ಗದಗ: ಪ್ರಧಾನಿ ಮೋದಿ ಅವರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತದಿಂದ ಇಡೀ ವಿಶ್ವವೇ ಇದೀಗ ಭಾರತದತ್ತ ತಿರುಗಿ ನೋಡುತ್ತಿದೆ. 2004ರ ಲೋಕಸಭೆ ಚುನಾವಣೆ ಮಾದರಿಯಲ್ಲಿ ಮತ್ತೆ ದೇಶವನ್ನು ಕಳ್ಳ- ಕಾಕರ ಕೈಗಿಡದೇ, ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಗೆಲ್ಲಿಸಬೇಕು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ಸ್ಟಾರ್ ಪ್ರಚಾರಕ ತೇಜಸ್ವಿ ಸೂರ್ಯ ಹೇಳಿದರು.
ಜನರಿಂದ ಸೂರ್ಯನ ಹರ್ಷೋದ್ಘಾರ: ತಮ್ಮ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1 ಹೆಚ್ಚು ಸವೆದಿತ್ತು. ಈ ಕುರಿತು ನಮ್ಮ ಪೋಲಿಂಗ್ ಏಜೆಂಟ್ ವಿಚಾರಿಸಿದರೆ, ಏನ್ ಮಾಡೋದು ಸರ್ ಎಲ್ಲರೂ ಅದೇ ಗುಂಡಿ ಅದುಮುತ್ತಾರೆ. ಹೀಗಾಗಿ ಸವೆದಿದೆ ಎಂದು ಚುನಾವಣಾಧಿಕಾರಿ ಉತ್ತರ ನೀಡಿದ್ದಾರೆ. ಅದರಂತೆ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಗದ್ದಿಗೌಡರ ಕ್ರಮ ಸಂಖ್ಯೆಯೂ 1. ಅದು ಕೂಡ ಮತದಾನದಲ್ಲಿ ಸವಕಳಿಯಾಗಬೇಕು. ಇನ್ನುಳಿದವು ಹೊಸತಾಗಿಯೇ ಇರಬೇಕು ಎನ್ನುತ್ತಿದ್ದಂತೆ ನೆರೆದಿದ್ದ ಯುವಕರು ತೇಜಸ್ವಿ… ಸೂರ್ಯ.. ತೇಜಸ್ವಿ.. ಸೂರ್ಯ ಎಂಬ ಹರ್ಷೋದ್ಘಾರ ತೆಗೆದು, ಬೆಂಬಲ ಸೂಚಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ: ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಅರ್ಹತೆಯಿದ್ದರೆ, ಚಾಯ್ ಮಾರುವವರೂ ಪ್ರಧಾನಿಯಾಗಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಈ ಪರಿಸ್ಥಿತಿಯಿಲ್ಲ. ಕುಟುಂಬದಲ್ಲಿ ಯಾರಾದರೂ, ಪ್ರಧಾನಿ, ಸಂಸದರಾಗಿದ್ದರೆ ಮಾತ್ರ ಅವರ ಮಕ್ಕಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ದೊರೆಯುತ್ತದೆ ಎಂದು ವಾಗ್ಧಾಳಿ ನಡೆಸಿದರು.
ಗಾಂಧಿಯವರ ಕುಟುಂಬ 70 ವರ್ಷಗಳಿಂದ ಭಾರತವನ್ನು ಬಡತನದಲ್ಲಿ ಇರಿಸಿದೆ. ದೇಶದ ಬಡವರಿಗೆ ಕಾಂಗ್ರೆಸ್‌ನವರು ಒಂದೇ ಒಂದು ಶೌಚಾಲಯ ಕಟ್ಟಿಲ್ಲ. ಕಾಂಗ್ರೆಸ್ ಪಕ್ಷ ಜನರನ್ನು ಮತಗಳಂತೆ ನೋಡಿದೆ. ಮನುಷ್ಯರಂತೆ ಅಲ್ಲ ಎಂದು ಕುಟುಕಿದರು.
Advertisement
ಲಕ್ಕುಂಡಿ ಗ್ರಾಮದಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಚುನಾವಣೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಲಕ್ಕುಂಡಿ ಮತದಾರರೇ ನಿರ್ಣಾಯಕರು. ದಾನಚಿಂತಾಮಣಿ ಅತ್ತಿಮಬ್ಬೆ ನಾಡಿನಿಂದ ಮೋದಿಯವರಿಗೆ ಮತ ಬರಬೇಕು ಎಂದು ಮನವಿ ಮಾಡಿದರು.
