ಕೊರಟಗೆರೆ: ಡಬಲ್ ಇಂಜಿನ್ ಸರ್ಕಾರದಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವಕುಮಾರಸ್ವಾಮೀಜಿರವರಿಗೆ ಭಾರತ ರತ್ನ ನೀಡಲು ಸಾಧ್ಯವಾಗಲಿಲ್ಲ ಕೇವಲ ಮಠಕ್ಕೆ ಭೇಟಿ ನೀಡಿ ಆಶಾಡ ಭೂತಿ ಪ್ರದಶಿಸುವ ಬಿಜೆಪಿ ಪಕ್ಷ ರಾಜ್ಯದ ವೀರಶೈವರು ಬಿಜೆಪಿ ಪಕ್ಷದ ಪರ ಎಂದು ಹೇಳಿಕೊಳ್ಳುವುದು ಸರಿಯೆ ಎಂದು ಮಾಜಿ ಉಪ ಮುಖ್ಯ ಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಡಾ.ಜಿ.ಪರಮೇಶ್ವರ ಬೆಂಬಲಿಗರ ವೀರಶೈವ ಲಿಂಗಾಯಿತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ ವೀರಶೈವರು ಯಾರ ಪರ ಎಂಬುದು ಈ ಸಮಾವೇಶ ನೋಡಿದವರಿಗೆ ತಿಳಿಯುತ್ತದೆ ನಮ್ಮ ಕುಟುಂಬ ನಮ್ಮ ತಂದೆಯವರ ಕಾಲದಿಂದಲೂ ಸಿದ್ದಗಂಗಾ ಶ್ರೀಗಳ ಭಕ್ತರಾಗಿದ್ದು ಶ್ರೀಗಳು ನನ್ನ ತಲೆ ಮೇಲೆ ಕೈ ಇಟ್ಟು ಒಳ್ಳೇಯದಾಗಲಿ ಎಂದು ಆಶ್ರೀರ್ವದಿಸಿದ್ದಾರೆ ಎಂದು ತಿಳಿಸಿದ ಡಾ.ಜಿ.ಪರಮೇಶ್ವರ್ ಮೇ.೧೦ ರಂದು ನಡೆಯುವ ಚುನಾವಣೆ ದೇಶದ ಭವಿಷ್ಯ ನಿರ್ದರಿಸುವ ಮಹತ್ವದ ಚುನಾವಣೆಯಾಗಿದ್ದು, ಕಳೆದ ೪ ವರ್ಷಗಳ ಹಿಂದೆ ಪ್ರಜಾಪ್ರಭುತ್ವದಲ್ಲಿ ಕಾನೂನು ಬಾಹೀರವಾಗಿ ೧೭ ಮಂದಿ ಶಾಸಕರನ್ನು ಅಪಹರಿಸಿ ಸರ್ಕಾರ ಮಾಡಿದ ಅನೈತಿಕ ಸರ್ಕಾರ ರಾಜ್ಯ ಅಭಿವೃದ್ದಿಗೆ ಯಾವ ಯೋಜನೆಗೂ ಹಣ ಬಿಡುಗಡೆ ಮಾಡಲಿಲ್ಲ ಕೇವಲ ಜನಸಮಾನ್ಯರ ವಸ್ತಗಳ ಬೆಲೆ ಏರಿಕೆ ಮಾಡಿ ಬಡಜನತೆಯನ್ನು ಕಷ್ಟಕ್ಕೆ ನೂಕಿದ ಸರ್ಕಾರ ಎಂದು ಕಿಡಿಕಾರಿದ ಅವರು ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ರೈತರ ಹಿತಕ್ಕಾಗಿ ಮುಂಜೂರು ಮಾಡಿದ್ದ ಎತ್ತಿನಹೊಳ್ಳೆ ನೀರಾವರಿ ಯೋಜನೆಗೆ, ಮಹಾದಾಯಿ ಯೋಜನೆ ಹಾಗೂ ಮೇಕೆದಾಟು ಯೋಜನೆಗೆ ಹಣ ಬಿಡುಗಡೆ ಮಾಡದೆ ಯೋಜನೆಗಳು ನೆನೆಗುದಿಗೆ ಬೀಳುವಂತೆ ಮಾಡಿದ ಸರ್ಕಾರ ಎಂದರು.
