Advertisement

ರಾಷ್ಟ್ರಧ್ವಜದ ಜೊತೆ ಕನ್ನಡ ಬಾವುಟ ಹಾರಿಸದೇ ಇರುವ ವಿಚಾರ ಗೊತ್ತಿಲ್ಲ: ಸಿ.ಟಿ. ರವಿ

01:01 PM Nov 01, 2019 | Mithun PG |

ಚಿಕ್ಕಮಗಳೂರು: ಕನ್ನಡ ಬಾವುಟ‌ ಕಳೆದ ಬಾರಿಯೂ ಹಾರಿಸಿಲ್ಲ, ಹಾಗಾಗಿ ಈ ಬಾರಿಯೂ ಹಾರಿಸಿಲ್ಲ. ನಾನು ನೋಡಿದ ಹಾಗೇ ಯಾವತ್ತು ಕನ್ನಡಧ್ವಜ ಹಾರಿಸಿಲ್ಲ. ಹಾರಿಸಿರುವ ಉದಾಹರಣೆಯೇ ನನಗೆ ಗೊತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ‌ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

Advertisement

ರಾಷ್ಟ್ರ ಧ್ವಜ‌ದ ಜೊತೆ ಕನ್ನಡ ಬಾವುಟ‌ ಹಾರಿಸದೇ ಇರುವ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ಆದೇಶದ ಬಗ್ಗೆ ನನಗೆ ಗೊತ್ತಿಲ್ಲ, ಇದುವರೆಗೂ ಇತಿಹಾಸ ನೋಡಿದ್ರೆ ಕನ್ನಡ ಧ್ವಜ ಹಾರಿಸಿಲ್ಲ. ಬಾವುಟ ಕಟ್ಟುವುದು ಬೇರೆ, ಹಾರಿಸುವುದು ಬೇರೆ. ಸರ್ಕಾರ ನಾಡಧ್ವಜ ಹಾರಿಸಬೇಡಿ ಎಂದು ಆದೇಶ ಮಾಡಿರುವುದು ನನಗೆ ಗೊತ್ತಿಲ್ಲ. ನಾನು ನಾಡಿಗೆ ಒಂದೇ ಧ್ವಜ ಅಂತಾ ಹೇಳಿಲ್ಲ, ಸಾಂಸ್ಕೃತಿಕವಾಗಿ ನಾನು ಕನ್ನಡ ಧ್ವಜವನ್ನು ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಗೆ ಟಾಂಗ್

ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹಿನ್ನೆಲೆ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಚಿವ ಸಿ.ಟಿ.ರವಿ, ಇನ್ನು ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗಿಲ್ಲ, ಅದು ಸುಪ್ರಿಂ ಅಂಗಳದಲ್ಲಿ ಇದೆ. ನಾವು ನಾಮಪತ್ರ ಹಾಕುವ ಮುಂಚೆ ಅಭ್ಯರ್ಥಿಯನ್ನು ಘೋಷಣೆ ಮಾಡ್ತೇವೆ. ನಾವು ಅಭ್ಯರ್ಥಿಗಳ ಆಧಾರದ ಮೇಲೆ ಚುನಾವಣೆ ಮಾಡಲ್ಲ ಎಂದರು.

ನಮ್ಮದು ಕೇಡರ್ ಬೇಸಡ್ ಪಾರ್ಟಿ

Advertisement

ನಮ್ಮದು ಕೇಡರ್ ಬೇಸಡ್ ಪಾರ್ಟಿ, ಸಂಘಟನೆ ಮೇಲೆ ಚುನಾವಣೆ ನಡೆಯುತ್ತೆ, ಕಾಂಗ್ರೆಸ್ ನವರ ಹಾಗೆ ಅಭ್ಯರ್ಥಿಗಳನ್ನು ನೆಚ್ಚಿಕೊಂಡು ಚುನಾವಣೆ ಮಾಡಲ್ಲ. ಕಾಂಗ್ರೆಸ್ ನದ್ದು ಅಭ್ಯರ್ಥಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ. ಈಗಾಗಲೇ ಪಕ್ಷದ ಒಳಗೆ ಚುನಾವಣೆಯ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next