Advertisement
ತಾಲೂಕು ಕಚೇರಿಗೂ ತೆರೆಳುವ ಮುನ್ನ ಕನ್ನಡ ಜಾಗೃತ ಭವನದಲ್ಲಿ ಸಭೆ ನಡೆಸಿದ ವಿವಿಧ ರಾಜಕೀಯ ಪಕ್ಷಗಳ, ಸಂಘಟನೆಗಳ ಮುಖಂಡರು, ಕ್ವಾರಂಟೈನ್ ಆರಂಭಿಸಿರುವ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ವಿರೋಧ ವ್ಯಕ್ತಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ತಹಶೀಲ್ದಾರ್‌ರಿಗೆ ಮನವಿ ನೀಡುವಂತೆ ನಿರ್ಧರಿಸಿದರು.
ತಾಲೂಕು, ಜಿಲ್ಲೆಯಲ್ಲಿಯೇ ಕ್ವಾರಂಟೈನ್ ಮಾಡುವುದು ಸರಿಯಿಲ್ಲ. ವಿದೇಶಗಳಿಂದ ಬರುವ ನಮ್ಮ ತಾಲೂಕಿನ ಜನರನ್ನು ಮಾತ್ರ ತಾಲೂಕಿನಲ್ಲಿ ಕ್ವಾರಂಟೈನ್ ಮಾಡಬೇಕು.
ಕೊರೊನಾ ಬರೀ ಆರೋಗ್ಯ ಸಮಸ್ಯೆ ಆಗದೇ ಸಾವಿರಾರು ಜನತೆ ಬದುಕಿನ ಸಮಸ್ಯೆಯಾಗಿದೆ ಎಂದು ಸಮಿತಿ ಮನವಿ ಮಾಡಿತು. ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಆಂಜನೇಯ ಇದ್ದರು.
Related Articles
ಸಭೆ ನಂತರ ತಾಲೂಕು ಕಚೇರಿಗೆ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲು ಆಗಮಿಸಿದ ವೇಳೆ, ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಇರುವುದರಿಂದ ಗುಂಪು ಸೇರದಂತೆ
ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು- ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಂತಿ ಕದಡುವ ಉದ್ದೇಶ ನಮಗಿಲ್ಲ ಎಂದು ಮುಖಂಡರು ಸಮಜಾಯಿಷಿ ನೀಡಿದರು. ನಗರ ಠಾಣೆ ಆರಕ್ಷಕ ಉಪ ನಿರೀಕ್ಷಕ ಸೋಮಶೇಖರ್, ಗುಂಪು ಗೂಡುವುದು ಕಾನೂನು ಬಾಹಿರ. ನಿಮ್ಮ ಅಭಿಪ್ರಾಯ ಗಳನ್ನು ಕಾನೂನು
ಅಡಿಯಲ್ಲಿ ತಿಳಿಸಿ ಎಂದರು.
Advertisement