Advertisement

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

07:15 PM Apr 18, 2024 | Team Udayavani |

ಬೆಂಗಳೂರು: ನಗರದ ಜೆಪಿ ನಗರದ ಸಾರಕ್ಕಿ ಪಾರ್ಕ್ ನಲ್ಲಿ ಗುರುವಾರ ಸಂಜೆ ಇಬ್ಬರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.

Advertisement

ಹತ್ಯೆಗೀಡಾದವರು ಗೊರಗುಂಟೆಪಾಳ್ಯ ನಿವಾಸಿ ಸುರೇಶ್ ಮತ್ತು ಶಾಕಾಂಬರಿ ನಗರ ನಿವಾಸಿ ಅನುಷಾ ಎಂದು ಗುರುತಿಸಲಾಗಿದೆ. ಇಬ್ಬರು ಪಾರ್ಕ್ ನಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ ಹತ್ಯೆ ನಡೆದಿದೆ.

ದುಷ್ಕರ್ಮಿಗಳು ಮೊದಲು ಅನುಷಾರನ್ನು ಇರಿದು ಹತ್ಯೆಗೈದಿದ್ದು, ಬಳಿಕ ಸುರೇಶ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಜೆ.ಪಿ.ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಮತ್ತು ಹತ್ಯೆಗೀಡಾದವರ ಕುರಿತಾಗಿನ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next