Advertisement

ಸರ್ಕಾರಿ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬಳಸಬೇಡಿ!

01:03 AM Jul 13, 2019 | Team Udayavani |

ನವದೆಹಲಿ: ಸರ್ಕಾರಿ ಅಧಿಕಾರಿಗಳಿಗೆ ಸೋಷಿಯಲ್ ಮೀಡಿಯಾ ಹಾಗೂ ಇಂಟರ್ನೆಟ್ ಬಳಕೆ ಕುರಿತು ಮಾರ್ಗಸೂಚಿಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ಸರ್ಕಾರದ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ, ಅಂದರೆ ಮೊಬೈಲ್ ಫೋನ್‌ ಅಥವಾ ಕಂಪ್ಯೂಟರುಗಳಲ್ಲಿ ಸೋಷಿಯಲ್ ಮೀಡಿಯಾ ಬ್ರೌಸ್‌ ಮಾಡದಂತೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಕಚೇರಿಗೆ ಸಂಬಂಧಿಸಿದ ಕಡತಗಳ ಕೆಲಸಗಳನ್ನು ಇಂಟರ್ನೆಟ್‌ಗೆ ಸಂಪರ್ಕವಿಲ್ಲದ ಸಿಸ್ಟಂನಲ್ಲೇ ಮಾಡುವಂತೆಯೂ ಸೂಚಿಸಿದೆ. ಈ ಬಗ್ಗೆ ‘ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಸರ್ಕಾರಿ ಅಧಿಕಾರಿಗಳೇ ಆಗಲಿ ಅಥವಾ ಗುತ್ತಿಗೆ ಆಧಾರದ ನೌಕರರೇ ಆಗಿರಲಿ, ಯಾರೂ ಅಧಿಕೃತ ಮಾಹಿತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಬಾರದು. ಯಾವುದೇ ಸರ್ಕಾರದ ಗೌಪ್ಯ ಮಾಹಿತಿಯನ್ನು ಖಾಸಗಿ ಕ್ಲೌಡ್‌ ಸರ್ವೀಸ್‌ಗಳಾದ ಗೂಗಲ್, ಡ್ರಾಪ್‌ಬಾಕ್ಸ್‌ ಹಾಗೂ ಐಕ್ಲೌಡ್‌ನ‌ಂತಹವುಗಳಲ್ಲಿ ಸಂಗ್ರಹಿಸಬಾರದು. ಒಂದು ವೇಳೆ ಮಾಹಿತಿ ಸೋರಿಕೆಯಾದರೆ ಸಂಗ್ರಹಿಸಿದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೂಚಿಸಲಾಗಿದೆ. 24 ಪುಟದ ಈ ಟಿಪ್ಪಣಿಯಲ್ಲಿ ಹಲವು ಮಹತ್ವದ ಅಂಶಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next