Advertisement

Dotihal ಬೈಕ್ -ಲಾರಿ ಅಪಘಾತ: ಸವಾರ ಸ್ಥಳದಲ್ಲೇ ಸಾವು

07:31 PM Aug 15, 2023 | Team Udayavani |

ದೋಟಿಹಾಳ: ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕ್ಯಾದಿಗುಪ್ಪಾ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ದೋಟಿಹಾಳ ಗ್ರಾಮದ ವೀರಭದ್ರಪ್ಪ ತಂದಿ ಶಿನಪ್ಪ ಬಳಿಗೇರ(30) ಮೃತ ದುರ್ದೈವಿ.

ಇನ್ನೊಬ್ಬ ಸಹಪ್ರಯಾಣಿಕ ಗಂಭೀರ ಗಾಯಗೊಂಡಿದ್ದು, ಕುಷ್ಟಗಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೋಟಿಹಾಳ ಗ್ರಾಮದಿಂದ ಕ್ಯಾದಿಗುಪ್ಪಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಹಾರಾಣಿ ಡಾಬಕ್ಕೆ ಊಟಕ್ಕಾಗಿ ಸ್ನೇಹಿತನ ಜೊತೆ ಹೋಗುವ ವೇಳೆ ಈ ಘಟನೆ ನಡೆದಿದೆ ಎಂದು ಸಾರ್ವಜನಿಕ ವಲಯದಿಂದ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Advertisement

ಮೃತ ವ್ಯಕ್ತಿಯು ಪತ್ನಿ ಹಾಗೂ ತಾಯಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next