Advertisement

ಮಕ್ಕಳ ಆತ್ಮಹತ್ಯೆಗೆ ಪಾಲಕರೇ ಕಾರಣರಾಗದಿರಲು ಡಾ|ನಾ. ಸೋಮೇಶ್ವರ ಸಲಹೆ

03:31 PM Mar 14, 2022 | Team Udayavani |

ಕಲಬುರಗಿ:‌ಈ ನಡುವೆ ಮಕ್ಕಳ ಆತ್ಮಹತ್ಯೆಗಳಿಗೆ ಅವರ ಪಾಲಕರೇ ಕಾರಣರಾಗುತ್ತಿರುವುದು ಕಳವಳಕಾರಿ ಸಂಗತಿ. ಎಂದಿಗೂ ಮಕ್ಕಳ ಮೇಲೆ ತಮ್ಮ ಅಭಿಪ್ರಾಯ, ಒತ್ತಡ ಹೇರಬಾರದು ಎಂದು ಡಾ| ನಾ. ಸೋಮೇಶ್ವರ ಸಲಹೆ ನೀಡಿದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ಬಿ.ಎಸ್‌. ದೇಸಾಯಿ ಗೆಳೆಯರ ಬಳಗದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ ಎಲ್‌ಸಿ-ಪಿಯುಸಿ  ಪರೀಕ್ಷಾ ಸಿದ್ಧತೆ: ಕೊನೆಯ ಕ್ಷಣದ ಟಿಪ್ಸ್‌ ಕುರಿತ ದೂರದರ್ಶನ ಚಂದನ ವಾಹಿನಿಯ ಥಟ್ಟಂತ್‌ ಹೇಳಿ! ಖ್ಯಾತಿಯ ಕ್ವಿಜ್‌ ಮಾಸ್ಟರ್‌ ಡಾ| ನಾ. ಸೋಮೇಶ್ವರ ಸಂವಾದ ನಡೆಸಿ, ಎಸ್‌ಎಸ್‌ಎಲ್‌ ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ-ಪಿಯುಸಿ ಫಲಿತಾಂಶದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೆಳಸ್ಥಾನದಲ್ಲಿರಲು ಶಿಕ್ಷಕರ ಕೊರತೆಯೂ ಒಂದು ಕಾರಣ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆ ಮೇರೆಗೆ ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕಾತಿಗೆ ಶೀಘ್ರ ಮುಂದಾಗಬೇಕು ಎಂದರು. ಪ್ರಮುಖವಾಗಿ ಮಕ್ಕಳ ಬೌದ್ಧಿಕ ಮಟ್ಟದ ಜೊತೆ ಜೊತೆಗೆ ಶಿಕ್ಷಕರಷ್ಟೇ ಪಾಲಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳಿಗೆ ಮನೆಯಲ್ಲಿ ಪಾಠ ಪ್ರವಚನ ಮಾಡಿಸಬೇಕು. ಗಣಿತ ಮತ್ತು ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಗಳಲ್ಲ. ಸ್ಪರ್ಧಾ ಮನೋಭಾವ, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ತೊಡಗಿದ್ದರೆ ಎಂಥವುಗಳನ್ನು ಎದುರಿಸಬಹುದು ಎಂದು ಹೇಳಿದರು.

ಬಿ.ಎಸ್‌. ದೇಸಾಯಿ ಗೆಳೆಯರ ಬಳಗದ ಪ್ರಮುಖ ಬಿ.ಎಸ್‌. ದೇಸಾಯಿ, ವೈದ್ಯ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಡಾ| ಎಸ್‌. ಎಸ್‌. ಹಿರೇಮಠ ಇದ್ದರು. ಹಿರಿಯ ಪತ್ರಕರ್ತ ಭವಾನಿಸಿಂಗ್‌ ಠಾಕೂರ ಸ್ವಾಗತಿಸಿದರು. ದೇವಿಂದ್ರಪ್ಪ ಆವಂಟಿ ವಂದಿಸಿದರು. ಹಿರಿಯ-ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next