Advertisement

ನಕಲಿ ಪದವಿ ಪಡೆದು ಯಾರೂ ಪ್ರಧಾನಿಯಾಗುವುದು ನಮಗೆ ಇಷ್ಟವಿಲ್ಲ: Kejriwal ಟ್ವೀಟ್‌ ವಾರ್

09:09 AM Apr 09, 2023 | Team Udayavani |

ನವದೆಹಲಿ: ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮತ್ತೊಮ್ಮೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

Advertisement

ಮಾ.30 ರಂದು ಆಮ್‌ ಆದ್ಮಿ ಪಕ್ಷ ಮೋದಿ ಅವರ ಬಗ್ಗೆ 11 ಭಾಷೆಯಲ್ಲಿ ನಾನಾ ಕಡೆ ಪೋಸ್ಟರ್‌ ಗಳನ್ನು ಹಾಕಿತ್ತು. ಈ ಪೋಸ್ಟರ್‌ಗಳಲ್ಲಿ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಬರೆದು ಅಂಟಿಸಲಾಗಿತ್ತು. ಇದಕ್ಕೂ ಮುನ್ನ ಕಳೆದ ತಿಂಗಳು “ಮೋದಿ ಹಟಾವೋ, ದೇಶ್ ಬಚಾವೋ” ಎನ್ನುವ ಪೋಸ್ಟರ್‌ ನ್ನು ಹಾಕಿತ್ತು.

ಇದಾದ ಬಳಿಕ ಆಪ್‌ ಹಾಗೂ ದೆಹಲಿ ಬಿಜೆಪಿ ನಡುವೆ ಪೋಸ್ಟರ್‌ ವಾರ್‌ ಉಂಟಾಗಿತ್ತು. ಇದಾದ ಬಳಿಕ ಆಮ್ ಆದ್ಮಿ ಪಕ್ಷದ ಭ್ರಷ್ಟ ಕಳ್ಳರು ಸದ್ದು ಮಾಡುತ್ತಿದ್ದಾರೆ” ಎಂದು ಪೋಸ್ಟರ್‌ ನಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರ ಫೋಟೋಗಳನ್ನು ಹಾಕಿ ಟ್ವಿಟರ್‌ ನಲ್ಲಿ ಪೋಸ್ಟರ್‌ ರಿಲೀಸ್‌ ಮಾಡಿತ್ತು.

ಇದೀಗ ಬಿಜೆಪಿ ಮುಖಂಡ ಹರೀಶ್ ಖುರಾನಾ  ಟ್ವೀಟ್‌ ವೊಂದನ್ನು ಮಾಡಿ ದೆಹಲಿ ಆಪ್‌ ಸರ್ಕಾರದ ಶೈಕ್ಷಣಿಕ ಕ್ರಾಂತಿಯನ್ನು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಬಂಡೀಪುರಕ್ಕೆ ಬಂದಿಳಿದ ಪ್ರಧಾನಮಂತ್ರಿ Narendra Modi

Advertisement

ಕೆಲವು ಮಕ್ಕಳು 80 ರಲ್ಲಿ ಮೂರು ಅಂಕಗಳನ್ನು ಗಳಿಸಿದ್ದಾರೆ. ಕೆಲವರು ಒಂಬತ್ತು ಅಂಕಗಳನ್ನು ಗಳಿಸಿದ್ದಾರೆ. ಪ್ರತಿ ವರ್ಷ, ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 9 ನೇ ತರಗತಿಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಇವರು ಶೈಕ್ಷಣಿಕ ಕ್ರಾಂತಿ ಬಗ್ಗೆ ಮಾತನಾಡುತ್ತಾರೆ. ಇದು”ದೆಹಲಿ ಸರ್ಕಾರಿ ಶಾಲೆಗಳ ಬಗ್ಗೆ ಸತ್ಯವೆಂದು, ಕೆಲ ಉತ್ತರ ಪತ್ರಿಕೆಗಳನ್ನು ಹಂಚಿಕೊಂಡು ಹರೀಶ್ ಖುರಾನಾ ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಕೇಜ್ರಿವಾಲ್‌ “ಕೆಲವು ವಿದ್ಯಾರ್ಥಿಗಳು ಓದುವಲ್ಲಿ ಕಳಪೆಯಾಗಿದ್ದರೆ, ನಾವು ಅವರಿಗೆ ಹೆಚ್ಚುವರಿ ತರಗತಿಗಳನ್ನು ಆಯೋಜಿಸುತ್ತೇವೆ. ಅವರಲ್ಲಿ ಒಬ್ಬರು ಭವಿಷ್ಯದಲ್ಲಿ ಭಾರತದ ಪ್ರಧಾನಿಯಾಗುತ್ತಾರೆ. ನಕಲಿ ಪದವಿ ಪಡೆದು ಯಾರೂ ಪ್ರಧಾನಿಯಾಗುವುದು ನಮಗೆ ಇಷ್ಟವಿಲ್ಲ ಎಂದು ಟ್ವೀಟ್‌ ಗೆ ಪ್ರೆತಿಕ್ರಿಯೆ ನೀಡಿ ಪರೋಕ್ಷವಾಗಿ ಮೋದಿಗೆ ಟಾಂಗ್‌ ಕೊಟ್ಟಿದ್ದಾರೆ.

ಕೇಜ್ರಿವಾಲ್ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿರುವುದು ಇದೇ ಮೊದಲಲ್ಲ. ‌ಈ ಹಿಂದೆ ಅಸ್ಸಾಂ ಭೇಟಿಯ ಸಂದರ್ಭದಲ್ಲಿ, ಕೇಜ್ರಿವಾಲ್ ಅವರು ಪ್ರಧಾನಿ ಮೋದಿಯವರ “ಪ್ರಧಾನಿ ಮೋದಿಯವರು ಶಿಕ್ಷಣ ಪಡೆದಿದ್ದರೆ, ಅವರು ನೋಟು ಅಮಾನ್ಯೀಕರಣಕ್ಕೆ ಕರೆ ನೀಡುತ್ತಿರಲಿಲ್ಲ ಮತ್ತು ಅಂತಿಮವಾಗಿ ರದ್ದಾದ ಕೃಷಿ ಕಾನೂನುಗಳನ್ನು ಸಹ ತರುತ್ತಿರಲಿಲ್ಲ” ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next