Advertisement

ಮನೆ ಸಿಕ್ಕ ಬಡವರು ಮನೆ ಮಾರಿ ಬೀದಿಗೆ ಬಂದು ನಿಲ್ಲಬೇಡಿ : ಸಚಿವ ಸೋಮಣ್ಣ

08:30 PM Dec 25, 2021 | Vishnudas Patil |

ವಿಜಯಪುರ : ರಾಜ್ಯದಲ್ಲಿ ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ ಸೂರಿಲ್ಲದ ಅರ್ಹ ಕಡು ಬಡವರಿಗೆ ಜ.25 ರೊಳಗೆ ಮನೆ ಹಂಚಿಕೆ ಮಾಡುವ ಗುರಿ ಇರಿಸಿದ್ಧೇವೆ. ಮನೆ ಸಿಕ್ಕವರು ಅವುಗಳನ್ನು ಮಾರಿಕೊಂಡು ಮತ್ತೆ ಬೀದಿಯಲ್ಲಿ ನಿರಾಶ್ರಿತರಾಗಿ ನಿಲ್ಲಬೇಡಿ ಎಂದು ವಸತಿ ಸಚಿವ ವಿ.ಸೋಮಣ್ಣ ಕಿವಿ ಮಾತು ಹೇಳಿದರು.

Advertisement

ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ವಿಜಯಪುರ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ತಮ್ಮ ಇಲಾಖೆಯಿಂಧ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ 5 ಲಕ್ಷ ಮನೆಗಳನ್ನು ನಿರ್ಮಿಸಿ, ಸೂರಿಲ್ಲದವರಿಗೆ ಹಂಚುವ ಗುರಿ ಇದೆ. ಇದರಲ್ಲಿ ರಾಜೀವಗಾಂಧಿ ವಸತಿ ಯೋಜನೆಯಲ್ಲಿ 6632 ಕೋಟಿ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ನಡೆದಿದೆ ಎಂದರು.

ಬಡವರ ಪರ ಕಾಳಜಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಳಗೇರಿಗಳ ಅಭಿವೃದ್ಧಿ ಮಾಡಲು ನನಗೆ ಸೂಚಿಸಿದ್ದಾರೆ. ಅವರ ಆಶಯದಂತೆ ನಾನು ವಿಜಯಪುರ ಜಿಲ್ಲೆಯಿಂದಲೇ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ ಎಂದರು.

ವಿವಿಧ ವಸತಿ ಯೋಜನೆಗಳಲ್ಲಿ ವಿಜಯಪುರ ಜಿಲ್ಲೆಗೆ 1285 ಮನೆಗಳನ್ನು ನೀಡಿದ್ದು, ರಾಜ್ಯದ ನಗರ ಪ್ರದೇಶದಲ್ಲಿ 3.40 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ. ವಿಜಯಪುರ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್ಪಿ ಅವರು ಅರ್ಹ ಫಲಾನುಭವಿಗಳಿಗೆ ಮನೆಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next