Advertisement
ವಸೂಲಿಗೆ ಡೀಸಿ ಸೂಚನೆ: ಜಿಲ್ಲಾ ಖಜಾನೆಯಿಂದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಡಬಲ್ ಪಿಂಚಣಿ ನೀಡಲಾಗಿದ್ದು, ತಿಂಗಳ ಆರಂಭ ಹಾಗೂ ಅಂತ್ಯದಲ್ಲಿ ಹಣ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಹೀಗೆ ಮಾಡಿರುವ ಎಡವಟ್ಟಿನಿಂದ ಜಿಲ್ಲೆಯ 130 ಫಲಾನುಭವಿಗಳ ಖಾತೆಗೆ ಒಟ್ಟು 9,88,450 ರೂ. ಹೆಚ್ಚುವರಿಯಾಗಿ ಜಮೆಯಾಗಿದೆ. ಫಲಾನುಭವಿ ಗಳಿಂದ ಹಣ ವಸೂಲಿ ಮಾಡುವಂತೆ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ಪಿಂಚಣಿ ವಾಪಸ್ ಕಟ್ಟಲು ನೋಟಿಸ್!:
ಹುಳಿಯಾರಿನ ತಿಪಟೂರು ರಸ್ತೆಯ ಎನ್.ಕೆ.ಚಂದ್ರಶೇಖರಪ್ಪ ಅವರಿಗೆ ಜನವರಿಯಲ್ಲಿ ಮಾಸಿಕ ಪಿಂಚಣಿ ಬಂದಿರಲಿಲ್ಲ. ಬದಲಾಗಿ ಫೆಬ್ರವರಿ 6ರಂದು 2 ಸಾವಿರ ರೂ., 25ರಂದು 2 ಸಾವಿರ ರೂ. ಜಮೆಯಾಗಿತ್ತು. ಅಲ್ಲದೆ ಮಾರ್ಚ್ 6ರಂದು 2 ಸಾವಿರ ರೂ. ಪಿಂಚಣಿ ಹಣ ಬಂದಿದೆ. ಸರ್ಕಾರದ ಹೊಸ ಯೋಜನೆ ಎಂದು ಫಲಾನುಭವಿಗಳು ಭಾವಿಸಿದ್ದರು. ಆದರೆ ಏಪ್ರಿಲ್ ಮತ್ತು ಮೇಯಲ್ಲಿ ಪಿಂಚಣಿ ಬರಲೇ ಇಲ್ಲ. ಈ ಬಗ್ಗೆ ನಾಡಕಚೇರಿಗೆ ಕೇಳಲು ತೆರಳಿದ್ದ ಚಂದ್ರಶೇಖರಪ್ಪಗೆ ಉಪ ತಹಶೀಲ್ದಾರ್ ನೋಟಿಸ್ ಕೈಗಿಟ್ಟು ಹೆಚ್ಚುವರಿ ಪಿಂಚಣಿ ವಾಪಸ್ ಕಟ್ಟುವಂತೆ ತಾಕೀತು ಮಾಡಿದರು. ಇದರಿಂದ ಗಾಬರಿಯಾದ ಚಂದ್ರಶೇಖರಪ್ಪ ಬ್ಯಾಂಕಿಗೆ ದೌಡಾಯಿಸಿ 6 ಸಾವಿರ ರೂ. ಕಟ್ಟಿ, ಉಪತಹಸೀಲ್ದಾರ್‌ಗೆ ಚಲನ್ ತೋರಿಸಿ ನಿರಾಳರಾದರು.