Advertisement

ತಾಜ್‌ ಕೋಣೆಗಳಲ್ಲಿ ಹಿಂದೂ ವಿಗ್ರಹಗಳಿಲ್ಲ! ಭಾರತೀಯ ಪ್ರಾಚ್ಯವಸ್ತು ಇಲಾಖೆ ಸ್ಪಷ್ಟನೆ

12:45 AM May 14, 2022 | Team Udayavani |

ಆಗ್ರಾ: ವಿಶ್ವವಿಖ್ಯಾತ ತಾಜ್‌ ಮಹಲ್‌ ಮೂಲತಃ ಶಿವನ ದೇವಸ್ಥಾನ, ಅದರ ಹೆಸರು ತೇಜೋ ಮಹಾಲಯ ಎಂಬ ವಾದವೊಂದು ಜೋರಾಗಿ ನಡೆಯುತ್ತಿದೆ. ಈ ಬಗ್ಗೆ ಹಾಕಿದ್ದ ಅರ್ಜಿಯೊಂದನ್ನು ಅಲಹಾಬಾದ್‌ ಉಚ್ಚ ನ್ಯಾಯಾಲಯ ಇತ್ತೀಚೆಗಷ್ಟೇ ತಿರಸ್ಕರಿಸಿದೆ.

Advertisement

ಇದರ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಅಧಿಕಾರಿಯೊಬ್ಬರು ಪ್ರತಿ ಕ್ರಿಯಿಸಿ, ತಾಜ್‌ ಮಹಲ್‌ನೊಳಗಿನ ಮುಚ್ಚಿದ 22 ಕೋಣೆಗಳೊಳಗೆ ಹಿಂದೂ ದೇವರ ವಿಗ್ರಹಗಳಿಲ್ಲ.

ಹಾಗೆಯೇ ಆ ಕೋಣೆಗಳನ್ನು ಶಾಶ್ವತವಾಗಿ ಮುಚ್ಚಿಲ್ಲ. ಕಾಲಕಾಲಕ್ಕೆ ತೆಗೆದು ಕಟ್ಟಡದ ಸಂರಕ್ಷಣೆಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಂಡು ಬರಲಾಗಿದೆ ಎಂದು ಹೇಳಿದ್ದಾರೆ.

ತಾಜ್‌ ಮಹಲ್‌ ಮೂಲತಃ ಶಿವನ ದೇವಸ್ಥಾನ ಎಂಬ ವಾದವನ್ನೂ ಎಎಸ್‌ಐ ಮೂಲಗಳು ಅಲ್ಲಗಳೆದಿವೆ. ತಾಜ್‌ ಮಹಲ್‌ನ ನೆಲಮಾಳಿಗೆಯಲ್ಲಿ ಒಟ್ಟು 100 ಸಾರ್ವಜನಿಕ ಕೋಣೆಗಳಿವೆ. ಇವುಗಳೆಲ್ಲ ವಿವಿಧ ವಿನ್ಯಾಸಗಳನ್ನು ಹೊಂದಿವೆ. ಅವು ಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚ ಲಾಗಿದೆ. ಜನರು ಅಲ್ಲೆಲ್ಲ ಪ್ರವೇಶಿಸಿ ಹಾಳು ಮಾಡಬಾರದೆನ್ನುವುದೇ ಇದರ ಹಿಂದಿನ ಕಾಳಜಿ ಎಂದು ಅಧಿಕಾರಿ ಹೇಳಿದ್ದಾರೆ.

ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮೊಹಮ್ಮದ್‌ ಈ ಬಗ್ಗೆ ಪ್ರತಿ ಕ್ರಿಯಿಸಿ, ತಾನು ಅಲ್ಲಿ ಉಸ್ತುವಾರಿಯಾ ಗಿದ್ದಾಗ ಆ ಕೊಠಡಿಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಕಂಡಿಲ್ಲ ಎಂದಿದ್ದಾರೆ.

Advertisement

ತಾಜ್‌ ಜಾಗ ನಿಮ್ಮದಾಗಿದ್ದರೆ ಸಾಕ್ಷಿ ಕೊಡಿ
ತಾಜ್‌ ಮಹಲ್‌ ಜೈಪುರ ರಾಜ ಮನೆತನದ ಆಸ್ತಿ ಎನ್ನುವುದಕ್ಕೆ ಸಾಕ್ಷಿ ಕೊಡಿ ಎಂದು ಬಿಜೆಪಿ ಸಂಸದೆ ದಿವ್ಯಾ ಕುಮಾರಿಗೆ ಶಹಜಹಾನ್‌ ವಂಶಸ್ಥ ಯಾಕೂಬ್‌ ಹಬೀಬುದ್ದೀನ್‌ ತುಸಿ ಸವಾಲು ಹಾಕಿದ್ದಾರೆ. ನಿಮ್ಮಲ್ಲಿ ಒಂದು ತೊಟ್ಟು ರಜಪೂತ್‌ ರಕ್ತವಿದ್ದರೆ ನಿಮ್ಮ ಹೇಳಿಕೆಯನ್ನು ಸಾಬೀತು ಮಾಡಿ ಎಂದು ವೀಡಿಯೊ ಹೇಳಿಕೆಯಲ್ಲಿ ಅವರು ಕೆಣಕಿದ್ದಾರೆ. ಅಷ್ಟು ಮಾತ್ರವಲ್ಲ 14 ಮಂದಿ ರಜಪೂತ್‌ ರಾಣಿಯರನ್ನು ಮೊಘಲ ಸುಲ್ತಾನರು ಮದುವೆ ಯಾಗಿದ್ದರು. ತಮ್ಮ ಅಳಿಯಂದಿರಿಗೆ ರಜಪೂತರು ಜಾಗಗಳನ್ನು ದಾನವಾಗಿ ಕೊಡುವ ಪದ್ಧತಿ ಇಟ್ಟುಕೊಂಡಿದ್ದರು ಎಂದು ಹಬೀಬುದ್ದೀನ್‌ ಹೇಳಿದ್ದಾರೆ. ಗುರುವಾರ ತಾಜ್‌ ಮಹಲ್‌ ಬಗ್ಗೆ ಮಾತನಾಡಿದ್ದ ಜೈಪುರ ರಾಜ ಮನೆತನದ ಭವಿಷ್ಯದ ಯುವರಾಣಿ ದಿವ್ಯಾ ಕುಮಾರಿ, “ತಾಜ್‌ ಮಹಲ್‌ ಇರುವ ಜಾಗ ತಮ್ಮ ಪೂರ್ವಿಕರಿಗೆ ಸೇರಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ನನ್ನಲ್ಲಿವೆ’ ಎಂದಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next