Advertisement

ದೋಟಿಹಾಳ: ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಮಧ್ಯೆದ ವಿವಾದದಿಂದಾಗಿ ಬೀದಿ ಬಿದ್ದ ನೇಕಾರರು

05:33 PM Apr 23, 2022 | Team Udayavani |

ದೋಟಿಹಾಳ: ಕೈಮಗ್ಗ ನೇಕಾರರ ಸಹಕಾರ ಉತ್ಪಾದಕರು ಮತ್ತು ಮಾರಾಟ ಸಂಘವನ್ನು ಮುಚ್ಚುವ ಕೆಲಸ ಸಹಕಾರಿ ಸಂಘಗಳ ಅಧಿಕಾರಿಗಳು ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಗ್ರಾಮದ ನೇಕಾರರು ಆರೋಪಿಸುತ್ತಿದ್ದಾರೆ.

Advertisement

ಗ್ರಾಮದ ಕೈಮಗ್ಗ ನೇಕಾರರ ಸಹಕಾರ ಉತ್ಪಾದಕರು ಮತ್ತು ಮಾರಾಟ ಸಂಘದ ಆಡಳಿತ ಮಂಡಳಿ ರದ್ದಾಗಿ 10ದಿನಗಳು ಕಳೆದರು ಆಡಳಿತಾಧಿಕಾರಿ ಇತ್ತ ಕಡೆ ಮುಖ ಮಾಡಿಲ್ಲ. ‘ಇತ್ತ ಇದ್ದ ಆಡಳಿತ ಮಂಡಳಿಯು ಇಲ್ಲ, ಆಡಳಿತಾಧಿಕಾರಿ ಬರುತ್ತಿಲ್ಲ’ ಇದರಿಂದಾಗಿ ಕಳೆದ ಒಂದು ವಾರದಿಂದ ಸಂಘದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದೆ. ಸುಮಾರು 50ಕ್ಕೂ ಜನ ನೇಕಾರರ ಕುಟುಂಬಗಳಿಗೆ ತಾವು ನೇಯ್ದ ಸೀರೆಗೆ ಹಣವಿಲ್ಲದೆ ಪರದಾಡುವಂತಾಗಿದೆ.

ಕೈಮಗ್ಗ ನೇಕಾರರು ಮೊದಲೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗ ಇನ್ನೊಂದು ಸಂಕಷ್ಟಕ್ಕೆ ಎದುರಾಗಿದೆ. ಗಂಡ-ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಈ ನೇಕಾರರ ಸ್ಥಿತಿಗೆ ಗ್ರಾಮದ ಕೈಮಗ್ಗ ನೇಕಾರರ ಸಹಕಾರ ಉತ್ಪಾದಕರು ಮತ್ತು ಮಾರಾಟ ಸಂಘ ಸಾಕ್ಷಿಯಾಗಿದೆ. ಸಂಘದ ಆಡಳಿತ ಮಂಡಳಿ ಹಾಗೂ ರುದ್ರಮುನಿ ಬಿಜ್ಜಳ ಎಂಬ ಮಾಜಿ ನೌಕರರ ಮಧ್ಯೆದ ವಿವಾದ ಉಂಟಾಗಿ ಹೀಗ ನೇಕಾರರು ಬೀದಿಗೆ ಬೀಳುವಂತಾಗಿದೆ. ಗ್ರಾಮದ ಕೈಮಗ್ಗ ನೇಕಾರರ ಸಹಕಾರ ಸಂಘ. ಸಹಕಾರ ಸಂಘಗಳಲ್ಲಿ ರಾಷ್ಟç ಮಟ್ಟದ ಪ್ರಶಸ್ತಿ ಪಡೆದಿರುವ ಕೊಪ್ಪಳ ಜಿಲ್ಲೆಯ ಏಕೈಕ ಸಂಘಕ್ಕೆ ಈಗ ದುಸ್ಥಿತಿಗೆ ಬಂದಿದೆ.

