Advertisement
ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಇರುವ ಪ್ರತಿಯೊಬ್ಬ ನಿವಾಸಿಯನ್ನು ಪರೀಕ್ಷೆಗೊಳಪಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಐದು ಲಕ್ಷ ರಾಪಿಡ್ ಟೆಸ್ಟ್ ಕಿಟ್ಸ್ ಗಳನ್ನು ವಿತರಿಸಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಸಮಪರ್ಕವಾದ ಪರೀಕ್ಷಾ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ರಾಪಿಡ್ ಟೆಸ್ಟ್ ಕಿಟ್ಸ್ ಹಂಚಲಾಗಿತ್ತು.
ರಾಜಸ್ಥಾನ ಸರ್ಕಾರ ರಾಪಿಡ್ ಟೆಸ್ಟ್ ಕಿಸ್ಟ್ ಬಳಕೆ ನಿಲ್ಲಿಸಿದೆ. ಕಾರಣ ರಾಪಿಡ್ ಟೆಸ್ಟ್ ಕಿಟ್ಸ್ ಫಲಿತಾಂಶದ ನಿಖರತೆ ಕೇವಲ ಶೇ.5ರಷ್ಟು ಎಂದು ತಿಳಿಸಿದೆ. ರಾಪಿಡ್ ಟೆಸ್ಟ್ ಕಿಟ್ಸ್ ಬಳಸಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ(ಎಸ್ ಎಂಎಸ್) ವೈದ್ಯರು ಕೋವಿಡ್ 19 ರೋಗಿಗಳನ್ನು ಪರೀಕ್ಷಿಸಿದಾಗ ಶೇ.95ರಷ್ಟು ಪ್ರಕರಣಗಳಲ್ಲಿ ನೆಗೆಟಿವ್ ವರದಿ ನೀಡಿತ್ತು! ಜೈಪುರದ ಎಸ್ ಎಂಎಸ್ ಆಸ್ಪತ್ರೆಯ ಮೈಕ್ರೊ ಬಯೋಲಜಿ ಮತ್ತು ಮೆಡಿಸಿನ್ ವಿಭಾಗ ಈ ಕಿಟ್ಸ್ ಬಳಸಿ ಕೋವಿಡ್ 19 ಸೋಂಕು ದೃಢಪಟ್ಟಿದ್ದ ನೂರು ರೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದರು. ಆದರೆ ವೈದ್ಯರಿಗೆ ಫಲಿತಾಂಶ ನೋಡಿ ಆಘಾತ ಆಗಿತ್ತು. ಅದಕ್ಕೆ ಕಾರಣ ಕೇವಲ ಐದು ಮಂದಿಗೆ ಮಾತ್ರ ಕೋವಿಡ್ 19 ಸೋಂಕು ಪಾಸಿಟಿವ್ ಎಂದು ಫಲಿತಾಂಶ ನೀಡಿ, ಉಳಿದ 95 ಜನರಿಗೆ ನೆಗೆಟಿವ್ ಎಂದು ಫಲಿತಾಂಶ ನೀಡಿತ್ತು!
Related Articles
Advertisement
ಮುಂದಿನ ಎರಡು ದಿನಗಳ ಕಾಲ ಎಲ್ಲಾ ರಾಜ್ಯಗಳು ರಾಪಿಡ್ ಟೆಸ್ಟ್ ಕಿಟ್ಸ್ ಗಳನ್ನು ಬಳಸಬೇಡಿ. ಈ ಬಗ್ಗೆ ನಾವು ವಿಸ್ತೃತವಾದ ವರದಿ ನೀಡುತ್ತೇವೆ. ಒಂದು ವೇಳೆ ರಾಪಿಡ್ ಟೆಸ್ಟ್ ಕಿಟ್ಸ್ ಗಳಲ್ಲಿ ದೋಷ ಇದೆ ಎಂದು ಪತ್ತೆಯಾದರೆ, ನಾವು ಕಂಪನಿ ಬಳಿ ಎಲ್ಲಾ ಕಿಟ್ಸ್ ಗಳನ್ನು ಬದಲಿಸಿ ನೀಡಲು ಕೇಳಿಕೊಳ್ಳುತ್ತೇವೆ ಎಂದು ಐಸಿಎಂಆರ್ ಎಪಿಡೋಮಿಯೋಲಜಿ ಮುಖ್ಯಸ್ಥ ಡಾ.ಗಂಗಾಖೆಡ್ಕರ್ ತಿಳಿಸಿದ್ದಾರೆ.