Advertisement

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ;ಗುಣಮಟ್ಟದಲ್ಲೂ ಪ್ರಶಂಸೆ

03:11 PM Mar 12, 2022 | Team Udayavani |

ದೋಟಿಹಾಳ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಜ್ಯ ಮಟ್ಟದಲ್ಲಿ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದ್ದು. ಇದೀಗ 2021-22ನೇ ಸಾಲಿನ ಗುಣಮಟ್ಟ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಆರೋಗ್ಯ ಕೇಂದ್ರವು ಪ್ರಶಂಸೆಗೆ ಪಾತ್ರವಾಗಿದೆ.

Advertisement

ಕಳೆದ 2016-17ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ ಕಾಯಕಲ್ಪ ಪ್ರಶಸ್ತಿಯಲ್ಲಿ(ಸಮಾಧಾನಕರ) ಪಡೆದು, ರಾಜ್ಯ ಮಟ್ಟದಲ್ಲಿ 2017-18ನೇ ಸಾಲಿನಲ್ಲಿ ಕಾಯಕಲ್ಪ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. 2020-21ರಲ್ಲಿ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡು. ಈಗ 2021-22ನೇ ಸಾಲಿನಲ್ಲಿ ಕೇಂದ್ರದ ಎನ್‌ಕ್ಯೂಎಎಸ್‌ಗೆ(ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು)ಆಯ್ಕೆಯಾಗಿದೆ.

ಪ್ರಾಥಮಿಕ ಕೇಂದ್ರದ 24 ಜನ ಸಿಬ್ಬಂದಿಗಳು ಇದು, ಇದರಲ್ಲಿ ವೈದ್ಯಾಧಿಕಾರಿಗಳು, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನೀಷಿಯನ್, ಐದು ಜನ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮೂವರು ಸ್ಟಾಫ್‌ನರ್ಸ್, ಒಬ್ಬರು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಾಗೂ ಇಬ್ಬರು ಗ್ರೂಪ್ ಡಿ ನೌಕರರಿದ್ದಾರೆ. ಈ ಕೇಂದ್ರದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು. ಸಾರ್ವಜನಿಕರಿಗೆ 24/7 ರೀತಿಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ. ಚಿಕಿತ್ಸೆ, ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಪ್ರತಿ ತಿಂಗಳ ಸುಮಾರು 20-25 ಹೆರಿಗೆ ಪ್ರಕರಣಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗು ಲಕ್ಷಣಗಳು ಇವೆ.

ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು ನಾಲ್ಕಿ ಎಕರೆ ಜಾಗದಲ್ಲಿ ಇದು, ಕೇಂದ್ರದ ಆವರಣದಲ್ಲಿ ಗಿಡ ಮೂಲಿಕೆ ಸಸಿಗಳನ್ನು ಬೆಳೆಸಲಾಗಿದ್ದು, ಉತ್ತಮವಾಗಿ ಪರಿಸಸವಿವಂತೆ ಕಾಳಜಿ ವಹಿಸಲಾಗಿದೆ.

Advertisement

ಡೆಂಗೆ-ಚಿಕೂನ್ ಗುನ್ಯಾ ತಡೆಗೆ ಕೇಂದ್ರದ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಲಾರ್ವಾ ಸಮೀಕ್ಷೆ ಮಾಡಲಾಗಿದು. ಇದರ ಜೊತಗೆ ಲಾರ್ವಾಹಾರ ಮೀನಗಳ ಸಾಕಣೆಗೆ ತೊಟ್ಟಿ ನಿರ್ಮಿಸಲಾಗಿದೆ. ಈ ಎಲ್ಲಾ ಆಂಶಗಳನ್ನಾಧರಿಸಿ ಈ ಕೇಂದ್ರಕ್ಕೆ ಪ್ರಶಸ್ತಿ ನೀಡಲಾಗಿದೆ.

