Advertisement
ಇದೇ ವೇಳೆ ಮಾತನಾಡಿದ ನಾಯಕ ನಟ ಪೃಥ್ವಿ ಅಂಬಾರ್, “ಈ ಸಿನಿಮಾ ಒಂದು ಕಾದಂಬರಿ ಓದಿದ ಅನುಭವವನ್ನು ನೀಡುವಂತಿದೆ. 80-90ರ ದಶಕದ ಚಿತ್ರಣ, ಬಾಲ್ಯದ ತರಲೆ, ತುಂಟಾಟ ಎಲ್ಲವೂ ಸಿನಿಮಾದಲ್ಲಿದೆ. ಲವ್, ಕಾಮಿಡಿ, ಎಮೋಷನ್ಸ್ ಎಲ್ಲವನ್ನೂ ಈ ಸಿನಿಮಾದಲ್ಲಿ ಕಾಣಬಹುದು. ನಾನು ಈ ಸಿನಿಮಾದಲ್ಲಿ ಮನು ಎಂಬ ಪಾತ್ರ ಮಾಡಿದ್ದೇನೆ. ಎಲ್ಲರಿಗೂ ತುಂಬಾ ಹತ್ತಿರವಾಗುವಂಥ ಒಳ್ಳೆಯ ಕಂಟೆಂಟ್ ಸಿನಿಮಾ ಮಾಡಿದ್ದೇವೆ’ ಎಂಬ ಭರವಸೆ ವ್ಯಕ್ತಪಡಿಸಿದರು.
Related Articles
Advertisement
“ವಿ ಎಸ್ ಎಂಟರ್‌ಟೈನ್ಮೆಂಟ್’ ಬ್ಯಾನರ್‌ನಲ್ಲಿ ರಾಜೇಶ್ ಭಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್, ಅಯಾನ ಅವರೊಂದಿಗೆ ಉಗ್ರಂ ಮಂಜು, ಸುಂದರ್, ಹರಿಣಿ, ದೀಪಕ್ ರೈ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಮೊದಲಾದವರು ಇತರ ಪ್ರಮುಖ ಪಾತ್ರ ಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಅರುಣ್ ಸುರೇಶ್ ಛಾಯಾಗ್ರಹಣ, ಪ್ರದೀಪ್ ಆರ್. ರಾವ್ ಸಂಕಲನವಿದೆ. ಚಿತ್ರಕ್ಕೆ ನಂದೀಶ್ ಟಿ. ಜಿ ಸಂಭಾಷಣೆ ಬರೆದಿದ್ದು, ವಾಸುಕಿ ವೈಭವ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಒಟ್ಟಾರೆ ತನ್ನ ಟೈಟಲ್, ಟೀಸರ್ ಮತ್ತು ಟ್ರೇಲರ್ ಮೂಲಕ ಒಂದಷ್ಟು ಭರವಸೆ ಮೂಡಿಸಿರುವ “ದೂರದರ್ಶನ’ ಹೇಗಿರಲಿದೆ ಎಂಬುದಕ್ಕೆ ಮಾರ್ಚ್ ಮೊದಲ ವಾರದಲ್ಲಿ ಉತ್ತರ ಸಿಗಲಿದೆ.