Advertisement
ಹುಬ್ಬಳ್ಳಿ: ಕೋವಿಡ್ ಸೋಂಕಿನ ಎರಡನೇ ಅಲೆ ರುದ್ರನರ್ತನದ ಸರಪಳಿ ಕತ್ತರಿಸಲು ಜನರ ಓಡಾಟಕ್ಕೆ ಬ್ರೇಕ್ ಹಾಕಬೇಕಾಗಿದ್ದು, ತರಕಾರಿ, ದಿನಸಿ ವಸ್ತುಗಳ ಖರೀದಿಗೆ ಅಂಗಡಿಗೆ ಹೋಗುವ ಬದಲು ಮನೆ ಬಾಗಿಲಿಗೆ ವಸ್ತುಗಳನ್ನು ದೊರಕಿಸುವತ್ತ ಮಹಾನಗರ ಪಾಲಿಕೆ ಮುಂದಾಗಿದೆ.
Related Articles
Advertisement
ಕಳೆದ ವರ್ಷ ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. 930 ವ್ಯಾಪಾರಿಗಳಿಗೆ ಅವಕಾಶ ನೀಡಿ ಓಡಾಡಿಕೊಂಡು ಮಾರಾಟ ಮಾಡಲು ಪಾಸ್ ವಿತರಿಸಿ, ಪಾಲಿಕೆ ವೆಬ್‌ಸೈಟ್‌ನಲ್ಲಿ ವಾರ್ಡ್ ವಾಡು ವ್ಯಾಪಾರಿಗಳ ಮೊಬೈಲ್ ಸಂಖ್ಯೆ ಹಾಗೂ ಅವರ ಮಾಹಿತಿಯ ಪಟ್ಟಿ ಪ್ರಕಟಿಸಲಾಗಿತ್ತು. ಈಗಾಗಲೇ ಎಲ್ಲ ಸಿದ್ಧತೆಯಿದ್ದು, ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಕಳೆದ ಬಾರಿಯಂತೆ ಈ ಸಲ ತಳ್ಳುವ ಗಾಡಿಗಳ ಮೂಲಕ ತರಕಾರಿ ವ್ಯಾಪಾರ ಮಾಡಲು ಯಾವುದೇ ಪಾಸ್ ಅಗತ್ಯವಿಲ್ಲ. ಈಗಾಗಲೇ ಕೆಲವರು ತಳ್ಳುವ ಗಾಡಿಗಳ ಮೂಲಕ ವ್ಯಾಪಾರ ಮಾಡುತ್ತಿದ್ದು, ಪೊಲೀಸರಾಗಲಿ, ಪಾಲಿಕೆ ಸಿಬ್ಬಂದಿಯಾಗಲಿ ಆಕ್ಷೇಪಿಸುತ್ತಿಲ್ಲ.
ಇನ್ನು ಈ ಬಾರಿ ಕರ್ಫ್ಯೂ ಆರಂಭದಿಂದಲೂ ಹೋಟೆಲ್‌ಗಳಿಂದ ತಿಂಡಿ, ಊಟ ಪಾರ್ಸಲ್‌ಗೆ ಅನುಮತಿಸಲಾಗಿದೆ. ಇದಕ್ಕಾಗಿ ಒಂದಿಷ್ಟು ಜನರು ಬಂದು ಹೋಗುವುದು ನಡೆಯುತ್ತಿದೆ. ಜೊಮ್ಯಾಟೋ, ಸ್ವಿಗ್ಗಿಯಂತಹ ಕಂಪನಿಗಳ ಮೂಲಕವೇ ಗ್ರಾಹಕರಿಗೆ ಪಾರ್ಸಲ್ ತಲುಪಿಸುವ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿಸುವ ಕೆಲಸ ನಡೆಯುತ್ತಿದೆ. ಪಾಲಿಕೆಯ ಈ ಕಸರತ್ತಿಗೆ ವ್ಯಾಪಾರಿಗಳ ಹಾಗೂ ಜನರ ಸಹಕಾರ ದೊರೆತರೆ ಅಗತ್ಯ ವಸ್ತುಗಳ ಖರೀದಿಗಾಗಿ ಹೊರಬರುವುದಕ್ಕೆ ಒಂದಿಷ್ಟು ಕಡಿವಾಣ ಬೀಳಲಿದೆ.