ಹೊಸದಿಲ್ಲಿ: ದೇಶದ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯಬೇಕು. ಲಸಿಕೆಯ ಸುರಕ್ಷತೆಯ ವರ್ತುಲದಿಂದ ಯಾರೊಬ್ಬರೂ ಹೊರಗುಳಿಯಬಾರದು.
– ಇದು ದೇಶವಾಸಿಗಳಿಗೆ ಪ್ರಧಾನಿ ಮೋದಿ ನೀಡಿದ ಕರೆ. ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್’ನಲ್ಲಿ ಈ ಸಲಹೆ ನೀಡಿರುವ ಅವರು, ನಿಮ್ಮ ಸುತ್ತಮುತ್ತ ಲಸಿಕೆ ಪಡೆಯದವರಿದ್ದರೆ ಅವರನ್ನು ಲಸಿಕೆ ಕೇಂದ್ರಕ್ಕೆ ಕರೆದೊಯ್ಯಿರಿ.
ಎಲ್ಲರೂ ಸುರಕ್ಷಿತರಾಗಿರುವುದು ಮುಖ್ಯ. ಹಾಗೆಂದು, ಲಸಿಕೆ ಪಡೆದ ಮೇಲೆ ಮೈಮರೆಯದಿರಿ. ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ
ದುರ್ಗಾಪೂಜೆ, ದಸರಾ, ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಜನರು ಎಚ್ಚರ ತಪ್ಪದಿರಲಿ ಎಂಬ ಕಾಳಜಿಯಿಂದ ಮೋದಿ ಈ ಮಾತುಗಳನ್ನು ಆಡಿದ್ದಾರೆ.