Advertisement
ಇದು ತಾಲೂಕು ಕೇಂದ್ರದಿಂದ ಕೇವಲ 6 ಕಿ.ಮೀ ದೂರದಲ್ಲಿ ಇರುವು ಬಿಜಕಲ್ ಗ್ರಾಮದ ಜನತಾ ಬಡವಾಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸ್ಥಿತಿ. ಕಳೆದ 2-3 ವರ್ಷಗಳಿಂದ ಶಾಲಾ ಮಕ್ಕಳು ಸೂಕ್ತ ಕಟ್ಟಡವೂ ಇಲ್ಲದೆ ಮಕ್ಕಳು ಪರದಾಡುವಂತಾಗಿದೆ.
Related Articles
Advertisement
ಮೂಲ ಸೌಲಭ್ಯವಿಲ್ಲ: ಶಾಲೆ ಸ್ಥಾಪನೆಯಾಗಿ ದಶಕಗಳೇ ಗತಿಸಿದರೂ, ಮೂಲ ಸೌಲಭ್ಯ ಕೊರತೆ ಕಾಣುತ್ತಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರೂ, ಶಾಲಾ ಮಕ್ಕಳಿಗೆ ಶೌಚಾಲಯದ, ಸರಿಯಾದ ಆಟದ ಮೈದಾನ. ಬಿಸಿಯೂಟದ ಕೊಠಡಿ ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳ ಕೊರತೆ ಕಾಣುತ್ತಿದೆ.
ಶಾಲೆಗೆ ಹೆಚ್ಚುವರಿ ಕೊಠಡಿ ನೀಡಿದರೆ ಮಕ್ಕಳನ್ನು ಪ್ರತ್ಯೆಕ ತರಗತಿಗಳನ್ನಾಗಿ ಮಾಡಿದರೆ ಕಲಿಯಲು ಇನ್ನೂ ಉತ್ಸಾಹ ಮೂಡುತ್ತದೆ ಎಂಬುದು ಶಿಕ್ಷಕರ ಬೇಡಿಕೆ. ಹಾಗೂ ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳ ಸಾಮಗ್ರಿಗಳು ಕೊಠಡಿಗಳಲ್ಲಿ ಇಟ್ಟಿರುವುದರಿಂದ ಮಕ್ಕಳಿಗೆ ಕೊಠಡಿಯ ಕೊರತೆಯಾಗಿದೆ. ಕಾಮಗಾರಿ ಕೆಲಸ ಮಾಡುವರಿಗೆ 3-4 ಬಾರಿ ಕೊಠಡಿಗಳಲ್ಲಿ ಇರುವ ಸಾಮಗ್ರಿಗಳನ್ನು ಖಾಲಿ ಮಾಡಿ ಎಂದು ಹೇಳಿದರು ಇನ್ನೂ ಮಾಡಿಲ್ಲ- ರುದ್ರಮ್ಮ, ಗುತ್ತೂರು ಶಾಲಾ ಮುಖ್ಯಶಿಕ್ಷಕಿ.
ಬಿಜಕಲ್ ಜನತಾ ಬಡಾವಣೆಯ ಶಾಲೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಾಂಪೌಂಡ್ ಮತ್ತು ಬಿಸಿಯೂಟದ ಕೊಠಡಿಯ ಕಾಮಗಾರಿಗಳು ನಡೆದ್ದಿದೆ ಹಾಗೂ ಒಂದು ಶೌಚಾಲಯವನ್ನು ನಿರ್ಮಾಣ ಮಾಡುತ್ತೇವೆ.–ಆನಂದರಾವ್ ಕುಲಕರ್ಣಿ, ಗ್ರಾಪಂ ಪಿಡಿಒ ಬಿಜಕಲ್
-ಮಲ್ಲಿಕಾರ್ಜುನ ಮೆದಿಕೇರಿ