Advertisement
ಜನರಲ್ಲಿ ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ ಪರಿಣಾಮ ಅಲ್ಲಲ್ಲಿ ರಶ್ ತಪ್ಪಿಸಲು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಕೆಲವು ಅಂಗಡಿಗಳಲ್ಲಿ ಇಷ್ಟರ ನಡುವೆಯೂ ರಶ್ ಇರುವುದು ಕಂಡು ಬಂದಿದೆ.
ಉಡುಪಿ, ಕುಂದಾಪುರ, ಕಾರ್ಕಳ ಸಹಿತ ಜಿಲ್ಲೆಯ ಕೆಲವು ದಿನಸಿ, ತರಕಾರಿ ಅಂಗಡಿಗಳಲ್ಲಿ ಗ್ರಾಹಕರು ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುನ್ನೆ ಚ್ಚರಿಕೆ ಕ್ರಮವನ್ನು ಪಾಲಿಸುತ್ತಿರುವ ದೃಶ್ಯ ಕಂಡು ಬಂತು. ಗುಂಪು ಕಟ್ಟಿ ನಿಲ್ಲುವುದನ್ನು ತಪ್ಪಿಸಲು ಹೆಚ್ಚಿನ ಅಂಗಡಿಗಳ ಎದುರು ರಸ್ತೆಯಲ್ಲಿ ವೃತ್ತಗಳನ್ನು ರಚಿಸಿ ಅಥವಾ ಬಾಕ್ಸ್‌ಗಳನ್ನು ಮಾಡಿ ಗ್ರಾಹಕರು ಒಬ್ಬರ ಅನಂತರ ಮತ್ತೂಬ್ಬರು ಬಂದು ಖರೀದಿಸುವಂತೆ ವ್ಯವಸ್ಥೆ ಮಾಡಲಾಗಿದೆ.
Related Articles
ಉಡುಪಿ-ಮಣಿಪಾಲ ಸಹಿತ ವಿವಿಧ ಮೆಡಿಕಲ್ ಶಾಪ್‌ಗ್ಳಲ್ಲೂ ಇದೇ ರೀತಿಯ ಮಾರ್ಕಿಂಗ್ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಇದರಿಂದಾಗಿ ಖರೀದಿಗೆ ಬಂದವರ ಸಾಲು ಕಂಡರೂ ರಶ್ ಆಗಲಿಲ್ಲ.
Advertisement
ಮಾಲಕರಿಗೆ ಸೂಚನೆಪ್ರಧಾನಿ ನರೇಂದ್ರ ಮೋದಿಯ ಅವರು 21 ದಿನ ಲಾಕ್ ಡೌನ್ ಫೋಷಿಸಿದ ಬಳಿಕ ಅಗತ್ಯ ವಸ್ತುಗಳು ಸಿಗದೆ ಹೋಗಬಹುದೆಂಬ ಭಯದಲ್ಲಿ ಸಾಧ್ಯವಾದಷ್ಟು ವಸ್ತುಗಳನ್ನು ಖರೀದಿಸಲು ಜನರು ಮುಗಿಬೀಳುವುದು ಕಂಡು ಬಂದಿದೆ. ಈ ರೀತಿ ದಿನಸಿ ಅಂಗಡಿಗಳಲ್ಲಿ ಗುಂಪು ಸೇರುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಅಂಗಡಿ ಮಾಲಕರಿಗೆ ಸ್ಪಷ್ಟವಾಗಿ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಅದರಂತೆ ಮಾಲಕರು ಕಾರ್ಯಪ್ರವೃತ್ತರಾಗುತ್ತಿದ್ದಾರೆ. ವಾಹನಗಳ ಮೂಲಕ ಘೋಷಣೆ
ಜನ ಮನೆಯಿಂದ ಅಗತ್ಯ ಸಂದರ್ಭದಲ್ಲಿ ಮಾತ್ರ ಹೊರ ಬರುವಂತೆ, ಜನರ ನಡುವೆ 6 ಅಡಿ ಅಂತರ ಮತ್ತು ದಿನಸಿ ಅಂಗಡಿಯಲ್ಲೂ ಆರು ಅಡಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಮೈಕ್ ಮೂಲಕ ಘೋಷಣೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಉಡುಪಿ, ಮಣಿಪಾಲ ಪೇಟೆ ಬಿಟ್ಟು ಹೈವೇ ಭಾಗದಲ್ಲಿನ ಕೆಲವು ದಿನಸಿ ಅಂಗಡಿಗಳು ಮುಚ್ಚಿದ್ದು ಜನ ಪೇಟೆಗೆ ಹೋಗಿ ಅಗತ್ಯ ವಸ್ತು ಖರೀದಿಸುವಂತಾಗಿದೆ.