Advertisement
ನಿಗಮವು ಎರಡು ವರ್ಷಗಳ ಹಿಂದೆಯೇ ಡಬಲ್ ಡೆಕ್ಕರ್ ಬಸ್ ಅನ್ನು ರಸ್ತೆಗಿಳಿ ಸಬೇಕಿತ್ತು. ಆದರೆ ಬಸ್ ನಿರ್ಮಾಣ ಮಾಡಲು ವೋಲ್ವೋ, ಲೈಲ್ಯಾಂಡ್, ಟಾಟಾ ಸಹಿತ ಹೆಚ್ಚಿನ ಕಂಪೆನಿಗಳು ಆಸಕ್ತಿ ತೋರಲಿಲ್ಲ. ಇದೇ ಕಾರಣಕ್ಕೆ ಈ ಪ್ರಸ್ತಾವ ಮೂಲೆಗುಂಪಾಗಿತ್ತು. ಈಗ ಕೆಎಸ್ಸಾರ್ಟಿಸಿ ವಿಶೇಷ ಆಸಕ್ತಿ ತೋರಿದ್ದು, 90ರ ದಶಕದ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಿಳಿಸಲು ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ರಸ್ತೆಗಳಿಗೆ ಹೊಂದಬಹುದೇ?, ರಾಜ್ಯದ ಯಾವ ರೂಟ್‌ಗಳಲ್ಲಿ ಸಂಚರಿ ಸಲು ಸಾಧ್ಯವಿದೆ ಎಂಬ ವಿಚಾರಕ್ಕೆ ಸಂಬಂ ಧಿಸಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಡಬಲ್ ಡೆಕ್ಕರ್ ಬಸ್ ಸೇವೆಗೆ ಉತ್ತೇಜನ ನೀಡಬೇಕು ಎಂದು ಕೆಲವು ವರ್ಷಗಳ ಹಿಂದೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆಯನ್ನು ಹೊರ ಡಿಸಿತ್ತು. ಅದರಂತೆಯೆ ಕೆಎಸ್ಸಾರ್ಟಿಸಿಯು ಕೆಲವೊಂದು ಮಾರ್ಗಗಳನ್ನು ಗುರುತು ಮಾಡಿತ್ತು. ಪ್ರಸ್ತಾವಿತ ಮಾರ್ಗಗಳಲ್ಲಿ ಮಂಗಳೂರು ನಗರದ ಕೂಡ ಇತ್ತು. ಬಸ್ ಕಾರ್ಯಾ ಚರಣೆ ನಡೆಸಲು ನಿಗಮವು ಬೆಂಗಳೂರು-ಮಂಗಳೂರು, ಬೆಂಗ ಳೂರು- ಮೈಸೂರು, ಬೆಂಗಳೂರು- ಹೈದರಾಬಾದ್, ಬೆಂಗಳೂರು-ಚೆನ್ನೈ, ಬೆಂಗಳೂರು-ಹುಬ್ಬಳ್ಳಿ ಸೇರಿ ಒಟ್ಟಾರೆ ಐದು ಮಾರ್ಗಗಳನ್ನು ಗುರುತು ಮಾಡಿತ್ತು. ಏನಿದು ಡಬಲ್ ಡೆಕ್ಕರ್ ಬಸ್ ?
ಈ ಬಸ್‌ಗಳಲ್ಲಿ ಎರಡು ಮಹಡಿಗಳಿವೆ. ಇದೇ ಕಾರಣಕ್ಕೆ ಹೆಚ್ಚು ಮಂದಿ ಪ್ರಯಾಣಿಕರನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದರ ಎಂಜಿನ್ ಸಾಮರ್ಥ್ಯ, ನಿರ್ವಹಣೆ ಸಿಂಗಲ್ ಡೆಕ್ಕರ್ ಬಸ್‌ಗಿಂತ ವ್ಯತ್ಯಾಸ ಇರುತ್ತದೆ. 1990ರ ವೇಳೆ ಬೆಂಗಳೂರು ನಗರ ಸಂಚರಿಸಲು ಬಿಎಂಟಿಸಿಯು ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪರಿಚಯಿಸಿತ್ತು.
Related Articles
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಹಂಪಿಯ ಸೌಂದರ್ಯವನ್ನು ಸವಿಯುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ ಬಸ್ ಅನ್ನು ಪರಿಚಯಿಸಲಿದೆ. ಈ ವರ್ಷಾಂತ್ಯಕ್ಕೆ ಮೈಸೂರು-ಹಂಪಿ ನಡುವೆ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 6 ಡಬಲ್ ಡೆಕ್ಕರ್ ಬಸ್ ಪರಿಯಿಸುವ ಸಲುವಾಗಿ 5 ಕೋಟಿ ರೂ. ಅನುದಾನವನ್ನು ನೀಡಿದ್ದರು. ಸದ್ಯ ಟೆಂಡರ್ ಆಹ್ವಾನಿಸಿದ್ದು ಕೆಲವೇ ತಿಂಗಳುಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ.
Advertisement
ಮಾತುಕತೆ ಹಂತದಲ್ಲಿದೆಡಬಲ್ ಡೆಕ್ಕರ್ ಬಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಈ ಬಗ್ಗೆ ಇನ್ನು ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಯಾವೆಲ್ಲ ರೂಟ್‌ಗಳಲ್ಲಿ ಬಸ್ ಓಡಾಟ ನಡೆಸಬೇಕು ಎಂಬ ಕುರಿತು ಜನಾಭಿಪ್ರಾಯ ಪಡೆಯುತ್ತೇವೆ.
-ಶಿವಯೋಗಿ ಸಿ. ಕಳಸದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ – ನವೀನ್ ಭಟ್ ಇಳಂತಿಲ