ಸದ್ಯ ಕೇಂದ್ರದ ಕಾಂಪೌಂಡ್ ಕಾಮಗಾರಿ ಆರಂಭವಾಗಿದ್ದು. ನಂತರ ಆವರಣದಲ್ಲಿ ಇನ್ನೂಷ್ಟು ಗಿಡಗಳನ್ನು ಬೆಳೆಸಲಾಗುತ್ತದೆ.

ಪ್ರಾಥಮಿಕ ಆರೋಗ್ಯ ಕೇಂದ್ರವು ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿರುವುದಕ್ಕೆ ಇಲ್ಲಿನ ಸಿಬ್ಬಂದಿ ಒಗ್ಗಟ್ಟಿನ ಕೆಲಸ ಕಾರಣವಾಗಿದೆ. ವೈದ್ಯಾಧಿಕಾರಿ ಡಾ|| ಸಂತೋಷಕುಮಾರ ಬಿರದಾರ ಅವರು ಕಳೆದ ಒಂದು ವರ್ಷದಿಂದ ಉತ್ತಮ ಸೇವೆ ಸಲಿಸುತ್ತಿದ್ದು. ಕೇಂದ್ರದ ಸಿಬ್ಬಂದಿಗಳನ್ನು ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಹೋಗುವ ಮೂಲಕ ಸಾಧನೆಗೆ ಕಾರಣರಾಗಿದ್ದಾರೆ.

ಸರಕಾರಿ ಆಸ್ಪತ್ರೆಗಳೆಂದರೆ ಜನರು ಹಿಂದಕ್ಕೆ ಸರಿಯುವ ಇಂತಹ ಕಾಲದಲ್ಲಿ ಗ್ರಾಮೀಣ ಭಾಗದ ಈ ಪ್ರಾಥಮಿಕ ಆರೋಗ್ಯ ಕೇಂದ್ರವು ದೋಟಿಹಾಳ ಗ್ರಾಮದ ಸುತ್ತಮುತ್ತಲ್ಲ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವುದರಿಂದ ಜನರಿಗೆ ಮಾತ್ರ ಅಲ್ಲದೆ ಸರಕಾದ ಮಟ್ಟದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ.

ನಮ್ಮ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮ ಸೇವೆಯೊಂದಿಗೆ ಸಾರ್ವಜನಿಕ ಪ್ರತಿಯೊಬ್ಬರಿಗೂ ತಲುಪಿಸುವ ಮುಖ್ಯ ಉದ್ದೇಶವನ್ನು ನಾವು ಹೊಂದಿದ್ದೇವೆ. ಇಂದು ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮೆಲ್ಲ ಸಿಬ್ಬಂದಿಗಳ ಪರಿಶ್ರಮದಿಂದ ಮಾತ್ರ.
– ಡಾ|| ಸಂತೋಷಕುಮಾರ ಬಿರದಾರ
ವೈದ್ಯಾಧಿಕಾರಿ ಪ್ರಾಥಮಿಕ ಕೇಂದ್ರ ದೋಟಿಹಾಳ.

ದೋಟಿಹಾಳ ಪ್ರಾಥಮಿಕ ಕೇಂದ್ರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವದು ನಮ್ಮ ತಾಲೂಕಿಗೆ ಹೆಮ್ಮೆ ವಿಷಯ. ಇದುವರೆಗೂ ತಾಲೂಕಿನಲ್ಲಿ ಯಾವುದೇ ಆರೋಗ್ಯ ಕೇಂದ್ರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿಲ್ಲಿ. ಇದೇ ಮೊದಲ ಭಾರಿಗೆ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಆಯ್ಕೆಯಾಗಿದೆ. ಇದನ್ನೇ ಮಾದರಿಯಾಗಿ ಇಟ್ಟುಕೊಂಡು ಉಳಿದ ಕೇಂದ್ರಗಳನ್ನು ಅಭಿವೃದ್ಧಿ ಮಾಡುತ್ತೇವೆ.
– ಡಾ||ಆನಂದ ಗೋಟೂರ.
ತಾಲೂಕ ಆರೋಗ್ಯ ಅಧಿಕಾರಿ ಕುಷ್ಟಗಿ.

– ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next