Advertisement
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಚೆಗೆ ನಡೆದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದ ಕಾರಣಕ್ಕಾಗಿ ಸಂಸದ ವಿ.ಎಸ್.ಉಗ್ರಪ್ಪ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೃತಜ್ಞತಾ ಸಮಾವೇಶಕ್ಕೆ ಬರುತ್ತಿದ್ದಾರೆ. ಜಿಲ್ಲೆಯ ಜನ ಬರದಿಂದ ತೊಂದರೆ ಅನುಭವಿಸುತ್ತಿರುವಾಗ, ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರವಾಗದ ಸಂದರ್ಭದಲ್ಲಿ ಸಮಾವೇಶದ ಅಗತ್ಯವಿದೆಯಾ? ರೈತರು ಸಂಕಷ್ಟದಲ್ಲಿರುವಾಗ ಸಮಾವೇಶಕ್ಕಾಗಿ ಲಕ್ಷಾಂತರ ರೂ.ಖರ್ಚು ಮಾಡಲಾಗುತ್ತಿದೆ. ಬಾಕಿ ಹಣಕ್ಕಾಗಿ ಕಬ್ಬು ಬೆಳೆಗಾರರ ಹೋರಾಟ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕುಮಾರಸ್ವಾಮಿ ಮತ್ತು ಕೇವಲ ಆರು ತಿಂಗಳಿಗಷ್ಟೇ ಸಂಸದರಾದ ವಿ.ಎಸ್.ಉಗ್ರಪ್ಪರಿಗೆ ಮೋಜು-ಮಸ್ತಿ ಸರಿಯಲ್ಲ ಎಂದರು. Advertisement
ದೋಸ್ತಿ ಪಕ್ಷದವರ ಮೋಜು-ಮಸ್ತಿ ಸರಿಯಲ್ಲ: ಶ್ರೀರಾಮುಲು
06:40 AM Nov 23, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.