Advertisement

ದೂರು ನೀಡಲು ಹಿಂಜರಿಯಬೇಡಿ

06:04 PM Feb 26, 2020 | Suhan S |

ಚನ್ನಪಟ್ಟಣ: ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳು ಲಂಚ ಹಾಗೂ ಬೇರೆ ವಿವಿಧ ರೀತಿಯಲ್ಲಿ ಸಾರ್ವಜನಿಕರನ್ನು ಶೋಷಣೆ ಮಾಡಿದರೆ, ಅಂಜಿಕೆಯಿಲ್ಲದೆ ದೂರು ನೀಡಬಹುದೆಂದು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್‌ ಠಾಣೆಯ ನಿರೀಕ್ಷಕ ಚಂದ್ರಶೇಖರ್‌ ತಿಳಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿ ಅಥವಾ ಹಾಗೂ ಸಿಬ್ಬಂದಿ ಲಂಚಕ್ಕಾಗಿ ಒತ್ತಾಯ ಹಾಗೂ ಅಲೆದಾಡಿಸುವುದಾಗಿ ಮಾಡಿದರೆ ಅಂಥವರ ವಿರುದ್ಧ ನಿರ್ದಕ್ಷಣ್ಯವಾಗಿ ದೂರು ನೀಡಿ ತಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳಬಹುದೆಂದರು.

ತಹಶೀಲ್ದಾರ್‌ ಸುದರ್ಶನ್‌ ಮಾತನಾಡಿ, ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳದ ಸಭೆ, ಕುಂದುಕೊರತೆ ಅಹವಾಲು ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ನಿವೇದನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಸಾರ್ವಜನಿಕರು ಕಂದಾಯ ಇಲಾಖೆ ಹಾಗೂ ನಗರಸಭೆಯ ಆಡಳಿತದ ವಿಚಾರಗಳ ಬಗ್ಗೆ ದೂರು ಸಲ್ಲಿಸಿದರು. ಶಿರಸ್ತೆದಾರ ಮಹ ದೇವಯ್ಯ, ಎಸಿಬಿ ಸಿಬ್ಬಂದಿ ನಂದೀಶ್‌ ಕುಮಾರ್‌, ನರಸಿಂಹ ಮೂರ್ತಿ ಹಾಗೂ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next