Advertisement

ಜಲಜೀವನ್ ಮೀಷನ್ ಕಾಮಗಾರಿ ಆರಂಭವಾಗುವುದು ಯಾವಾಗ..? ರಸ್ತೆ ಅಗೆದು ವರ್ಷವಾದರೂ ಕಾಮಗಾರಿ ಆರಂಭವಿಲ್ಲ

06:46 PM Jan 10, 2023 | Team Udayavani |

ದೋಟಿಹಾಳ: ಕಳೆದ ವರ್ಷ ಜಾತ್ರೆಗಳು ಆರಂಭಕ್ಕೆ ಒಂದು ತಿಂಗಳ ಇರುವಾಗ ಜೆಜೆಎಂ ಕಾಮಗಾರಿಯ ಕುಡಿಯುವ ನೀರಿ ಪೈಪ್ಲೆöÊನ್ ಹಾಕಲು ಗ್ರಾಮದ ಬಹುತ್ತೇಕ ರಸ್ತೆಗಳು ಸಿಸಿ ರಸ್ತೆಯನ್ನು ಅಗೆದು ಪೈಪುಗಳನ್ನು ಹಾಕದೆ ವರ್ಷವಾದರೂ ಆಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ಬೈಕ್ ಸವಾರರು ಮತ್ತು ಸಾರ್ವಜನಿಕರು ಎಡವಿ ಬಿದ್ದಿರುವ ಘಟನೆ ನಡೆದಿದ್ದರೂ ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಮೂಕಪೆಕ್ಷಕರಾಗಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

Advertisement

ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೇ ಜಲಜೀವನ್ ಕುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮದ ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ಗ್ರಾಮದಲ್ಲಿ ಹೊಸ ಪೈಪ್ಲೈನ್ ಹಾಕಲು ಸಿಸಿ ರಸ್ತೆಗಳನ್ನು ಅಗೆದು ವರ್ಷವಾದರೂ ಪೈಪುಗಳನ್ನು ಹಾಕದೇ ಅಗೆದರು. ಪೈಪುಗಳನ್ನು ಹಾಕದೆ ರಸ್ತೆಯನ್ನು ಆಗೆ ಬಿಟ್ಟಿರುವುದರಿಂದ ಸಾರ್ವಜನಿಕರ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಈ ರಸ್ತೆಯಲ್ಲಿ 100ಕ್ಕೂ ಹೆಚ್ಚು ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಸುಮಾರು 8-10 ಜನರಿಗೆ ಗಂಭೀರವಾದ ಗಾಯವಾಗಿದೆ. ಇಷ್ಟಾದರೂ ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಮೂಕಪೇಕ್ಷಕರಾಗಿದ್ದಾರೆ.

ಸದ್ಯ ಗ್ರಾಮದಲ್ಲಿ ಒಂದು ತಿಂಗಳಿನಲ್ಲಿ ಎರಡು ಜಾತ್ರೆಗಳು ಬರುತ್ತಿವೆ. ಇನ್ನಾದರೂ ರಸ್ತೆಯನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕಳೆದ ವರ್ಷ ಜಾತ್ರೆಗೆ ಬಂದ ಸಾವಿರಾರೂ ಭಕ್ತರು ಇಲ್ಲಿಯ ಜನಪ್ರತಿನಿಧಿಗಳಿಗೆ ಮತ್ತು ಮುಖಂಡರಿಗೆ ಚೀಮಾರಿ ಹಾಕಿದಂತೆ ಈ ವರ್ಷವೂ ಚೀಮಾರಿ ಹಾಕುವುದು ಗ್ಯಾರಂಟಿ. ಹೀಗಾಗಿ ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾತ್ರೆಗಳು ಆರಂಭಕ್ಕಿಂತ ಮುಂಚಿತವಾಗಿ ಗ್ರಾಮದ ರಸ್ತೆಗಳನ್ನು ಸರಿಪಡಿಸಿ ಗ್ರಾಮದ ಹೆಸರು ಉಳಿಸಿ ಎಂಬುವುದು ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.

