Advertisement

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ

01:32 AM Nov 28, 2024 | Team Udayavani |

ಹೊಸದಿಲ್ಲಿ: ಉದ್ದೀಪನ ಪರೀಕ್ಷೆಗಾಗಿ ಮಾದರಿ ನೀಡಲು ನಿರಾಕರಿಸಿದರೆಂಬ ಕಾರಣಕ್ಕಾಗಿ ಭಾರತದ ಕುಸ್ತಿಪಟು, ಒಲಿಂಪಿಕ್ಸ್‌ ಪದಕ ವಿಜೇತ ಬಜರಂಗ್‌ ಪೂನಿಯಾ ಮೇಲೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) 4 ವರ್ಷಗಳ ನಿಷೇಧ ಹೇರಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಜರಂಗ್‌, ನಾನೊಂದು ವೇಳೆ ಬಿಜೆಪಿಗೆ ಸೇರುತ್ತಿದ್ದರೆ ನಿಷೇಧಕ್ಕೆ ಒಳಗಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಕಳೆದ ಮಾರ್ಚ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ನಡೆಸುವುದಕ್ಕೂ ಮುನ್ನ, ಉದ್ದೀಪನ ಪರೀಕ್ಷೆಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸುವ ಮೂಲಕ ಬಜರಂಗ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ನಾಡಾ ಹೇಳಿದೆ. ಆದರೆ, ಮಾದರಿ ಸಂಗ್ರಹಿಸಲು ಬರುವಾಗ ನಾಡಾ ಅಧಿಕಾರಿಗಳು ಅವಧಿ ಮೀರಿದ ಕಿಟ್‌ ತಂದಿದ್ದರು. ಇದಕ್ಕಾಗೇ ನಾನು ಮಾದರಿ ನೀಡಿರಲಿಲ್ಲ ಎಂದು ಬಜರಂಗ್‌ ಸ್ಪಷ್ಟನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next