Advertisement

ಯುವರಾಜ್‌, ರೈನಾಗೆ ಬಾಗಿಲು ಮುಚ್ಚಿಲ್ಲ: ಶಾಸ್ತ್ರಿ

08:26 AM Sep 15, 2017 | |

ಹೊಸದಿಲ್ಲಿ: ಸುರೇಶ್‌ ರೈನಾ ಮತ್ತು ಯುವರಾಜ್‌ ಸಿಂಗ್‌ ಅವರಿಗೆ ಇನ್ನೂ ಏಕದಿನ ಕ್ರಿಕೆಟ್‌ ಬಾಗಿಲು ಮುಚ್ಚಿಲ್ಲ ಎಂಬು ದಾಗಿ ಟೀಮ್‌ ಇಂಡಿಯಾ ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ. 

Advertisement

ಸುರೇಶ್‌ ರೈನಾ 2015ರ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಕೊನೆಯ ಸಲ ಏಕದಿನ ಪಂದ್ಯವನ್ನಾಡಿದ್ದರು. ಅನಂತರ ಅವರು ಟಿ-20 ಪಂದ್ಯಗಳಿಗಷ್ಟೇ ಆಯ್ಕೆಯಾಗತೊಡಗಿದರು. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ಟಿ-20 ಪಂದ್ಯವಾಡಿದ ಬಳಿಕ ಭಾರತ ತಂಡದಿಂದ ಬೇರ್ಪಟ್ಟಿದ್ದಾರೆ.

ಯುವರಾಜ್‌ ಸಿಂಗ್‌ ಇದೇ ವರ್ಷ ಇಂಗ್ಲೆಂಡ್‌ ಏಕದಿನ ಸರಣಿ ವೇಳೆ ಟೀಮ್‌ ಇಂಡಿಯಾಕ್ಕೆ ಭರ್ಜರಿ ಪುನರಾಗಮನ ಸಾರಿದ್ದರು. ಕಟಕ್‌ನಲ್ಲಿ 150 ರನ್‌ ಬಾರಿಸಿ ಮಿಂಚಿದ್ದರು. “ಫಿಟ್‌ನೆಸ್‌ ಹಾಗೂ ಈಗಿನ ಫಾರ್ಮ್ ಅತ್ಯುತ್ತಮ ಮಟ್ಟದಲ್ಲಿದ್ದರೆ, ಅಮೋಘ ಫೀಲ್ಡಿಂಗ್‌ ನಡೆಸುವಂತಿದ್ದರೆ ಅಂಥ ಆಟಗಾರರು ಖಂಡಿತವಾಗಿಯೂ ಆಯ್ಕೆಗೆ ಅರ್ಹರಾಗಿರುತ್ತಾರೆ. ಸತತವಾಗಿ ಗೆಲ್ಲಬೇಕಾದರೆ ಕ್ಷೇತ್ರರಕ್ಷಣೆ ಅತ್ಯುತ್ತಮವಾಗಿರಬೇಕು. ಯುವರಾಜ್‌, ರೈನಾ ಅವರಿಗೆ ಬಾಗಿಲು ಖಂಡಿತ ಮುಚ್ಚಿಲ್ಲ…’ ಎಂದು ಶಾಸ್ತ್ರಿ ಹೇಳಿದರು.

“2019ರ ವಿಶ್ವಕಪ್‌ಗೆ ಸಶಕ್ತ ತಂಡವೊಂದನ್ನು ಅಣಿಗೊಳಿಸು ವುದು ನಮ್ಮ ಯೋಜನೆ. ಇದಕ್ಕಾಗಿ ಶ್ರೀಲಂಕಾ ಸರಣಿಯಲ್ಲಿ ಎಲ್ಲ ಆಟಗಾರರನ್ನೂ ಆಡಿಸಲಾಯಿತು. ಈಗ ಆಸ್ಟ್ರೇಲಿಯ ಸರಣಿ ನಮ್ಮ ಮುಂದಿದೆ. ಇಲ್ಲಿಯೂ ಈ ಪ್ರಯೋಗ ಮುಂದುವರಿಯಲಿದೆ…’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next