ಚುನಾವಣಾ ಪ್ರಣಾಳಿಕೆಯ ಅಧ್ಯಕ್ಷನಾಗಿರುವ ನಾನು ಜನರ ಸಮಸ್ಯಗಳು ದೃಷ್ಠಿಯನ್ನು ಇಟ್ಟುಕೊಂಡು ಜಲ್ವಂತ ಸಮಸ್ಯಗಳ ಬಗ್ಗೆ ಚರ್ಚಿಸಿ ಜನರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದು ಜನರ ಹಿತದೃಷ್ಠಿಯಿಂದ ಅತ್ಯತ್ತಮ ಸಲಹೆ ಪಡೆದು ರೈತರಿಗೆ ತಡೆರಹಿತ ವಿದ್ಯುತ್ ಪೂರೈಕೆ, ಹಾಗೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಸರಬರಾಜು, ಪ್ರತಿ ಮನೆಯ ಒಡತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಗಳು, 10ಕೆ.ಜಿ. ಅಕ್ಕಿ ಹಾಗೂ ನಿರುದ್ಯೋಗಿ ಯುವಕ ಯುವತಿಯರಿಗೆ ಪ್ರತಿ ತಿಂಗಳು 3 ಸಾವಿರ ರೂಗಳು ನೀಡುವ ಯೋಜನೆ ಸೇರಿದೆಂತೆ ಜನರ ಸಮಸ್ಯೆಗಳ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲನೇ ತಿಂಗಳಲ್ಲೆ ಈ ಯೋಜನೆಗಳು ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದ ಅವರು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ವನ್ನು ಅಧಿಕಾರಕ್ಕೆ ತರುವಂತೆ ಆಶ್ರೀರ್ವದಿಸುವಂತೆ ಮನವಿ ಮಾಡಿ ಕಳೆದ 5 ವರ್ಷಗಳಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ 2500 ಕೋಟಿ ರೂಗಳ ಅಭಿವೃಧ್ದಿ ಕಾಮಗಾರಿ ಮಾಡಿದ್ದು ಕಾಮಗಾರಿಗಳ ಬಗ್ಗೆ ದಾಖಲಾತಿ ಸಮೇತ ನೀಡಿದ್ದೇನೆ ಕೊರಟಗೆರೆ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದ್ದು ಋಣ ತೀರಿಸುವ ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಕಲಬುರಗಿ ಉತ್ತರದಲ್ಲೂ ಬಿಜೆಪಿಗೆ ಬಂಡಾಯ ಭೀತಿ: ಸ್ಪರ್ಧೆಗೆ ಶಿವಕಾಂತ ಮಹಾಜನ್ ಚಿಂತನೆ
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯಿತ ಮುಖಂಡರುಗಳಾದ ಆರ್.ಎಸ್.ರಾಜಣ್ಣ, ರುದ್ರಪ್ರಸಾದ್, ಎಲ್.ರಾಜಣ್ಣ, ತೀತಾ ಮಂಜುನಾಥ್, ಕೋಳಾಲ ಗಿರೀಶ್, ಕೆ.ಬಿ.ಲೋಕೇಶ್, ಉಮೇಶ್, ಪ್ರತಾಪ್‌ರುದ್ರ, ಉಮಾಮಹೇಶ್, ಪರ್ವತಯ್ಯ, ಸೋಮಣ್ಣ, ಕುಮಾರಸ್ವಾಮಿ, ಈಶಪ್ರಸಾದ್, ವೆಂಕಟೇಶಮೂರ್ತಿ, ಚಂದ್ರಣ್ಣ, ಮಂಜುಳಾ ಆರಾದ್ಯ, ಜಿ.ಪಂ.ಮಾಜಿ ಸದಸ್ಯ ದ್ರಾಕ್ಷಾಯಿಣಿ ರಾಜಣ್ಣ, ಚಂದ್ರಕಳಾಲೋಕೇಶ್, ರೇಖಾಶಂಕರ್, ನಿಖಲ್‌ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಜಿ.ಪಂ.ಮಾಜಿ ಸದಸ್ಯ ಪ್ರಸನ್ನಕುಮಾರ್, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ನಗರಸಭಾ ಮಾಜಿ ಉಪಾದ್ಯಕ್ಷ ವಾಲೇಚಂದ್ರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.