ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಮಾ.19 ರಿಂದ 20 ರವರೆಗೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ 3ನೆಯ ರಾಜ್ಯ ಅಧಿವೇಶನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಅನೇಕ ಭಾಷೆಗಳಿದ್ದರೂ ಸಾಹಿತ್ಯದ ಶಕ್ತಿಯಿಂದ ಸಂಘಟಿತವಾಗಿದೆ. ಭಾಷೆಯು ಸಂಘಟನೆಗೆ ಕೇಂದ್ರವಾಗಿದ್ದರಿಂದ ಇಂದು ಭಾರತಾಂಬೆಯ ಕೊರಳಿಗೆ ವಿವಿಧ ಪುಷ್ಪಗಳ ಮಾಲೆಯಂತೆ ಕಂಗೊಳಿಸಿದೆ. ಇದು ದೇಶದ ಹಿರಿಮೆ ಗರಿಮೆ ಜತೆಗೆ ಏಕತೆಗೆ ಕಾರಣವಾಗಿದೆ ಎಂದು ಹೇಳಿದರು.
ಯುವಕರು ಇಂದು ರಾಷ್ಟ್ರೀಯ ಚಿಂತನೆಯೆಡೆಗೆ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಇಂದು ಗಾಂಧೀಜಿ ಬೇಡ, ಗಾಂಧೀಜಿ ಚಿತ್ರವಿರುವ ನೋಟು ಬೇಕು ಎಂಬಂತಾಗಿದೆ. ಅಂದರೆ ಬದುಕಿಗೆ ಬೇಕಾದ ಸಂಪತ್ತು ಬೇಕು, ದೇಶದ ಕಲ್ಪನೆ ಇತಿಹಾಸಗಳು ಬೇಡ ಎಂಬಂತಾಗಿದೆ. ಹಾಗಾಗಿ ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿ ಮೂಡಿಸುವಂತಾಗಬೇಕು ಎಂದರು.
ಈ ವೇಳೆ ಸಿ ಅಧಿವೇಶನದ ಸರ್ವಾಧ್ಯಕ್ಷರಾದ ಡಾ. ನಾ. ಮೊಗಸಾಲೆ, ಅಧಿವೇಶನ ಸಮಿತಿಯ ಕಾರ್ಯಾಧ್ಯಕ್ಷ ಎ. ಶಾಂತಾರಾಮ ಶೆಟ್ಟಿ, ಅಭಾಸಾಪ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾ.ವಿಜಯಕಯಮಾರ್ ನಿರ್ವಹಿಸಿದರು.
ಇದನ್ನೂ ಓದಿ:ಭಗವದ್ಗೀತೆಯನ್ನ ಬೇರೆ ಗ್ರಂಥಗಳಂತೆ ನೋಡಲು ಹೋಗಬೇಡಿ : ಪ್ರತಾಪ್ ಸಿಂಹ
ಪ್ರದರ್ಶನ ಮಳಿಗೆ ಉದ್ಘಾಟನೆ
ಮುಂಜಾನೆ 9.30 ಕ್ಕೆ ಪ್ರದರ್ಶನ ಮಳಿಗೆಯನ್ನು ಅಧಿವೇಶನ ಸಮಿತಿಯ ಕಾರ್ಯಾಧ್ಯಕ್ಷ ಸಿ.ಎ. ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಅಧಿವೇಶನದ ಸರ್ವಾಧ್ಯಕ್ಷರು – ಡಾ.ನಾ. ಮೊಗಸಾಲೆಯವರು ಉಧ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಮಾಧ್ಯಮ ಸಮಿತಿಯ ಪ್ರಮುಖರಾದ ಡಾ.ಭಾಸ್ಕರ ಹೆಗಡೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಪ್ರಮುಖರಾದ ರಘನಂದನ ಭಟ್, ನಾರಾಯಣ ಶೇವಿರೆ, ಪ್ರಕಾಶ್ ನಾರಾಯಣ ಚಾರ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
ವಸ್ತು ಪ್ರದರ್ಶನ ಮಳಿಗೆಯ ಸಂಚಾಲಕರಾದ ಕೃಷ್ಣ ಶೆಟ್ಟಿ, ಸದಸ್ಯರುಗಳಾದ ಸೀತಾರಾಮ ಶೆಟ್ಟಿ ಕೆಂಬರ್ಜೆಯವರು ಅತಿಥಿಗಳನ್ನು ಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರದರ್ಶನ ಮಳಿಗೆಯ ಸಹ ಸದಸ್ಯರುಗಳಾದ ರವಿಚಂದ್ರ ಗಣೇಶ್ ಚಾರ್ಮಾಡಿ ಗೋಪಾಲಕೃಷ್ಣ, ದಯಾನಂದ, ನಿರಂಜನ ಶೆಟ್ಟಿ, ಪವನ್, ಕೂಸಪ್ಪ, ವಸಂತ ಇಜಿಮಾನ್ ಉಪಸ್ಥಿತರಿದ್ದರು. ರಾಮಕೃಷ್ಣ ಚೊಕ್ಕಾಡಿ ನಿರೂಪಿಸಿದರು.