Advertisement
ಡೋರ್ ವೆ ಪುಲ್ ಅಪ್ ಸಾಧನವನ್ನು ಪುಲ್ ಅಪ್ ಮಾಡಲು ಬಳಸಬಹುದು. ಜಿಮ್ ಹೊರತು ಪುಲ್ ಅಪ್ ವ್ಯಾಯಾಮಕ್ಕೆ ಇತರ ಸ್ಥಳಗಳೂ ಅಷ್ಟು ಸರಿಹೊಂದುವುದು ಕಷ್ಟ. ಮನೆಯ ಗೋಡೆಗಳನ್ನು ಹಿಡಿದುಕೊಂಡು ಪುಲ್ ಅಪ್ ಮಾಡಬಹುದಾದರೂ ಅದು ಅಷ್ಟು ಕಂಫರ್ಟ್ ಎನಿಸುವುದಿಲ್ಲ. ಆದರೆ ಈ ಸಾಧನವನ್ನು ಬಾಗಿಲಿಗೆ ನೇತುಹಾಕಿ ಬಳಸಬಹುದು. ಅಷ್ಟೇ ಅಲ್ಲ, ಒಂದೇ ಜಾಗದಲ್ಲಿ ಅಳವಡಿಸದೆ ಅಗತ್ಯವಿರುವ ಜಾಗಗಳಿಗೆ ಇದನ್ನು ಬದಲಾಯಿಸಲು ಸಾಧ್ಯವಿದೆ. ಡೋರ್ ವೆ ಪುಲ…ಅಪ್ ಬಾರ್ ಬಳಸಿ ಪುಲ…ಅಪ್ ಮತ್ತು ಪುಷ್‌ಅಪ್ ಸಹ ಮಾಡಬಹುದಾಗಿದೆ. ಇದರಲ್ಲಿ ಹಿಡಿಕೆ ಇರುವುದರಿಂದ ಕೈಗಳನ್ನು ಅದರ ಮೇಲಿಟ್ಟು ಪುಷ್‌ಅಪ್ ಮಾಡಬಹುದು. ನೆಲದ ಮೇಲೆ ಪುಷ್‌ಅಪ್ ಮತ್ತು ಗೋಡೆಯ ಮೇಲೆ ಪುಲ್ ಅಪ್ ಮಾಡುವುದಕ್ಕಿಂತ ಈ ಸಾಧನವನ್ನು ಬಳಸಿಕೊಂಡು ವ್ಯಾಯಾಮ ಮಾಡುವುದು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಕೂಡ ಹೌದು.
ಒಟ್ಟಾರೆ ದೇಹಕ್ಕೆ ವ್ಯಾಯಾಮ ಸಿಗಲಿದೆ. ತೋಳು, ಭುಜ, ಬೆನ್ನಿನ ಭಾಗ, ಕಾಲು ಮತ್ತು ದೇಹದ ಸ್ನಾಯು ಭಾಗಗಳಿಗೆ ಸಹಾಯವಾಗಲಿದೆ.