ರಥಬೀದಿ ರಸ್ತೆ ಹಾಳು: ಗ್ರಾಮದ ಬನಶಂಕರಿದೇವಿ ರಥಬೀದಿಯ ಸಿಸಿ ರಸ್ತೆಯನ್ನು ಅಗೆದು ಒಂದು ವರ್ಷವಾದರು ಇನ್ನೂ ರಸ್ತೆಯಲ್ಲಿ ಪೈಪುಗಳನ್ನು ಹಾಕದೇ ಆಗೇ ಬಿಟ್ಟಿದ್ದಾರೆ. ಕಳೆದ ವರ್ಷ ಜಾತ್ರೆ ವೇಳೆ ರಸ್ತೆ ಹಾಳು ಮಾಡಿದ ಕಾರಣ ರಸ್ತೆಯ ಮೇಲೆ ಮರಂ ಹಾಕಿ ದೇವಿಯ ತೇರು ಎಳೆಯಲಾಯಿತು. ರಸ್ತೆ ಮೇಲೆ ಮರಂ ಹಾಕಿದ ಕಾರಣ ಜಾತ್ರೆಯ ನಂತರ ರಸ್ತೆಯ ಮೇಲೆ ನೀರು ನಿಂತು ಸಂಚಾರಕೆ ತೊಂದರೆಯಾಯಿತು. ಇದನ್ನು ಸರಿಪಡಿಸಲು ಗ್ರಾಪಂ ಸಿಬ್ಬಂದಿಗಳು ಹರಸಾಹಸಪಟ್ಟರು. ಸದ್ಯ ಇದೇ ಫೆ:10ರಂದು ದೇವಿ ಜಾತ್ರೆ ಇದೆ. ಈ ವೇಳೆಗಾದರೂ ಈ ರಸ್ತೆಯನ್ನು ಸರಿಪಡಿಸಿ ದೇವಿ ರಥೋತ್ಸವಕ್ಕೆ ಅನುಕೂಲ ಮಾಡಿಕೊಡಿ ಎಂಬುವುದು ಭಕ್ತರ ಅಭಿಪ್ರಾಯವಾಗಿದೆ.

ಸದ್ಯದಲ್ಲಿಯೇ ಗ್ರಾಮದಲ್ಲಿ ಫೆ:10 ಮತ್ತು ಫೆ:20ರಂದು ಎರಡು ಜಾತ್ರೆಗಳು ಆರಂಭವಾಗುತ್ತಿದ್ದು ಗ್ರಾಮದ ಸುತ್ತ ಮುತ್ತಲ್ಲ ಗ್ರಾಮಗಳಿಂದ ಸಾವಿರಾರೂ ಜನ ಜಾತ್ರೆಗೆ ಆಗಮಿಸುತ್ತಾರೆ. ಗ್ರಾಮದ ಮುಖ್ಯ ರಸ್ತೆಗಳು ಹಾಳಾಗಿವೆ ಅದನ್ನು ಸರಿಪಡಿಸಿ. ಹೀಗಾಗಲೇ ಗ್ರಾಮಸ್ಥರು ಸಿಸಿ ರಸ್ತೆಗಳ ಹಾಳು ಮಾಡಿದ್ದರಿಂದ ನಮ್ಮಗೆ ಗ್ರಾಮಸ್ಥರು ಛೀಮಾರಿ ಹಾಕುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಜೆಜೆಎಂ ಕಾಮಗಾರಿಯ ಬಗ್ಗೆ ಆರೋಪಿಸಿದರು.

Advertisement

ಗ್ರಾಮದ ಜೆಜೆಎಂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಮರಣ ಹೊಂದಿದ ಕಾರಣ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಸದ್ಯ ಈ ಕಾಮಗಾರಿಯನ್ನು ಬೇರೆಯವರು ಪಡೆದಿದ್ದಾರೆ. 8-10 ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
– ಮುತ್ತಪ್ಪ ಛಲವಾದಿ. ಪಿಡಿಒ ದೋಟಿಹಾಳ ಗ್ರಾಪಂ.

ಸದ್ಯ ತಾಲೂಕಿನ ಅನೇಕ ಕಡೇಗಳಲ್ಲಿ ಜೆಜೆಎಂ ಕಾಮಗಾರಿ ಆರಂಭವಾಗಿದೆ. ಹಂತ ಹಂತವಾಗಿ ತಾಲೂಕಿನ ಎಲ್ಲಾ ಗ್ರಾಮಗಳ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ದೋಟಿಹಾಳ ಗ್ರಾಮದ ಬನಶಂಕರಿದೇವಿ ಜಾತ್ರೆ ಆರಂಭಕ್ಕಿಂತ ಮುಂಚಿತವಾಗಿ ರಥಬೀದಿಯ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ.
– ವಿಲಾಸ್. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಕುಷ್ಟಗಿ.

– ಮಲ್ಲಿಕಾರ್ಜುನ ಮೆದಿಕೇರಿ. ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next