Related Articles
Advertisement
ಹಿಂದಿನ ತಪ್ಪು ಮಾಡದಿರಿ: ದೇಶದಲ್ಲಿ ಮೊಬೈಲ್ ಹಾಗೂ ಇಂಟರ್‌ನೆಟ್ ಡಾಟಾ ಇಷ್ಟೊಂದು ಕಡಿಮೆ ಬೆಲೆಗೆ ದೊರೆಯಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಕಾರಣ. ಆದರೆ, 2004ರ ಚುನಾವಣೆಯಲ್ಲಿ ವಾಜಪೇಯಿ ಅವರನ್ನು ಸೋಲಿಸುವ ಮೂಲಕ ಭಾರತೀಯರು ತಮ್ಮನ್ನು ತಾವೇ ಸೋಲಿಸಿಕೊಂಡರು. ಅಂತಹ ತಪ್ಪು ಮತ್ತೆಂದೂ ಮಾಡಬಾರದು ಎಂದರು.
ಹಗರಣ-ಅಕ್ರಮದಲ್ಲಿ ಮುಳುಗಿದ್ದ ಕಾಂಗ್ರೆಸ್: ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಬೆಳಗಾಗುತ್ತಿದ್ದಂತೆ ಒಂದಿಲ್ಲೊಂದು ಹಗರಣ, ಅಕ್ರಮ ಸದ್ದು ಮಾಡುತ್ತಿತ್ತು. ಆದರೆ, ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆಡಳಿತದಲ್ಲಿ ಪಾರದರ್ಶಕತೆ ಬಂದಿದೆ. ಸರಕಾರದ ವಿವಿಧ ಯೋಜನೆ, ಸಹಾಯಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಬಡವರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್‌ಭವ, ಬಡವರ ಬದುಕು ಉನ್ನತೀಕರಿಸಲು ಉಜ್ವಲ ಗ್ಯಾಸ್ ವಿತರಣೆ, ನಿರು ದ್ಯೋಗ ನಿವಾರಣೆಗೆ ಮೇಕ್ ಇನ್ ಇಂಡಿಯಾ, ಮುದ್ರಾ, ಸ್ಟಾರ್ಟ್‌ಪ್‌ಗ್ಳ ಮೂಲಕ ಸಾಕಷ್ಟು ಉತ್ತೇಜನ ನೀಡಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಮೋದಿ ಸರಕಾರ ಕೈಗೊಂಡ ನಿರ್ಣಯಗಳು ಐತಿಹಾಸಿಕವಾಗಿವೆ ಎಂದು ತಿಳಿಸಿದರು.
ಲಕ್ಕುಂಡಿ ಬಿಜೆಪಿ ಮಂಡಳ ಅಧ್ಯಕ್ಷ ವಸಂತ ಮೇಟಿ, ಉಮೇಶಗೌಡ ಪಾಟೀಲ, ಎಸ್.ಬಿ. ಕಲಕೇರಿ, ಅಂದಪ್ಪ ತಿಮ್ಮಾಪುರ, ದತ್ತಣ್ಣ ಜೋಶಿ ಮಹೇಶ ಮುಸ್ಕಿನಬಾವಿ, ಮಹಮ್ಮದ್ ರಫೀಕ್ ಹುಬ್ಬಳ್ಳಿ, ಪ್ರೇಮಾ ಮಟ್ಟಿ, ರುದ್ರಪ್ಪ ಮುಸ್ಕಿನಬಾವಿ, ಅಜ್ಜಪ್ಪಗೌಡ ಪಾಟೀಲ ಉಪಸ್ಥಿತರಿದ್ದರು.
ರೋಡ್ ಶೋ
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ರವಿವಾರ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿದರು. ಗ್ರಾಮದ ಮುಖ್ಯರಸ್ತೆಯಿಂದ ಚಕ್ಕಡಿ ಏರಿದ ತೇಜಸ್ವಿ, ಪ್ರಮುಖ ಮಾರ್ಗಗಳಲ್ಲಿ ಮತಯಾಚನೆ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನ ಬಳಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು. ತೇಜಸ್ವಿ ಸೂರ್ಯ ಆಗಮಿಸಿದ್ದರಿಂದ ಉರಿ ಬಿಸಿಲಿನ್ನೂ ಲೆಕ್ಕಸಿದೇ, ಕಾರ್ಯಕರ್ತರು ಪಕ್ಷದ ಬಾವುಟಗಳೊಂದಿಗೆ ಮೋದಿ ಮೋದಿ ಜಯಘೋಷಣೆ ಹಾಕುತ್ತ ರ್ಯಾಲಿಯಲ್ಲಿ ಸಾಗಿದರು.