನಿಯಂಥ ನಾಚ್ ಹೊಂದಿದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕ್ಯಾನರ್ ಇದೆ.
Related Articles
Advertisement
ವೇಗದ ಚಾರ್ಜಿಂಗ್ಈ ಫೋನಿನಲ್ಲಿ 5 ಸಾವಿರ ಎಂಎಎಚ್ ಬ್ಯಾಟರಿ ಅಳವಡಿಸಿರುವುದು ಹೆಚ್ಚು ಹೊತ್ತು ಬ್ಯಾಟರಿ ಬಯಸುವವರಿಗೆ ಅನುಕೂಲಕರ. ಇದಿಷ್ಟೇ ಅಲ್ಲ, ಇದಕ್ಕೆ 50 ವ್ಯಾಟ್ಸ್ ಸುಪರ್ ವೂಕ್ ಫಾಸ್ಟ್ ಚಾರ್ಜರ್ ನೀಡಲಾಗಿದೆ. ಕಂಪೆನಿ ಹೇಳಿಕೊಂಡಿರುವ ಪ್ರಕಾರ ಭಾರತದಲ್ಲೇ ಅತಿ ವೇಗವಾಗಿ ಚಾರ್ಜ್ ಆಗುವ ಮೊಬೈಲ್ ಇದಂತೆ. ಕೇವಲ 35 ನಿಮಿಷಗಳಲ್ಲಿ ಸೊನ್ನೆಯಿಂದ ಶುರು ಮಾಡಿ ಶೇ. 100ರಷ್ಟು ಬ್ಯಾಟರಿ ಚಾಜ್ ಆಗುತ್ತದೆ ಎಂದು ಅದು ತಿಳಿಸಿದೆ. ಆಡಿಯೋ ಪ್ರಿಯರಿಗಾಗಿ ಡೋಲ್ಬಿ ಆಟ್‌ಮೋಸ್ ಮತ್ತು ಹೈ ರೆಸೊಲ್ಯೂಷನ್ ಆಡಿಯೋ ತಂತ್ರಾಂಶ ಆಳವಡಿಸಲಾಗಿದೆ. ಮೊಬೈಲ್ ಗಾಜಿನ ದೇಹ ಹೊಂದಿದೆ. ಅಂಡ್ರಾಯ್ಡ 10 ಓಎಸ್ ಇರುವ ಹೊಸ ಮಾಡೆಲ್‌ಗಳು ಬರುತ್ತಿರುವಾಗ ಇದು ಅಂಡ್ರಾಯ್ಡ 9 ಆವೃತ್ತಿ ಹೊಂದಿರುವುದು ಒಂದು ಹಿನ್ನಡೆ ಎನ್ನಬಹುದು. ಇದರ ದರ 8+128 ಜಿಬಿಗೆ 30 ಸಾವಿರ ರೂ. 12+256 ಜಿಬಿಗೆ 34 ಸಾವಿರ ರೂ. ಈ ಮೊಬೈಲ್ ನವೆಂಬರ್ 26ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯಕ್ಕೆ ಆಹ್ವಾನದ ಮೂಲಕ ಲಭ್ಯ. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ ನಿಗದಿತ ಸಮಯದಲ್ಲಿ ಯಾರು ನೋಂದಾಯಿಸಿಕೊಂಡಿರುತ್ತಾರೋ ಅಂಥವರಿಗೆ ಲಭ್ಯ. ರಿಯಲ್ ಮಿ 5 ಎಸ್
ಮೇಲೆ ಹೇಳಿದ ಅತ್ಯುನ್ನತ ದರ್ಜೆಯ ಫೋನ್ ಜೊತೆಗೆ, ಬಜೆಟ್ ಪ್ರಿಯರಿಗಾಗಿ ರಿಯಲ್‌ಮಿ 5 ಎಸ್ ಎಂಬ ಇನ್ನೊಂದು ಫೋನನ್ನು ಕಂಪೆನಿ ಹೊರತಂದಿದೆ. ಇದರ ದರ 10 ಸಾವಿರ ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ ಸ್ನಾಪ್‌ಡ್ರಾಗನ್ 665 ಮಧ್ಯಮ ದರ್ಜೆಯ ಪ್ರೊಸೆಸರ್ ಇದೆ. 48 ಮೆಗಾ ಪಿಕ್ಸಲ್ ಪ್ರೈಮರಿ ಲೆನ್ಸ್ ಉಳ್ಳ ನಾಲ್ಕು ಲೆನ್ಸಿನ ಕ್ಯಾಮರಾ ಒಳಗೊಂಡಿದ್ದು, 13 ಮೆ.ಪಿ. ಸೆಲ್ಫಿà ಕ್ಯಾಮರಾ ಇದೆ. ಇದು ಸಹ 5 ಸಾವಿರ ಎಂಎಎಚ್ ಬ್ಯಾಟರಿ ಇದ್ದು, 10 ವ್ಯಾಟ್ ಚಾರ್ಜರ್ ಹೊಂದಿದೆ. ಎಚ್‌ಡಿ ಪ್ಲಸ್ (720×1600) ಡಿಸ್‌ಪ್ಲೇ ಹೊಂದಿದೆ. ಫುಲ್ ಎಚ್.ಡಿ ಎಲ್ಲ ಎಂಬುದನ್ನು ಗಮನಿಸಿ. 6.5 ಇಂಚಿನ ನೀರಿನ ಹನಿಯಂಥ ನಾಚ್ ಅನ್ನು ಪರದೆ ಹೊಂದಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ (ದರ: 10 ಸಾವಿರ ರೂ.) ಹಾಗೂ 4 ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹ (ದರ: 11 ಸಾವಿರ ರೂ.) ಆವೃತ್ತಿ ಹೊಂದಿದೆ. ನವೆಂಬರ್ 29ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ. -ಕೆ.ಎಸ್. ಬನಶಂಕರ ಆರಾಧ್ಯ