Advertisement

Dotihal: ಮುಖ್ಯ ಶಿಕ್ಷಕಿ ಅಮಾನತು ಖಂಡಿಸಿ ಗ್ರಾಮಸ್ಥರಿಂದ ಶಾಲೆಯ ಮುಂದೆ ಪ್ರತಿಭಟನೆ

01:24 PM Aug 27, 2024 | Team Udayavani |

ದೋಟಿಹಾಳ: ಬಿಜಕಲ್ ಗ್ರಾಮದಲ್ಲಿ ಕಳೆದ ಶುಕ್ರವಾರ(ಆ:23 ) ರಂದು ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥರಾಗಿದ್ದರು. ಇದು ಶಾಲಾಮುಖ್ಯ ಶಿಕ್ಷಕಿಯ ನಿರ್ಲಕ್ಷ್ಯವೆಂದು ಕೊಪ್ಪಳ ಡಿಡಿಪಿಐ ಹೊರಡಿಸಿರುವ ಅಮಾನತು ಆದೇಶವನ್ನು ಖಂಡಿಸಿ ಮಂಗಳವಾರ(ಆ.27ರಂದು) ಗ್ರಾಮಸ್ಥರು , ವಿದ್ಯಾರ್ಥಿಗಳು ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಹಿನ್ನೆಲೆ: ಕಳೆದ ಶುಕ್ರವಾರ ಶಾಲಾ ಮಕ್ಕಳು ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥರಾಗಿದ್ದರು. ಹೀಗಾಗಿ ಶನಿವಾರ ಗ್ರಾಮಕ್ಕೆ ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯರು, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳು ಸೇರಿದಂತೆ ತಾಲೂಕಿನ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಶುಕ್ರವಾರ ಶಾಲೆಯಲ್ಲಿ ಮಾಡಿದ ಬಿಸಿಯೂಟದಲ್ಲಿ ಕಲಬರಿಕೆ ಖಾರದಪುಡಿಯನ್ನು ಸಾಂಬರಿನಲ್ಲಿ ಹಾಕಿ ಅಡುಗೆ ಮಾಡಿದ್ದರಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಇದು ಶಾಲಾಮುಖ್ಯ ಶಿಕ್ಷಕಿಯ ನಿರ್ಲಕ್ಷ್ಯ ಹಾಗೂ ಅಡುಗೆದಾರರ ಬೇಜವಾಬ್ದಾರಿ ಎಂದು ಮಕ್ಕಳ ಹಕ್ಕು ಆಯೋಗದ ಸದಸ್ಯರು ಆರೋಪಿಸಿದ್ದರು.

ಇತ್ತ ಗ್ರಾಮಸ್ಥರು ಇದರಲ್ಲಿ ಶಾಲೆಯ ಅಡುಗೆ ಸಿಬ್ಬಂದಿಗಳ ತಪ್ಪಿದ್ದು, ಅವರನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಬೇಕೆಂದು ಒತ್ತಾಯ ಮಾಡಿದ್ದಾರೆ.

Advertisement

ಈ ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಅವರ ಯಾವುದೇ ತಪ್ಪಿಲ್ಲ. ಆದರೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಕೊಪ್ಪಳ ಡಿಡಿಪಿಐ ಅವರು ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನು ಖಂಡಿಸಿ ಮಂಗಳವಾರ ಗ್ರಾಮಸ್ಥರು, ಶಾಲಾ ಮಕ್ಕಳು ಶಾಲೆಯ ಮುಂದೆ ಕೆಲವು ಸಮಯ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ಈ ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕಿಯ ಕೈವಾಡ ಏನು, ಇವರನ್ನು ಅಮಾನತು ಮಾಡಿರುವುದು ಯಾಕೆ? ಅಧಿಕಾರಿಗಳು ಶಿಕ್ಷಕಿಯ ಅಮಾನತು ಆದೇಶ ಹಿಂಪಡೆಯುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪಾಲಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next