Advertisement

ಗೆಣಸು ಕಡೆಗಣಿಸಬೇಡಿ

07:03 PM Oct 01, 2019 | Lakshmi GovindaRaju |

ಶಿಲಾಯುಗದ ಕಾಲದಲ್ಲಿ ಮನುಷ್ಯ ಗೆಡ್ಡೆ-ಗೆಣಸು ತಿಂದೇ ಬದುಕುತ್ತಿದ್ದುದು. ಆದರೆ, ಈಗ ಗೆಣಸನ್ನು ತಿನ್ನುವವರ ಸಂಖ್ಯೆ ಕಡಿಮೆ. ಗೆಣಸಲ್ಲಿ ಏನಿದೆ ಅಂಥಾದ್ದು ಅಂತ ಕಡೆಗಣಿಸಬೇಡಿ. ಆರೋಗ್ಯ ವೃದ್ಧಿಸುವ ಹತ್ತಾರು ಅಂಶಗಳು ಅದರಲ್ಲಿ ಅಡಗಿವೆ. ಜಪಾನೀಯರ ದೀರ್ಘಾಯುಷ್ಯದ ಹಿಂದೆ ಗೆಣಸಿನ ಪಾತ್ರವಿದೆ ಅನ್ನುತ್ತಾರೆ. ಯಾಕಂದ್ರೆ, ಇದು ಜಪಾನ್‌ನ ಬಹುಮುಖ್ಯ ಆಹಾರಗಳಲ್ಲಿ­ಒಂದು.

Advertisement

* ಎ ಜೀವಸತ್ವವನ್ನು ಅಧಿಕವಾಗಿ ಹೊಂದಿರುವ ಗೆಣಸು, ಕಣ್ಣಿನ ಆರೋಗ್ಯಕ್ಕೆ ಉತ್ತಮ.

* ಗೆಣಸಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಚರ್ಮದ ಮೇಲೆ ಸುಕ್ಕುಗಳು ಕಾಣಿಸುವುದಿಲ್ಲ.

* ದೇಹಕ್ಕೆ ಅಗತ್ಯವಾದ ವಿಟಮಿನ್‌ “ಸಿ’ಯ ಅರ್ಧದಷ್ಟನ್ನು, ಒಂದು ಕಪ್‌ ಬೇಯಿಸಿದ ಗೆಣಸಿನಿಂದ ಪಡೆಯಬಹುದು.

* ವಿಟಮಿನ್‌ ಬಿ, ಪೊಟ್ಯಾಷಿಯಂ, ಮೆಗ್ನಿàಷಿಯಂ ಅಧಿಕವಾಗಿವೆ.

Advertisement

* ಫೈಬರ್‌ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಗೆಣಸು, ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಆ ಮೂಲಕ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.

* ಗೆಣಸನ್ನು ಕಡಿಮೆ ಗ್ಲೈಸೆಮಿಕ್‌ ಆಹಾರ ಎನ್ನಲಾಗುತ್ತದೆ. ಅಂದರೆ, ಗೆಣಸು ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆ ಆಗುವುದಿಲ್ಲ. ಅದರಿಂದಾಗಿ, ದೇಹದ ತೂಕ ನಿಯಂತ್ರಣಕ್ಕೂ ಇದು ಸಹಕಾರಿ.

ಹೇಗೆ ಸೇವಿಸಬಹುದು?: ಗೆಣಸನ್ನು ಹಸಿಯಾಗಿ ತಿನ್ನಬಹುದು, ಬೇಯಿಸಿ ತಿನ್ನಬಹುದು ಅಥವಾ ಸುಟ್ಟು ಕೂಡಾ ತಿನ್ನಬಹುದು. ಆಲೂಗೆಡ್ಡೆ ಯಿಂದ ಫ್ರೆಂಚ್‌ ಫ್ರೈ ಮಾಡುವಂತೆ, ಗೆಣಸಿನ ಫ್ರೈ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next