Advertisement
ಮಹಾರಾಷ್ಟ್ರದ ನಂದೂರ್‌ಬರ್‌ನಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿರುವ ಮೋದಿ, ಶರದ್ ಪವಾರ್ ಹೆಸರನ್ನು ಉಲ್ಲೇಖೀಸದೆಯೇ “40-50 ವರ್ಷಗಳಿಂದ ರಾಜಕಾರಣದಲ್ಲಿ ಸಕ್ರಿಯ ರಾಗಿರುವ ದೊಡ್ಡ ನಾಯಕರೊಬ್ಬರು ಬಾರಾಮತಿ ಯಲ್ಲಿ ಚುನಾವಣೆ ನಡೆದ ಬಳಿಕ ಏನಾಗಬಹುದು ಎಂದು ಚಿಂತೆಗೀಡಾಗಿದ್ದಾರೆ. ಜೂ.4ರ ಬಳಿಕ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳು ತಮ್ಮ ಉಳಿವಿಗಾಗಿ ಕಾಂಗ್ರೆಸ್ ಜತೆಗೆ ವಿಲೀನವಾಗಲಿವೆ ಎಂದೂ ಹೇಳಿಕೆ ನೀಡುತ್ತಾರೆ.! ಇದರ ಅರ್ಥ ಈ ನಕಲಿ ಎನ್‌ಸಿಪಿ ಮತ್ತು ನಕಲಿ ಶಿವಸೇನೆ ಕಾಂಗ್ರೆಸ್‌ಗೆ ವಿಲೀನವಾಗಲು ಈಗಾಗಲೇ ಯೋಜಿಸಿವೆ ಎಂಬುದಾಗಿದೆ. ಇಂಥ ಪಕ್ಷಗಳ ಜತೆಗಿದ್ದು ಕಾಂಗ್ರೆಸ್ ಜತೆಗೆ ವಿಲೀನವಾಗುವ ಬದಲು ಶಿಂಧೆ ಜತೆಗೆ ಬನ್ನಿ’ ಎಂದು ಆಹ್ವಾನಿಸಿದ್ದಾರೆ, ಹಿಂದೂ ವಿರೋಧಿ: ಕಾಂಗ್ರೆಸ್ ಹಿಂದೂಗಳ ನಂಬಿಕೆ ಅಂತ್ಯಗೊಳಿಸಲು ಪಿತೂರಿ ರೂಪಿಸಿದೆ. ರಾಷ್ಟ್ರದ ಬಗ್ಗೆ ಯಾವುದೇ ಚಿಂತೆಯೂ ಇಲ್ಲ. ಶೆಹಜಾದಾ (ರಾಹುಲ್)ನ ಸಲಹೆಗಾರ ದಕ್ಷಿಣ ಭಾರತದ ಜನರು ಆಫ್ರಿಕನ್ನ ರಂತೆ ಕಾಣುತ್ತಾರೆ ಎನ್ನುತ್ತಾರೆ. ಈಗ ಚರ್ಮದ ಬಣ್ಣದ ಮೇಲೆ ಯಾರು ಭಾರತೀಯರೆಂದು ಕಾಂಗ್ರೆಸ್ ನಿರ್ಧರಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.
ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನೊಂದಿಗೆ ನಿಕಟ ಸಂಬಂಧ ಹೊಂದಲಿವೆ. ಅಥವಾ ತಮ್ಮ ಪಕ್ಷಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಿದರೆ ಕಾಂಗ್ರೆಸ್ ಜತೆಗೆ ವಿಲೀನವಾಗಲೂಬಹುದು ಎಂದು ಶರದ್ ಪವಾರ್ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಮೋದಿ ವಾಗ್ಧಾಳಿ ನಡೆಸಿದ್ದಾರೆ. 4ನೇ ಹಂತ: ಇಂದು ಬಹಿರಂಗ ಪ್ರಚಾರ ಅಂತ್ಯ
10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು 4ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.