Advertisement
ನಗರ ಸಭೆ ನೂತನ ಕಾರ್ಯಾಲಯದ ಕಟ್ಟಡವನ್ನು ಏಪ್ರಿಲ್ 26ರ ಬೆಳಗ್ಗೆ 11ಗಂಟೆಗೆ ಪೌರಾಡಳಿತ ಸಚಿವ ಎನ್.ನಾಗರಾಜ್ ಉದ್ಘಾಟಿಸಲಿದ್ದಾರೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ನಗರಸಭೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಟಿ.ವೆಂಕಟರಮಣಯ್ಯ ವಹಿಸಲಿದ್ದಾರೆ.
Related Articles
Advertisement
ಶಾಸಕ ಟಿ.ವೆಂಕಟರಮಣಯ್ಯ ನಿಗದಿತ ಸಮಯಕ್ಕೆ ಬಂದು ಹಿಂದಿರುಗಿದರು.
ಕಚೇರಿ ಮುಂದೆ ಪ್ರತಿಭಟನೆ: ಮತ್ತೆ ಸಂಜೆ 4 ಗಂಟೆ ಸಮಯಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಆಗಮಿಸಿ ಮತ್ತೆ ಸಂಜೆ 5 ಗಂಟೆವರೆಗೂ ಕಾದುಕುಳಿತರು ಸಚಿವರು ಬರಲಿಲ್ಲ, ನಗರಸಭೆ ಅಧ್ಯ ಕ್ಷರು, ಉಪಾಧ್ಯಾಕ್ಷರು, ಪೌರಾಯುಕ್ತರು, ಬಿಜೆಪಿ ಹಾಗೂ ಜೆಡಿಎಸ್ ನ ಕೆಲ ಸದಸ್ಯರು ಗೈರು ಹಾಜರಾದ್ದರು. ಇದರಿಂದ ಸಿಟ್ಟಿಗೆದ್ದ ಶಾಸಕ ಟಿ.ವೆಂಕಟರಮಣಯ್ಯ ತಮ್ಮ ಬೆಂಬಲಗರೊಂದಿಗೆ ನಗರಸಭೆ ನೂತನ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿ ಸಚಿವರ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೆ, ಶಾಸಕ ಟಿ. ವೆಂಕಟರಮಣಯ್ಯ ನಡೆಸಿದ್ದ ಉದ್ಘಾಟನೆ ಕಾರ್ಯಕ್ಕೆ ನಗರಸಭೆಯ ಅಧಿಕಾರ ಹಿಡಿದಿರುವ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗೈರಾಗಿ ದ್ದಲ್ಲದೆ, ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡದೆ ಹಳೆಯ ಕಟ್ಟಡದಲ್ಲಿಯೇ ಆಡಳಿತ ನಡೆಸುತ್ತಿದ್ದಾರೆ.
ನಗರಸಭೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬಹಿಷ್ಕಾರ : ನಾಲ್ಕನೇ ಬಾರಿಗೆ ನಿಗದಿಯಾಗಿರುವ ನಗರಸಭೆ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಬಹಿಷ್ಕರಿಸಲಿದ್ದಾರೆ. ಈ ಕುರಿತು ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಾ.16ರಂದು ಆಯೋಜಿಸಿದ್ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಯವರೆಗೂ ಕಾದು ಕುಳಿತರೂ, ಸಚಿವರು ಬರದೇ ಬೇಜವಾಬ್ದಾರಿ ತೋರಿದ್ದರು. ಇದರಿಂದ ಬೇಸತ್ತು ಪೌರಕಾರ್ಮಿಕನ ಕೈಯಲ್ಲಿ ನೂತನ ಕಟ್ಟಡದ ಉದ್ಘಾಟನೆ ಮಾಡಲಾಗಿದೆ. ಮತ್ತೂಮ್ಮೆ ನೂತನ ಕಟ್ಟಡ ಉದ್ಘಾಟನೆ ಮಾಡಿಸುವುದು ನಗರದ ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಮಾಡುವ ಅವಮಾನವಾಗುತ್ತದೆ. ಪದೇ ಪದೆ ಉದ್ಘಾಟನಾ ಕಾರ್ಯಕ್ರಮಗಳಿಗೆ ಜನರ ತೆರಿಗೆ ಹಣ ವ್ಯರ್ಥಮಾಡುವುದು ತರವಲ್ಲ. ಈ ಕಾರ್ಯಕ್ರಮದ ಹೊರತಾಗಿ ಬೇರೆ ಕಾರ್ಯಕ್ರಮಕ್ಕೆ ತಾವು ಹಾಜರಾಗುತ್ತೇವೆ. ಆದರೆ, ಏಪ್ರಿಲ್ 26ರಂದು ನಡೆಯುವ ನಗರಸಭೆ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರಿಂದ ಬಹಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.