ನವದೆಹಲಿ: ಕೋವಿಡ್ 19 ಲಸಿಕೆ ಅಭಿಯಾನದ ಮೊದಲ ಹಂತದಲ್ಲಿ ಎರಡು ಡೋಸ್ ಪಡೆದ ನಂತರ ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮತ್ತು 2ನೇ ಬಾರಿಯ ಲಸಿಕೆಯನ್ನು ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ದೇಶಾದ್ಯಂತ ಕೋವಿಡ್ 19 ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿದೆ. ಅದರರ್ಥ ಕೋವಿಡ್ 19 ಸಂಬಂಧಿಸಿದ ಮುನ್ನೆಚ್ಚರಿಕೆಯನ್ನು ಈಗಲೇ ನಿರ್ಲಕ್ಷಿಸಬಾರದು ಎಂದು ಹೇಳಿದರು.
ದೇಶದ ಜನರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ ಎರಡು ಹನಿ ಕೋವಿಡ್ ಲಸಿಕೆ ಪಡೆಯುವುದು ತುಂಬಾ ಮುಖ್ಯವಾಗಿದೆ. ಎರಡು ಹಂತದಲ್ಲಿ ಪಡೆಯುವ ಈ ಲಸಿಕೆಗೆ ಒಂದು ತಿಂಗಳ ಅಂತರ ಇರಬೇಕು ಎಂದು ತಜ್ಞರು ತಿಳಿಸಿದ್ದಾರೆ ಎಂದು ಶನಿವಾರ ಜಗತ್ತಿನ ಅತೀ ದೊಡ್ಡ ಲಸಿಕೆ ವಿತರಣಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ:KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ
“ ಮೊದಲ ಹಂತದ ಲಸಿಕೆ ಪಡೆದ ನಂತರ ಮಾಸ್ಕ್ ತೆಗೆದಿಟ್ಟು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಅಪಾಯ. ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೋವಿಡ್ ಸಂಪೂರ್ಣವಾಗಿ ಹೋಗುವವರೆಗೆ ಜಾಗ್ರತೆ ಅಗತ್ಯ, ಎರಡನೇ ಹಂತದ ಲಸಿಕೆ ಪಡೆದ ನಂತರ ದೇಹದೊಳಗೆ ರೋಗ ನಿರೋಧಕ ಶಕ್ತಿ ಅಭಿವೃದ್ದಿಯಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ನಮಗೆ ಔಷಧ ಮತ್ತು ಎಚ್ಚರಿಕೆ ಬಗ್ಗೆಯೂ ನಿಗಾವಹಿಸಬೇಕು. ಔಷಧ(ಲಸಿಕೆ) ಪಡೆದ ನಂತರ ಕೋವಿಡ್ ಇನ್ನು ಬರುವಂತಿಲ್ಲ ಎಂದು ನಿರ್ಲಕ್ಷ್ಯಭಾವನೆ ಬೇಡ, ಯಾಕೆಂದರೆ ದೇಹದಲ್ಲಿ ರೋಗನಿರೋಧ ಶಕ್ತಿ ಉತ್ಪತ್ತಿಯಾಗುವುದು ಎರಡನೇ ಬಾರಿ ಲಸಿಕೆ ಪಡೆದ ನಂತರ ಎಂಬುದಾಗಿ ವಿವರಿಸಿದ್ದಾರೆ.
ಇದನ್ನೂ ಓದಿ:ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಅವರಿಗೆ ಮತಿಭ್ರಮಣೆಯಾಗಿದೆ: ಶ್ರೀರಾಮುಲು
ನವದೆಹಲಿಯಲ್ಲಿ ಏಮ್ಸ್(ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ನ ಕಾರ್ಮಿಕ ಮನೀಶ್ ಕುಮಾರ್ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಸಮ್ಮುಖದಲ್ಲಿ ಕೋವಿಡ್ 19 ಲಸಿಕೆ ಪಡೆದ ಮೊದಲ ಭಾರತೀಯ ಎಂದು ವರದಿ ತಿಳಿಸಿದೆ.