Advertisement

ಜನರ ಭಾವನೆಗಳ ಜೊತೆ ಆಟವಾಡಬೇಡಿ: ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ: ಉದ್ದವ್ ಠಾಕ್ರೆ

09:13 AM Apr 16, 2020 | Mithun PG |

ಮುಂಬೈ: ಕೆಲವು ಕಿಡಿಗೇಡಿಗಳು  ವದಂತಿಗಳನ್ನು ಹರಡಿದ್ದರಿಂದ ಬಾಂದ್ರಾದಲ್ಲಿ ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಮನೆಗೆ ತೆರಳಲು ಪಟ್ಟು ಹಿಡಿದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

Advertisement

ಲಾಕ್ ಡೌನ್ ಮೇ 3ರವರೆಗೂ ವಿಸ್ತರಣೆಯಾದ ಬೆನ್ನಲ್ಲೆ ಕೆಲವರು ಇಂದು ದೇಶದ ವಿವಿಧೆಡೆ ತುರ್ತು ರೈಲುಗಳು ಹೊರಡಲಿದೆ ಎಂದು ಸುದ್ದಿ ಹಬ್ಬಿಸಿದ್ದರಿಂದ ಬಾಂದ್ರಾ ಪಶ್ವಿಮ ರೈಲ್ವೇ ನಿಲ್ದಾಣದಲ್ಲಿ ಸಾವಿರಾರು ಜನ ಜಮಾಯಿಸಿ ತಮ್ಮನ್ನು ತಮ್ಮ ತಮ್ಮ ಊರುಗಳಿಗೆ ಮರಳಿಸುವಂತೆ ಆಗ್ರಹಿಸಿದರು. ಲಾಕ್ ಡೌನ್ ಉಲ್ಲಂಘಿಸಿ ರೈಲ್ವೇ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಜಮಾಯಿಸುತ್ತಿದ್ದಂತೆ ಪೊಲೀಸರು ಜನರ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಮಾತ್ರವಲ್ಲದೆ ಮುಂಬೈನಲ್ಲಿ ಸೋಂಕಿತರ ಸಂಖ್ಯೆ 1,600ಗಡಿ ದಾಟಿದ್ದರಿಂದ ಕಾರ್ಮಿಕರು ಸಾಮಾನ್ಯವಾಗಿ ಆತಂಕಕ್ಕಿಡಾಗಿದ್ದರು  ಎಂದರು.

ಅವರು ಬಡ ಜನರು. ಅವರ ಭಾವನೆಗಳ ಜೊತೆ ಆಟವಾಡಬೇಡಿ. ಮತ್ತೆ ಇಂತಹ ಘಟನೆಗಳು ಪುನಾರಾವರ್ತನೆಯಾದರೆ ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ನಾವು ನಿಮ್ಮೊಂದಿಗಿದ್ದೇವೆ, ನೀವು ಸುರಕ್ಷಿತರು. ನಾನು ಕೇಂದ್ರ ಸರ್ಕಾರದೊಂದಿಗೆ ಈ ಕುರಿತು  ಮಾತನಾಡುತ್ತೇನೆ ಎಂದು ತಿಳಿಸಿದರು.

ಹಣದ ಸಮಸ್ಯೆ ಮತ್ತು ಆಹಾರ ಪದಾರ್ಥಗಳಿಲ್ಲದ ಕಾರಣ ವಲಸೆ ಕಾರ್ಮಿಕರು ಮನೆಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತನ್ನು ನಿರಾಕರಿಸಿದ ಉದ್ದವ್ ಠಾಕ್ರೆ ಅಂತಹ ಯಾವುದೇ ಸಮಸ್ಯೆಗಳಿಲ್ಲ. ಕಾರ್ಮಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮಾಲೀಕರು, ಕಾರ್ಮಿಕರನ್ನು ಮನೆ ಬಿಟ್ಟು ತೆರಳುವಂತೆ ಸೂಚಿಸಿರುವ ಕೆಲವು ಪ್ರಕರಣಗಳು ವರದಿಯಾದವು.  ಆದರೇ ಅಂತಹ ಮಾಲಿಕರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next