ಕೈಮಗ್ಗ ನೇಕಾರರು ಸಹಕಾರ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯೊಬ್ಬರ ಮಧ್ಯೆದ ವಿವಾದದಿಂದಾಗಿ ಆಡಳಿತ ಮಂಡಳಿಯನ್ನು ಏ.11ರಂದು ರದ್ದಾಗಿದೆ. ಈ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ನೇಮಕವಾದ ಆಡಳಿತಾಧಿಕಾರಿ ಇಲ್ಲಿಯವರೆಗೂ ಸಂಘಕ್ಕೆ ಭೇಟಿ ನೀಡಿಲ್ಲ. ಕಳೆದ 10ದಿನಗಳಿಂದ ದುಡಿದ ಸಂಘದ ನೇಕಾರರಿಗೆ ಹಣವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ದೋಟಿಹಾಳ ಸಹಕಾರ ಸಂಘದಲ್ಲಿ ಗುಮಾಸ್ತರಾಗಿರುವ ರುದ್ರಮುನಿ ಬಿಜ್ಜಳ ಎಂಬುವವರನ್ನು 2021 ರ ಸೆಪ್ಟಂಬರ್ ತಿಂಗಳಲ್ಲಿ ಅವರಿಗೆ ವೇತನವನ್ನು ಕೇವಲ 4500 ರೂಪಾಯಿ ನಿಗಿದಿ ಮಾಡಿದ್ದರು.  ವೇತನ ಕಡಿಮೆ ಮಾಡಿದ್ದನ್ನು ಪ್ರಶ್ನಿಸಿ ವೇತನ ಪಡೆಯದೆ ಇರುವದರಿಂದ ಆಡಳಿತ ಮಂಡಳಿಯವರು  ರುದ್ರಮುನಿಯವರನ್ನು ಕೆಲಸದಿಂದ ತೆಗೆದು. ದಿನಗೂಲಿ ಮೇಲೆ ನಿವೃತ್ತರೊಬ್ಬರನ್ನು ನೇಮಿಸಿಕೊಂಡಿದ್ದರು. ಇದು ನಿಯಮ ಬಾಹಿರವಾಗಿ ನೇಕಾರರ ಸಂಘಕ್ಕೆ ನೇಮಕ ಮಾಡಿಕೊಂಡಿರುವ ಬಗ್ಗೆ ರುದ್ರಮುನಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ದೂರಿನನ್ವಯ ವಿಚಾರಣೆ ನಡೆಸಿದ ಉಪ ನಿಬಂಧಕರು ಎಪ್ರಿಲ್ 11 ರಂದು ಸಂಘದ ಆಡಳಿತ ಮಂಡಳಿಯನ್ನು ರದ್ದು ಮಾಡಿ, ಸಂಘಕ್ಕೆ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ವೆಂಕರಡ್ಡಿಯವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಿದ್ದರು.

Advertisement

ನಮ್ಮ ಕೈಮಗ್ಗ ನೇಕಾರರ ಸಂಘದ ಆಡಳಿತ ಮಂಡಳಿಯನ್ನು ಸಹಕಾರ ಇಲಾಖೆಯ ಉಪನಿಬಂಧಕರ ರದ್ದು ಮಾಡಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶಿಸಿದ್ದರು. ಇದುವರೆಗೂ ಸಂಘಕ್ಕೆ ಆಡಳಿತಾಧಿಕಾರಿ ಬರದೇ ಇರುವುದು ನೋಡಿದರೆ. ಸಂಘವನ್ನು ಆಶ್ವತವಾಗಿ ಮುಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದರು. -ಸುರೇಶ ಮಾಳಗಿ, ಚನ್ನಪ್ಪ ಸಕ್ರಿ.ಗ್ರಾಮದ ನೇಕಾರರು.

ಇದರ ಬಗ್ಗೆ ಸಹಕಾರ ಇಲಾಖೆಯ ಉಪನಿಬಂಧಕರನ್ನು ಕೇಳಿದರೆ ನೇಮಕವಾದ ಆಡಳಿತಾಧಿಕಾರಿಯು ಕಬ್ಬರಗಿ ಸಹಕಾರ ಸಂಘದ ಚುನಾವಣೆ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ದೋಟಿಹಾಳದ ನೇಕಾರರ ಸಂಘಕ್ಕೆ ಹೋಗಿಲ್ಲ. ಅಲ್ಲಿಯ ನೇಕಾರರ ಸಮಸ್ಯೆ ಶೀಘ್ರ ಬಗೆಹರಿಸುವುದಾಗಿ ಹೇಳಿದ್ದರು.  -ಬಿ.ಎ ಕೇಸರಿಮಠ,  ಉಪನಿಬಂಧಕರು, ಜಿಲ್ಲಾ ಸಹಕಾರ ಇಲಾಖೆ ಕೊಪ್ಪಳ.

 

-ವರದಿ: ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next