ಹೊಸದಿಲ್ಲಿ: ಸದನದಲ್ಲಿ ಯಾರೊಬ್ಬರು ಯಾರ ಜಾತಿ, ಧರ್ಮ ಉಲ್ಲೇಖೀಸಿ ಮಾತ ನಾಡದಿರಿ. ಒಂದೆ ವೇಳೆ ಹಾಗೇ ಮಾಡಿ ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಸಿದರು.
“ನಾನು ಕೆಳಜಾತಿಯವ ನೆಂಬ ಕಾರಣಕ್ಕೆ ಹಿಂದಿ ಭಾಷೆಯಲ್ಲಿನ ನನ್ನ ಪ್ರಾವಿಣ್ಯತೆಯ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆ ಮಾಡಿದ್ದಾರೆ,’ ಎಂದು ಕಾಂಗ್ರೆಸ್ ಸಂಸದ ಎ.ಆರ್. ರೆಡ್ಡಿ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, “ಜನರು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿಲ್ಲ,’ ಎಂದರು.
ರಾಷ್ಟ್ರ ಭಾಷೆಯ ಸ್ಥಾನ ನೀಡಿ: ಸಂಸ್ಕೃತ ಮತ್ತು ಹಿಂದಿಗೆ ರಾಷ್ಟ್ರ ಭಾಷೆಯ ಸ್ಥಾನ ನೀಡುವಂತೆ ಉತ್ತರ ಪ್ರದೇಶ ಬಿಜೆಪಿ ಸಂಸದ ಹಮೀರ್‌ಪುರ್ ಪುಷ್ಪೇಂದ್ರ ಸಿಂಗ್ ಚಾಂಡೆಲ್ ಸದನವನ್ನು ಒತ್ತಾಯಿಸಿದರು.
11,000 ಬೋಧಕ ಹುದ್ದೆಗಳು ಖಾಲಿ: ದೇಶದ ಕೇಂದ್ರೀಯ ವಿಶ್ವವಿದ್ಯಾನಿಲಯ ಗಳು, ಐಐಟಿ, ಐಐಎಂಗಳಲ್ಲಿ 11,000ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಉನ್ನತ ಶಿಕ್ಷಣ ಸಚಿವಾ ಲಯದ ಅಂಕಿ-ಅಂಶಗಳು ತಿಳಿಸಿವೆ.
ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ದೇಶದ 45 ಕೇಂದ್ರೀಯ ವಿಶ್ವ ವಿದ್ಯಾನಿಲಯಗಳಲ್ಲಿ 6,180 ಬೋಧಕ ಹುದ್ದೆಗಳು, ಐಐಟಿಗಳಲ್ಲಿ 4,502 ಬೋಧಕ ಹುದ್ದೆಗಳು ಹಾಗೂ ಐಐಎಂ ಗಳಲ್ಲಿ 493 ಬೋಧಕ ಹುದ್ದೆಗಳು ಖಾಲಿ ಇವೆ,’ ಎಂದು ತಿಳಿಸಿದರು.
2 ಸಾವಿರ ನೋಟು ಬೇಡ: ಇದೇ ವೇಳೆ, ರಾಜ್ಯಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ 2 ಸಾವಿರ ರೂ. ನೋಟುಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಎಟಿಎಂಗಳಲ್ಲಿ ಅದರ ಲಭ್ಯತೆ ಇಲ್ಲ. ಶೀಘ್ರ ದಲ್ಲಿಯೇ ಅದನ್ನು ವಹಿವಾಟಿನಿಂದ ಹಿಂಪ ಡೆಯಲಾಗುತ್ತದೆ ಎಂಬ ವದಂತಿ ಇದೆ. ಮೂರು ವರ್ಷಗಳ ಹಿಂದೆ ಆರ್‌ಬಿಐ ಕೂಡ ಅದರ ಮುದ್ರಣ ನಿಲ್ಲಿಸಿದೆ ಎಂದರು.