Advertisement

ಜಲ್ಲಿಕಟ್ಟು ಕ್ರೀಡೆಯನ್ನು ಜೂಜಿಗಾಗಿ ಬಳಸಕೂಡದು: ಮದ್ರಾಸ್‌ ಹೈಕೋರ್ಟ್‌

04:19 PM Mar 15, 2017 | udayavani editorial |

ಮಧುರೆ : ಜಲ್ಲಿಕಟ್ಟು ಕ್ರೀಡೆಯನ್ನು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕ್ರೀಡೆಯಾಗಿ ನಡೆಸಬೇಕೇ ಹೊರತು ಜೂಜು ಕ್ರೀಡೆಯಾಗಿ ಬಳಸಕೂಡದು ಎಂದು ಮದ್ರಾಸ್‌ ಹೈಕೋರ್ಟ್‌ ಪೀಠ ಜಲ್ಲಿಕಟ್ಟು ಸಂಘಟಕರಿಗೆ ಖಡಕ್‌ ಆಗಿ ಹೇಳಿದೆ.

Advertisement

ಪುದುಕೋಟೆ ಜಿಲ್ಲೆಯ ಕಳಮವೂರು ಗ್ರಾಮದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದಕ್ಕೆ ಅನುಮತಿ ನೀಡುವಂತೆ ಪೊಲೀಸರಿಗೆ ಆದೇಶಿಸಬೇಕೆಂದು ಕೋರಿ ಎಂ ರಾಜೇಂದ್ರನ್‌ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಜಸ್ಟಿಸ್‌ ಹುಲುವಾಡಿ ಜಿ ರಮೇಶ್‌ ಮತ್ತು ಟಿ ಎಸ್‌ ಶಿವಜ್ಞಾನಂ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಜಲ್ಲಿಕಟ್ಟು ಕ್ರೀಡೆಯನ್ನು ಜೂಜಿನ ಕ್ರೀಡೆಯಾಗಿ ಬಳಸಕೂಡದೆಂದು ಸ್ಪಷ್ಟಪಡಿಸಿತು.

ಅರ್ಜಿದಾರರ ಕೋರಿಕೆಯಂತೆ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದಕ್ಕೆ ಅನುಮತಿ ನೀಡುವಂತೆಯೂ, ಆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕೆಂದೂ ನ್ಯಾಯ ಪೀಠ ಪೊಲೀಸರಿಗೆ ಸೂಚನೆ ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next